ಮಂಗಳೂರು : ಪಾನೀರು ದಯಾಮಾತೆ ಇಗರ್ಜಿಯಲ್ಲಿ ಸ್ತ್ರೀ ಸಂಘಟನೆ ಪಾನೀರು ಘಟಕದ ಆಶ್ರಯದಲ್ಲಿ ಭಾನುವಾರ ಇಗರ್ಜಿ ಸಭಾಂಗಣದಲ್ಲಿ ಎರೆಹುಳ ಗೊಬ್ಬರ ಮತ್ತು ತಾರಸಿ ಕೈತೋಟಗಳ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾನೀರು ಇಗರ್ಜಿಯ ಧರ್ಮಗುರು ರೇ.ಪಾ|| ಡೆನ್ನಿಸ್ ಸುವಾರಿಸ್ ಕೃಷಿಗಳ ಬಗ್ಗೆ ಕಾರ್ಯಾಗಾರ ನಡೆಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸ್ತ್ರೀ ಸಂಘಟನೆಗೆ ಅಭಿನಂದಿಸಿದರು.
ಇಂದು ತರಕಾರಿ, ಹಣ್ಣುಗಳು ಕಾಣಲು ಮಾತ್ರ ಸುಂದರವಾಗಿದ್ದರೂ ವಿಷಯುಕ್ತವಾಗಿರುತ್ತವೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಮಾಹಿತಿ ಕಾರ್ಯಾಗಾರ ಉಪಯುಕ್ತ. ಸಂಪನ್ಮೂಲ ವ್ಯಕ್ತಿ ಡಾ|| ಹರೀಶ್ ಜೋಷಿ ಎರೆಹುಳ ಗೊಬ್ಬರ ವಿಷಯದಲ್ಲಿ ಮಾತನಾಡಿ ಮಾಹಿತಿ ನೀಡಿದರು ಹಾಗೂ ತಾರಸಿ ಕೃಷಿ ಬಗ್ಗೆ ಶ್ರೀ ಕೃಷ್ಣಪ್ಪ ಗೌಡ ಮಾತನಾಡಿ ಇದರ ಪ್ರಯೋಜನದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಪಾನೀರು ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಪ್ರಾಂಕಿ ಪ್ರಾಸಿನ್ಸ್ ಕುಟಿನ್ಹಾ, ಕಾರ್ಯದರ್ಶಿ ಪಿಲಿಫ್ ಡಿ’ಸೋಜ, ಸ್ತ್ರೀ ಸಂಘಟನೆಯ ಕಾರ್ಯದರ್ಶಿ ಶ್ರೀಮತಿ ಲೀನಾ ಡಿ’ಸೋಜ ವೇದಿಕೆಯಲ್ಲಿ ಹಾಜರಿದ್ದರು. ಅಧ್ಯಕ್ಷಿಣಿ ಶ್ರೀಮತಿ ಪ್ರೀಡಾ ಫೆರಾವೋ ಸ್ವಾಗತಿಸಿದರು. ಶ್ರೀಮತಿ ಎವುಲಿನ್ ಡೆಸ್ನಾ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English