ಸುಬ್ರಹ್ಮಣ್ಯ: ಬಹು ಭಾಷಾ ನಟ ಅರ್ಜುನ್ ಸರ್ಜ ಹಾಗೂ ಕುಟುಂಬಸ್ಥರು ಬುಧವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಹಾಗೂ ವಿಶೇಷ ಪೂಜೆ ಸಲ್ಲಿಸಿ ತೆರಳಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕನ್ನಡ ಬಹು ನಿರೀಕ್ಷಿತ ಚಲನಚಿತ್ರ ಗೇಮ್ ಇದೇ ತಿಂಗಳ 27 ರಂದು ರಾಜ್ಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ತಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು ಮನೀಷಾ ಕೊಯಿರಾಲ ನಾಯಕಿಯಾಗಿ ಅಭಿನಯಿಸಿದ್ದಾರೆ.ಖ್ಯಾತ ನಿರ್ಮಾಪಕ ಎ ಎಮ್ ಆರ್ ರಮೇಶ ಈ ಚಿತ್ರ ನಿರ್ಮಿಸಿದ್ದು ಸಹ ನಿರ್ಮಾಣದಲ್ಲಿ ದೇಶರಾಜ್, ಧನಂಜಯ ಸಹಕರಿಸಿದ್ದಾರೆ ಎಂದರು.
ಪಾತಕ ಲೋಕಕ್ಕೆ ಸಂಬಂಧಿಸಿ ವಿವಿಧ ವಿಚಾರ ಕೇಂದ್ರಿಕರಿಸಿ ರಚಿಸಿದ ಕಮರ್ಷಿಯಲ್ ಚಲನಚಿತ್ರ ಇದಾಗಿದೆ. ಈಗಾಗಲೇ ಅಟ್ಟಹಾಸ, ಸೈನೆಡ್ ಮುಂತಾದ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿರುವ ನಿರ್ಮಾಪಕರಿಂದ ಸಿದ್ದಗೊಂಡಿದೆ ಎಂದು ಹೇಳಿದರು. ಕನ್ನಡದಲ್ಲಿ ಈಗಾಗಲೇ 120 ಕ್ಕೂ ಮಿಕ್ಕಿದ ಚಲನಚಿತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದ ಅವರು ತುಳು ಚಿತ್ರರಂಗದ ಬಗ್ಗೆ ಕೇಳಿದ ಪ್ರಶ್ನೆಗೆ ತುಳು ಚಿತ್ರರಂಗ ಉತ್ತಮವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಹೊಸೋಳಿಗಮ್ಮ ಗುಡಿ ಮತ್ತು ಆದಿಸುಬ್ರಹ್ಮಣ್ಯ ದೇಗುಲಕ್ಕೆ ತೆರಳಿ ದೇವರ ದರುಶನ ಪಡೆದರು. ಈ ಸಂದರ್ಭ ಪತ್ನಿ ಆಶಾರಾಣಿ. ಪುತ್ರಿ ಐಶ್ವರ್ಯ, ಅತ್ತೆ ಗೀತಾ, ನಿರ್ಮಾಪಕರುಗಳಾದ ಎಎಮ್ ಆರ್ ರಮೇಶ್, ಸಹನಿರ್ಮಾಪಕರಾದ ಧನಂಜಯ, ದೇಶರಾಜ್, ದೇಗುಲದ ಶಿಷ್ಟಚಾರ ಅಧಿಕಾರಿ ವೆಂಕಟ್ರಾಜ್ ಎ. ಎಮ್ ಆರ್ ರಮೇಶ್, ತಿಮ್ಮಪ್ಪ ಪುತ್ತೂರು, ಪ್ರಸಾದ್, ರಮೇಶ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English