ಹೆಗ್ಗಡೆಯವರ ಮೇಲೆ ಅವಹೇಳನಕಾರಿ ಪ್ರಚಾರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

7:59 PM, Friday, October 30th, 2015
Share
1 Star2 Stars3 Stars4 Stars5 Stars
(5 rating, 5 votes)
Loading...
Guruvayanakere samithi

ಬೆಳ್ತಂಗಡಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾಯನಕೆರೆ ನಾಗರಿಕ ಸೇವಾ ಸಮಿತಿ ಮತ್ತು ಸಮಾನಾಸಕ್ತ ಸಂಘಟನೆಗಳ ನಿಯೋಗವೊಂದು ಸಹಾಯಕ ಆಯುಕ್ತರಲ್ಲಿ ಭೇಟಿ ಮಾಡಿತು.

ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡದಂತೆ ಬೆಳ್ತಂಗಡಿ ಮುನ್ಸಿಫ್‌ಕೋರ್ಟಿನ ತಡೆಯಾಜ್ಞೆಯಿದ್ದರೂ ದಿನಕ್ಕೊಂದು ಹೊಸ ಸುಳ್ಳನ್ನು ಹರಡುತ್ತಿರುವ ನಾಗರಿಕ ಸೇವಾ ಟ್ರಸ್ಟ್, ಮತ್ತಿತರ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ನಿಯೋಗವು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. ರಾಜ್ಯದಲ್ಲಿ ಧರ್ಮಸ್ಥಳದ ಕೋಟ್ಯಾಂತರ ಭಕ್ತಾದಿಗಳಲ್ಲಿ ಕ್ಷೆಭೆಯುಂಟಾಗಿದೆ. ಇದು ಉಗ್ರ ಪ್ರತಿಭಟನೆಗೆ ತಿರುಗಬಹುದೆಂಬ ವಿಚಾರವನ್ನು ಸಹಾಯಕ ಆಯುಕ್ತರ ಗಮನಕ್ಕೆ ತರಲಾಯಿತು. ನಮ್ಮ ಮನವಿಯನ್ನು ಸ್ವೀಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಹೆಗ್ಗಡೆಯವರ ಮೇಲೆ ಅವಹೇಳನಕಾರಿ ಪ್ರಚಾರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English