ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಚರ್ಮದ ಆರೈಕೆಯ ಗುಟ್ಟುಗಳ ಮಾಹಿತಿ

8:59 PM, Thursday, July 30th, 2015
Share
1 Star2 Stars3 Stars4 Stars5 Stars
(No Ratings Yet)
Loading...
chethana

ಮಂಗಳೂರು, : ಭಾರತದ ಮುಂಚೂಣಿಯ ಗಿಡಮೂಲಿಕೆಯ ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯ ಕಂಪನಿ ದಿ ಹಿಮಾಲಯ ಡ್ರಗ್ ಕಂಪನಿ ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಪ್ಯೂರ್ ಸ್ಕಿನ್ ಫೇಷಿಯಲ್ ಚಟುವಟಿಕೆಯನ್ನು ನಡೆಸಿತು. ಈ ಕಾರ್ಯಕ್ರಮವನ್ನು ಖ್ಯಾತ ಬ್ಯೂಟಿಷಿಯನ್ ಚೇತನಾ ನಡೆಸಿಕೊಟ್ಟಿದ್ದು ನಿಮ್ಮ ಚರ್ಮವನ್ನು ಮೃದು ಹಾಗೂ ಆಕರ್ಷಕಗೊಳಿಸುವ ವಿವಿಧ ಫೇಷಿಯಲ್ ತಂತ್ರಗಳನ್ನು ನಿರೂಪಿಸಿದರು.

ನಿಮ್ಮ ಚರ್ಮದ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಎಚ್ಚರಿಕೆ ವಹಿಸುವುದರಿಂದ ವಯಸ್ಸಾಗುವಿಕೆಯ ಪರಿಣಾಮ ಕಡಿಮೆಯಾಗುತ್ತದೆ ಮತ್ತು ನೀವು ಆಕರ್ಷಕವಾಗಿ ಕಾಣುತ್ತೀರಿ. ಚರ್ಮದ ಆರೈಕೆ ಎಂದರೆ ಕ್ಲೀನ್ಸಿಂಗ್, ಮಾಯಿಶ್ಚರೈಸಿಂಗ್ ಮತ್ತು ಟೋನಿಂಗ್ ಮಾತ್ರವಲ್ಲ. ಇದು ನಿಮ್ಮ ಒತ್ತಡದ ಕೆಲಸಗಳ ನಡುವೆ ನಿಮ್ಮ ಚರ್ಮದ ಉತ್ತಮಗೊಳಿಸಲು ಸಮಯ ವ್ಯಯಿಸುವುದು. ಇದನ್ನು ಮನಸ್ಸಿನಲ್ಲಿರಿಸಿಕೊಂಡು ಹಿಮಾಲಯ ‘ಅಟ್ ಹೋಮ್’ ಪ್ಯೂರ್ ಸ್ಕಿನ್ ಫೇಷಿಯಲ್ ಕಿಟ್ ಅನ್ನು ಬಿಡುಗಡೆ ಮಾಡಿದ್ದು ಇದು ನಿಮ್ಮ ಮನೆಯಲ್ಲಿಯೇ ನೀವು ಬಯಸಿದ ಚರ್ಮ ಪಡೆದುಕೊಳ್ಳಲು ನೆರವಾಗುತ್ತದೆ.

ಸೌಂದರ್ಯ ತಜ್ಞೆ ಹಾಗೂ ಸೇಂಟ್ ಆಗ್ನೆಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯೂ ಆಗಿರುವ ಚೇತನಾ, ‘ನಿಮ್ಮ ಚರ್ಮ ನಿಮ್ಮ ಆರೋಗ್ಯದ ನೈಜ ಪ್ರತಿಫಲನ, ನಾವು ನಡೆಸುವ ಒತ್ತಡದ ಜೀವನದಲ್ಲಿ ವಾರಕ್ಕೊಮ್ಮೆ ಡೀಪ್ ಕ್ಲೀನ್ಸಿಂಗ್ ಫೇಷಿಯಲ್‌ನಿಂದ ಚರ್ಮದ ಆರೈಕೆ ಮಾಡುವುದು ಮುಖ್ಯ. ಯುವತಿಯರು ಸಮಯದ ಒತ್ತಡದಲ್ಲಿರುತ್ತಾರೆ ಮತ್ತು ಹಿಮಾಲಯದ ‘ಅಟ್ ಹೋಮ್’ ಫೇಷಿಯಲ್ ಕಿಟ್ ನಿಮ್ಮ ಚರ್ಮಕ್ಕೆ ಆರೈಕೆ ಮತ್ತು ಪೋಷಣೆಯನ್ನು ಯಾವುದೇ ಸ್ಪಾ ಅಥವಾ ಬ್ಯೂಟಿ ಪಾರ್ಲರ್‌ಗೆ ಹೋಗದೆ ನೀಡುತ್ತದೆ’ ಎಂದರು.

ಈ ಕಾರ್ಯಕ್ರಮದಲ್ಲಿ 100 ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿ ಪರಸ್ಪರ ಹಿಮಾಲಯ ಹರ್ಬಲ್ಸ್ ಡೀಪ್ ಕ್ಲೀನ್ಸಿಂಗ್ ಶ್ರೇಣಿ ಬಳಸಿ ಫೇಷಿಯಲ್ಸ್ ನಿರ್ವಹಿಸಿದರು. ಆಯುರ್ವೇದದ ನೈಸರ್ಗಿಕ ವಿಜ್ಞಾನದಿಂದ ಉನ್ನತಗೊಂಡ ಹಿಮಾಲಯದ ಉತ್ಪನ್ನಗಳು ಚರ್ಮದ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ ಎಂದು ಸಾಬೀತಾಗಿದೆ. ಡೀಪ್ ಕ್ಲೀನ್ಸಿಂಗ್ ಫೇಷಿಯಲ್ ನಂತರ ಮಸಾಜ್‌ನಿಂದ ಅಶುದ್ಧತೆ, ರಂಧ್ರಗಳು ಮತ್ತು ಟಾಕ್ಸಿನ್‌ಗಳನ್ನು ನಿವಾರಿಸುವುದಲ್ಲದೆ ಚರ್ಮವನ್ನು ನವೋತ್ಸಾಹ ಮತ್ತು ಪುನರ್ ಯೌವನಯುಕ್ತವಾಗಿಸುತ್ತವೆ.
ಹಿಮಾಲಯ ಡ್ರಗ್ ಕಂಪನಿ ಕುರಿತು:

1930 ರಲ್ಲಿ ಶ್ರೀ ಎಂ.ಮನಾಲ್ ಬರ್ಮಾದ ಅರಣ್ಯಗಳಲ್ಲಿ ಸಂಚರಿಸುವಾಗ ಗಿಡಮೂಲಿಕೆಗಳ ಚಿಕಿತ್ಸೆಗಳ ಅನುಕೂಲಗಳನ್ನು ಕಂಡುಕೊಂಡರು. ಸಾಂಪ್ರದಾಯಿಕ ಆಯುರ್ವೇದದಲ್ಲಿ ಸಂಶೋಧನೆ ನಡೆಸಿದ ನಂತರ ಅವರು ತಮ್ಮ ಜೀವನವನ್ನು ವಿಶ್ವದ ಲಕ್ಷಾಂತರ ಮಂದಿಯ ಜೀವನ ಸುಧಾರಿಸುವ ಉತ್ಪನ್ನಗಳನ್ನು ಸೃಷ್ಟಿಸಲು ಮುಡುಪಾಗಿರಿಸಿದರು. ಇಂದು ಎಂಟು ದಶಕಗಳ ಗಿಡಮೂಲಿಕೆಗಳ ಸಂಶೋಧನೆಗಳ ನಂತರ ಹಿಮಾಲಯ ಜನರ ಜೀವನವನ್ನು ಉನ್ನತಗೊಳಿಸುವುದು ಮಾತ್ರವಲ್ಲ, ಪರಿಸರವನ್ನೂ ಉತ್ತಮಗೊಳಿಸಿದೆ. ಅವರ ‘ಅಡಿಯಿಂದ ಮುಡಿಯವರೆಗೆ’ ಉತ್ಪನ್ನಗಳ ಶ್ರೇಣಿಯಿಂದ ಹಿಮಾಲಯ ಪ್ರತಿನಿತ್ಯದ ರೋಗಗಳಿಗೆ ಸಮಗ್ರ ಪರಿಹಾರವನ್ನು ನೀಡುತ್ತದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English