ರಾಘವೇಶ್ವರ ಶ್ರೀಗಳ ಮಾನಹಾನಿ ಪ್ರಕರಣಕ್ಕೆ ಖಂಡನೆ

9:20 PM, Monday, October 26th, 2015
Share
1 Star2 Stars3 Stars4 Stars5 Stars
(No Ratings Yet)
Loading...
Ragava

ವೇಣೂರು: ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು, ಶ್ರೀಗಳ ಮಾನಹಾನಿ ಹಾಗೂ ಪೀಠತ್ಯಾಗವನ್ನೇ ಗುರಿಯಾಗಿಟ್ಟುಕೊಂಡು ಮಾಡುತ್ತಿರುವ ಒಂದು ವ್ಯವಸ್ಥಿತ ತಂತ್ರವಾಗಿರುತ್ತದೆ ಎಂದು ಉಪ್ಪಿನಂಗಡಿ ಹವ್ಯಕ ಮಂಡಲದ ಅಧ್ಯಕ್ಷ ಬಾಲ್ಯಶಂಕರಭಟ್ ಮತ್ತು ಕಾರ್ಯದರ್ಶಿ ಅಶೋಕ್ ಕೆದ್ಲ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀಗಳ ಪರವಾಗಿದ್ದ ಶಿಷ್ಯ ಭಕ್ತಸಮೂಹದವರಿಗೆ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಶ್ರೀಗಳ ಪರವಾಗಿ ಸಿಐಡಿ ತನಿಖಾ ವೇಳೆ ಸಾಕ್ಷಿ ನುಡಿದ ವ್ಯಕ್ತಿಗಳು ಈಗ ಶ್ರೀಗಳ ವಿರುದ್ಧ ತಿರುಗಿ ಬಿದ್ದಿರುವುದು ವಿಚಿತ್ರವಾಗಿದೆ. ಮಠದ ಮುಖವನ್ನೇ ನೋಡದ ಮಂದಿ ತಾವು ಹವ್ಯಕ ಸಮಾಜದ ಮುಖಂಡರೆಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಾರೆ.

ಮಠದ ಆಡಳಿತ ವ್ಯವಸ್ಥೆಯ ಬಗ್ಗೆ, ಶ್ರೀಗಳ ಬಗ್ಗೆ ಅವಹೇಳನಕಾರೀ ಹೇಳಿಕೆ ನೀಡುತ್ತಿರುವುದು, ಫೇಸ್ ಬುಕ್, ವಾಟ್ಸ್ ಆಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳ ವಿರುದ್ಧ ತೀರಾ ವಿರುದ್ಧ ಅವಹೇಳನಕಾರೀ, ಕೀಳು ಅಭಿರುಚಿಯ ಬರಹಗಳನ್ನು ಪ್ರಕಟಿಸುವುದು, ವಿಷಾಧನೀಯ, ಉಪ್ಪಿನಂಗಡಿ ಹವ್ಯಕ ಮಂಡಲದಲ್ಲಿ ಹನ್ನೆರಡು ಹವ್ಯಕ ವಲಯಗಳಿದ್ದು, ಸುಮಾರು 3150ರಷ್ಟು ಹವ್ಯಕ ಮನೆಗಳು ಇರುತ್ತದೆ. 134 ಗುರುಕಾರರು, 600ಮಂದಿ ಶ್ರೀ ಕಾರ್ಯಕರ್ತರೂ ಶ್ರೀ ಮಠಕ್ಕೆ ನಿಷ್ಠರಾಗಿದ್ದು, ಸಂಘಟನೆಯಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಬೆರಳೆಣಿಕೆಯ ಕೆಲವೇ ಮಂದಿ ತಾವು ಹವ್ಯಕ ಮುಖಂಡರೆಂಬ ಸುಳ್ಳು ಹೇಳಿಕೆ ನೀಡುತ್ತಾ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳಿಗೆ, ಶ್ರೀಮಠದ ವಿರುದ್ಧ ಹೇಳಿಕೆ ನೀಡುವ ಇಂತಹವರ ಕೃತ್ಯವನ್ನು ಉಪ್ಪಿನಂಗಡಿ ಹವ್ಯಕ ಮಂಡಲವು ತೀವ್ರವಾಗಿ ಖಂಡಿಸುತ್ತದೆ. ದಿನಾಂಕ 25/10/2015ರಂದು ಪೆರಾಜೆಯ ಮಾಣಿ ಮಠದಲ್ಲಿ ನಡೆದ ಉಪ್ಪಿನಂಗಡಿ ಮಂಡಲದ ಸಭೆಯಲ್ಲಿ ಈ ಕುರಿತು ಖಂಡಾನಾ ನಿರ್ಣಯವನ್ನು ಕೈಗೊಂಡಿದ್ದು, ಸಮಾಜವು ಶ್ರೀಗಳ ವಿರುದ್ಧವಾದ ಸುಳ್ಳು ಸುದ್ದಿಗಳನ್ನು ನಂಬಬಾರದೆಂದು ಕಳಕಳಿಯಿಂದ ವಿನಂತಿಮಾಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English