ಮೂಡುಬಿದಿರೆ: ಇಲ್ಲಿಗೆ ಸಮೀಪದ ಪಾಲಡ್ಕದ ಪೂಪಾಡಿಕಲ್ಲು ಶ್ರೀ ನಾರಾಯಣಗುರು ಸಭಾ ಭವನದಲ್ಲಿ ನಡೆಯುತ್ತಿರುವ ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮೆಡಿಕಲ್‌ಕಾಲೇಜಿನರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ದ್ವಿತೀಯ ದಿನವಾದ ಅಗೋಸ್ತು 12 ರಂದು ಶೈಕ್ಷಣಿಕಕಾರ್ಯಕ್ರಮದಲ್ಲಿ ಮೂಡುಬಿದಿರೆಜೈನ ಪ್ರೌಢಶಾಲೆಯ ಶಿಕ್ಷಕ, ಸಂಪನ್ಮೂಲ ವ್ಯಕ್ತಿರಾಯೀರಾಜಕುಮಾರರು ನಾಣ್ಯ ಸಂಗ್ರಹದ ಪ್ರಾತ್ಯಕ್ಷಿಕೆ-ಮಾಹಿತಿಕಾರ್ಯಾಗಾರವನ್ನು ನಡೆಸಿಕೊಟ್ಟರು.
ತಮ್ಮ ೨೨೫ ನೇ ಕಾರ್ಯಾಗಾರದಲ್ಲಿಅವರು ವಿವಿಧ ಹವ್ಯಾಸಗಳ ಬಗೆಗೆ ತಿಳಿಸಿ ಕೆಟ್ಟ ಚಟಗಳಿಂದ ದೂರವಿಡುವಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಅಭಿವೃದ್ಧಿ ಪಡಿಸಿಕೊಳ್ಳುವದರೊಂದಿಗೆ ಜೀವನವನ್ನು ಮೇರು ಮಟ್ಟಕ್ಕೆಕೊಂಡೊಯ್ಯಬಹುದೆಂದರು.ನಮ್ಮದೇಶದ ಹಾಗೂ ವಿವಿಧ ದೇಶಗಳ ನಾಣ್ಯ ಹಾಗೂ ನೋಟುಗಳ ಪರಿಚಯ ಮಾಡಿಸಿಕೊಟ್ಟು ಅದರ ಸಂಗ್ರಹದಿಂದಾಗುವ ಸಾಕಷ್ಟು ಜ್ಞಾನ, ಲಾಭಗಳ ಪರಿಚಯ ಮಾಡಿಕೊಟ್ಟರು.
ಆಳ್ವಾಸ್ ಆಯುರ್ವೇದಕಾಲೇಜಿನಉಪನ್ಯಾಸಕಡಾ| ಸುಮಂತ್ ಶೆಣೈರವರುಕಾರ್ಯಕ್ರಮವನ್ನು ಆಯೋಜಿಸಿದ್ದರು.ಕಾಲೇಜಿನ ಶಿಬಿರಾರ್ಥಿ ಕು.ಸ್ನೇಹಾ ಸ್ವಾಗತಿಸಿ, ಕು.ಆತಿರಾ ಸೋಮನ್‌ರವರು ವಂದಿಸಿದರು.
Click this button or press Ctrl+G to toggle between Kannada and English