ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ನ ವಿರುದ್ಧ ದೌರ್ಜನ್ಯಕ್ಕೊಳಗಾದ ಅತ್ತಿಗೆಯಿಂದ ಕಮೀಷನರ್ ಅವರಿಗೆ ದೂರು ದಾಖಲು!

1:53 PM, Sunday, November 15th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Afil Yakub Sahadi

ಮಂಗಳೂರು : ಅಫಿಲ್ ಯಾಕೂಬ್ ಸಹದಿ, ಈ ಹೆಸರನ್ನು ನೀವು ಕೇಳಿರಬಹುದು. ಯಾಕೆಂದರೆ ಅಫಿಲ್ ಯಾಕೂಬ್ ಸಹದಿ ಮುಸ್ಲಿಂ ಸಮುದಾಯದ ಒಬ್ಬ ದೊಡ್ಡ ವಿದ್ವಾಂಸ. ಅವನು ಪ್ರವಚನ ಮಾಡಲು ನಿಂತ ಎಂದರೆ ಕೇಳುತ್ತಿದ್ದವರಿಗೆ ಇವನು ನಮ್ಮ ಸಂಬಂಧಿಯೊ, ಅಣ್ಣನೊ, ತಮ್ಮನೊ ಆಗಿದ್ದಲ್ಲಿ ಎಷ್ಟು ಒಳ್ಳೆಯದಿತ್ತು ಎಂದು ಅನಿಸದೇ ಇರಲಾರದು. ಅಷ್ಟು ಪಾಂಡಿತ್ಯ, ನಿರರ್ಗಳ ಮತ್ತು ಯಾರೂ ತಲೆದೂಗುವಂತಹ ವಾಕ್ ಪಟುತ್ವ. ಅಫಿಲ್ ಯಾಕೂಬ್ ಸಹದಿ ಕಳೆದ ಎಂಟು ವರ್ಷಗಳಿಂದ ಹರೇಕಳ ಬೈತಾರ್ ಜುಮಾಮಸೀದಿಯಲ್ಲಿ ಖತೀಬನಾಗಿ ಕೆಲಸ ಮಾಡುತ್ತಿದ್ದಾನೆ. ಎಂಟು ತಿಂಗಳ ಹಿಂದಷ್ಟೇ ಅವನನ್ನು ಎಸ್‌ಎಸ್‌ಎಫ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷನಾಗಿ ನೇಮಿಸಲಾಗಿದೆ. ಪೊಲೀಸ್ ಲೇನ್ ನಲ್ಲಿರುವ ಮುಸಲ್ಮಾನರ ಧಾರ್ಮಿಕ ಕೇಂದ್ರ ಸೇರಿ ಒಟ್ಟು ನಾಲ್ಕು ಮಸೀದಿಗಳಲ್ಲಿ ಅಫಿಲ್ ಯಾಕೂಬ್ ಸಹದಿಯ ಪ್ರವಚನಗಳು ನಿರಂತರವಾಗಿ ನಡೆಯುತ್ತದೆ. ದೇವರಿಗೆ ಹೆದರಿ, ಸತ್ತು ಸ್ವರ್ಗಕ್ಕೆ ಹೋದ ಮೇಲೆ ದೇವರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಹೀಗೆಲ್ಲ ಪ್ರವಚನಗಳಲ್ಲಿ ಘಂಟಾಘೋಷವಾಗಿ ಮಾತನಾಡುವ ಅಫಿಲ್ ಯಾಕೂಬ್ ಸಹದಿಯ ವೈಯಕ್ತಿಕ ಬದುಕನ್ನು ಅವನ ಅತ್ತಿಗೆಯ ಮಾತುಗಳಲ್ಲೇ ಕೇಳಿದ್ದರೆ ನಿಮಗೆ ಸಹದಿ ಬಗ್ಗೆನೆ ಅಸಹ್ಯ ಮೂಡಬಹುದು. ಮುಂದಿನ ಬಾರಿ ಅವನ ಪ್ರವಚನ ಕೇಳಲು ಹೋದರೆ ವಾಕರಿಕೆ ಬರಬಹುದು, ಯಾಕೆಂದರೆ ಸಹದಿ ಎದುರಿಗೆ ಧಾರ್ಮಿಕ ಪಾಠ ಹೇಳುವ ಪಂಡಿತನಾದರೆ, ಅಂತರಂಗದಲ್ಲಿ ಭಯಂಕರ ವ್ಯಾಘ್ರ ಸ್ವಭಾವ.

Asma

ನಾನು ಒಬ್ಬ ಧಾರ್ಮಿಕ ಭೋದಕನಾಗಿ ಹೇಳುವುದೆಲ್ಲಾ ಮುಸ್ಲಿಂ ಸಮುದಾಯದ ಅನುಯಾಯಿಗಳಿಗೆ, ಆದರೆ ಆ ತತ್ವಗಳನ್ನು ನಾನು ಮಾತ್ರ ಅನುಸರಿಸುತ್ತೇನೆ ಎಂದಲ್ಲ ಎಂದು ತೋರಿಸಿಕೊಟ್ಟಿದ್ದಾನೆ ಈ ಅಫಿಲ್ ಯಾಕೂಬ್ ಸಹದಿ. ಇದಕ್ಕೆ ಪೂರಕವಾಗಿ ಕೆಲವು ದಿನಗಳ ಹಿಂದೆ ಆಸ್ಮಾ ಎನ್ನುವ ಹೆಣ್ಣು ಮಗಳೊಬ್ಬಳು ನಮ್ಮ ಕಚೇರಿಗೆ ಬಂದಿದ್ದಳು. ಆಕೆಗೆ ಮೆಗಾ ಮೀಡಿಯಾ ಪತ್ರಿಕೆಯ ಬಗ್ಗೆ ವಿಶ್ವಾಸವಿತ್ತು ಅದಕ್ಕಾಗಿ ತನ್ನ ಪರಿಚಯದ ಹಲವರಲ್ಲಿ ಕಛೇರಿ ವಿಳಾಸಕ್ಕಾಗಿ ಅಲೆದಾಡಿ ಬಂದಿದ್ದಳು. ಆಕೆಯ ಜೊತೆ ಕೆಲವು ಆಕೆಯ ಸಂಭಂದಿಕರೂ ಬಂದಿದ್ದರು. ನನಗೆ ನನ್ನ ಗಂಡನ ಮನೆಯವರಿಂದ ವಿಪರೀತ ತೊಂದರೆ ಆಗುತ್ತಿದೆ ಸಾರ್, ನಾನು ಬದುಕುವುದೇ ಕಷ್ಟ, ನನಗೆ ನ್ಯಾಯ ಒದಗಿಸಿಕೊಡಿ ಎಂದು ವಿನಂತಿಸಿದಳು. ಏನು ತೊಂದರೆ ಎಂದು ಕೇಳಿದ್ದಕ್ಕೆ ನನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡಿಸಲಾಗುತ್ತದೆ, ನನ್ನನ್ನು ಕೊಲ್ಲಲು ನನ್ನ ಗಂಡನ ಮನೆಯವರು ಕತ್ತಿ ಹಿಡಿದು ಬರುತ್ತಾರೆ ಎಂದು ಹೇಳಿದಳು. ಅದಕ್ಕೆ ನಿಮ್ಮ ಗಂಡ ಏನು ಮಾಡುತ್ತಾರೆ ಎಂದು ನಾವು ಕೇಳಿದೆವು. ಏಕೆಂದರೆ ಯಾವನೇ ಗಂಡನಾದರೂ ತನ್ನ ಹೆಂಡ್ತಿಯ ಮೇಲೆ ಹಲ್ಲೆ ಅಥವಾ ದೌರ್ಜನ್ಯವಾದಾಗ ಆತ ಸುಮ್ಮನೆ ಕುಳಿತುಕೊಂಡರೆ ಆತ ಗಂಡನೇ ಅಲ್ಲ ಎನ್ನುವುದು ಸಾಮಾನ್ಯ ನಂಬಿಕೆ. ಅದಕ್ಕೆ ಆಸ್ಮಾ ಹೇಳಿದಳು ” ನನ್ನ ಗಂಡ ದುಬೈಯಲ್ಲಿ ಆಲ್-ಹೈಯರ್ ಎನ್ನುವ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೂವತ್ತು ಸಾವಿರ ರೂಪಾಯಿ ಸಂಬಳ ಬರುತ್ತದೆ. ಆದರೆ ಅವರು ನನಗೆ ಒಂದು ಪೈಸೆ ಕೂಡ ಕಳುಹಿಸುವುದಿಲ್ಲ. ಏನು ಹಣ ಕಳುಹಿಸಿದ್ದರೂ ಅದು ಅವರ ತಂದೆ, ತಾಯಿಗೆ ವಿನ: ನನಗೆ ಮತ್ತು ನನ್ನ ಮಕ್ಕಳಿಗೆ ಏನೂ ಇಲ್ಲ” ಎಂದು ಹೇಳಿದಳು. ನಿಮ್ಮ ಗಂಡನ ಮನೆಯವರ ಬಗ್ಗೆ ಎಂದು ಕೇಳಿದೆವು. ಅವಳು ಹೇಳುತ್ತಾ ಹೋದಳು, ನಾವು ಅವಳ ಹೇಳಿಕೆಯನ್ನು ಚಿತ್ರೀಕರಣ ಮಾಡುತ್ತಾ ಹೋದೆವು. ” ಅಡ್ಯಾರ್ ಸಮೀಪ ವಳಚ್ಚಿಲ್ ನಲ್ಲಿ ನನ್ನ ತಾಯಿ ಮನೆ ಇದೆ. ಒಟ್ಟು ನಾಲ್ಕು ಜನ ಮಕ್ಕಳಲ್ಲಿ ನಾನೇ ಕೊನೆಯವಳು. ನನ್ನ ತಂದೆ ನಾನು ಚಿಕ್ಕವಳಾಗಿದ್ದಾಗಲೇ ತೀರಿಕೊಂಡಿದ್ದಾರೆ. ನನಗೆ ಇಸುಬು ಬ್ಯಾರಿಯೆಂಬುವವರ ಮಗ ಅಬ್ದುಲ್ ರೆಹಮಾನ್ ಎಂಬುವವರೊಂದಿಗೆ ಮದುವೆ ಮಾಡಿಕೊಡಲಾಯಿತು. ಆರು ತಿಂಗಳ ತನಕ ನಾನು ಗಂಡ ಒಟ್ಟಿಗೆ ಅವರ ತಂದೆಯ ಮನೆಯಲ್ಲಿಯೇ ವಾಸಿಸುತ್ತಿದ್ದೆವು. ಆ ಬಳಿಕ ನನ್ನ ಗಂಡ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದರು. ಅದರ ಬಳಿಕ ನನಗೆ ತುಂಬಾ ಸಂಕಷ್ಟಗಳು ಪ್ರಾರಂಭವಾದವು. ನನ್ನ ಮಾವನಿಗೆ ಮೊದಲ ಹೆಂಡ್ತಿಯಿಂದ ಅಬ್ದುಲ್ ರೆಹಮಾನ್, ಝಬೈದಾ, ಉಮರ್ ಕುಂಞ ಮುಸ್ಲಿಯಾರ್ ಹಾಗೂ ಅಫಿಲ್ ಯಾಕೂಬ್ ಸಹದಿ ಎನ್ನುವ ಒಟ್ಟು ನಾಲ್ಕು ಜನ ಮಕ್ಕಳಿದ್ದಾರೆ. ಎರಡನೇ ಹೆಂಡತಿ ಫಾತಿಮಾ ಅವರಿಂದ ಬಸೀರ್, ಸುಲೈಮಾನ್, ಅಶ್ರಫ್, ಬಾಸಿತ್, ಅಬ್ದುಲ್ ಸಲಾಂ, ಕಾಸಿಂ ಹಾಗೂ ರವೂಪ್ ಎನ್ನುವ ಏಳು ಜನ ಮಕ್ಕಳಿದ್ದಾರೆ. ನನ್ನ ಗಂಡ ಮೂರು ವರ್ಷ ಬಿಟ್ಟು ದುಬೈಯಿಂದ ಬಂದಿದ್ದರು. ಅದರ ಬಳಿಕ ಆಗಾಗ ಹೋಗಿ ಬರುತ್ತಿದ್ದರು. ನನಗೊಂದು ಮಗು ಹುಟ್ಟಿತು. ಗಂಡ ಮತ್ತೆ ದುಬೈಗೆ ಹೋದ ಬಳಿಕ ನನಗೆ ಅತ್ತೆ, ಮಾವನಿಂದ ವಿಪರೀತ ಹಿಂಸೆ ಶುರು ಆಯಿತು, ಅವರ ಉಳಿದ ಗಂಡು ಮಕ್ಕಳ ಪತ್ನಿಯರಿಗೆ ಒಳ್ಳೆಯ ರೀತಿಯಲ್ಲಿ ನೋಡುತ್ತಿದ್ದರೂ ನನ್ನ ವಿಷಯ ಬಂದಾಗ ಏನೋ ಕೀಳಾಗಿ ನಡೆಯುತ್ತಿದ್ದರು. ನನಗೆ ಮತ್ತು ನನ್ನ ಮಗುವಿಗೆ ಬರಿ ನೆಲದ ಮೇಲೆ ಮಲಗುವಂತೆ ಹೇಳುತ್ತಿದ್ದರು. ಯಾವುದೇ ಚಾಪೆ, ಬೆಡ್ ಶೀಟ್ ಕೊಡುತ್ತಿರಲಿಲ್ಲ. ನಾನೇ ಮನೆಯ ಎಲ್ಲ ಕೆಲಸವನ್ನು ಮಾಡಬೇಕಿತ್ತು. ಅತ್ತೆ, ಮಾವ ಬೆಳಿಗ್ಗೆ ಎದ್ದು ಗದ್ದೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅದರಿಂದ ಅವರಿಗೆ ಮತ್ತು ಗದ್ದೆಯಲ್ಲಿ ಕೆಲಸ ಮಾಡುವ ಏಳೆಂಟು ಜನ ಕೂಲಿ ಕೆಲಸದವರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಹೀಗೆ ಎಲ್ಲವನ್ನು ನಾನೇ ನೋಡಿಕೊಳ್ಳಬೇಕಿತ್ತು. ಮನೆಯಲ್ಲಿ ಗ್ಯಾಸ್ ಇರಲಿಲ್ಲ. ಎಲ್ಲವನ್ನು ಒಲೆಯಲ್ಲಿ ಮಾಡಬೇಕಿತ್ತು. ವಿದ್ಯುತ್ ವ್ಯವಸ್ಥೆ ಕೂಡ ಇರಲಿಲ್ಲ. ಇನ್ನೂ ಮಹಿಳೆಯರಿಗೆ ಅಗತ್ಯವಾಗಿ ಬೇಕಾಗಿರುವ ಶೌಚಾಲಯವೇ ಅಲ್ಲಿರಲಿಲ್ಲ. ಆರು ಕೆಜಿ ಅನ್ನ ಬೇಯಿಸುವುದರಿಂದ ಹಿಡಿದು ಒಲೆಯಲ್ಲಿ ಹಾಲು ಕಾಯಿಸುವುದು ಮಾಡುವಾಗ ವಿಪರೀತ ಹಿಂಸೆ ಆಗುತ್ತಿತ್ತು. ಅದನ್ನು ಅನುಭವಿಸುವುದು ಎಂದರೆ ಅದೊಂದು ನರಕಯಾತನೆ. ಎಷ್ಟೋ ಸಲ ನಾನು ಹೊರಗೆ ಮಲಗಬೇಕಾಗುತ್ತಿತ್ತು. ಉಳಿದವರಿಗೆ ಮಂಚ ಇದ್ದರೆ ನಾನು ಇಷ್ಟು ಕೆಲಸ ಮಾಡಿದ ಬಳಿಕವೂ ನನಗೆ ಆರಾಮವಾಗಿ ಮಲಗಲು ಒಂದೇ ಒಂದು ತುಂಡು ವ್ಯವಸ್ಥೆಯೂ ಇರಲಿಲ್ಲ. ಎಲ್ಲರೂ ಉಂಡು ಹೋದ ಬಳಿಕ ನಾನು ಊಟ ಮಾಡಬೇಕಿತ್ತು. ಅನೇಕ ಬಾರಿ ಖಾಲಿ ಹೊಟ್ಟೆಯಲ್ಲಿ ಮಲಗಿದ್ದೇನೆ. ಅದಲ್ಲದೆ ನನ್ನ ಮಾವನಿಗೆ ಮಾಟ ಮಾಡುವ ಹುಚ್ಚು ಇದೆ. ಅವರಿಗೆ ತನ್ನ ಮೊಮಕ್ಕಳ ಮೇಲೆ ಇರುವಷ್ಟು ಪ್ರೀತಿಯ ಒಂದು ಚೂರು ಕೂಡ ನನ್ನ ಮಗನ ಮೇಲೆ ಇರಲಿಲ್ಲ. ನನ್ನ ಮಗ ಎಲ್ಲಿಯಾದರೂ ಅತ್ತರೆ ” ಅವನೇನು ಭಾಂಗೂ ಹಿಡಿಯುವುದು” ಎಂದು ಬೈಯುತ್ತಿದ್ದರು”

ಇಷ್ಟು ಹೇಳಿ ಆಸ್ಮಾ ಸ್ವಲ್ಪ ಹೊತ್ತು ಮೌನವಾಗಿ ಕುಳಿತುಕೊಂಡರು. ಅವರು ಒಳಗೊಳಗೆ ಅನುಭವಿಸಿದ್ದ ನೋವು ಅವರಿಗೆ ಮಾತ್ರ ಅರ್ಥವಾದಂತಿತ್ತು. ಇಷ್ಟು ತೊಂದರೆ ಕೊಡುತ್ತಿದ್ದ ಮಾವನ ಮನೆಯನ್ನು ಬಿಟ್ಟು ಗಂಡನಿಗೆ ಹೇಳಿ ಬೇರೆ ಮನೆ ಮಾಡಬೇಕಿತ್ತು ಎಂದು ನಾವು ಹೇಳಿದೆವು. ಆಸ್ಮಾ ಅದಕ್ಕೂ ಉತ್ತರ ಕೊಟ್ಟರು” ಇವರ ಉಪಟಳದಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಕೂಡ ಹಾಳಾಯಿತು. ನಂತರ ಒಂದು ದಿನ ಅಫಿಲ್ ಯಾಕೂಬ್ ಸಹದಿ ಸಹಿತ ಎಲ್ಲರೂ ಒಟ್ಟು ಸೇರಿ ನನ್ನನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಆ ನಂತರ ನನ್ನ ಗಂಡನಲ್ಲಿ ವಿನಂತಿಸಿ ನಾನೇ ದುಡಿದು ಮಾಡಿದ ನನ್ನಲ್ಲಿದ್ದ ಚಿನ್ನವನ್ನು ಮಾರಿ ಬಿ.ಸಿ.ರೋಡಿನಲ್ಲಿ ಮನೆಯನ್ನು ಖರೀದಿಸಿ ಅಲ್ಲಿ ವಾಸವಾಗಿದ್ದೆನು. ಆ ಸಂದಂರ್ಭದಲ್ಲೂ ಗಂಡನ ಮನೆಯವರು ಅಲ್ಲಿಗೆ ಬಂದು ಉಪದ್ರವ ಕೊಡುತ್ತಿದ್ದರು ಎಂದರು.

ಐದು ವರ್ಷಗಳ ಬಳಿಕ ಅಫಿಲ್ ಯಾಕೂಬ್ ಸಹದಿ ಒಂದು ದಿನ ನನಗೆ ನಂಬಿಸಿ ನಾವೂರಿನ ಗಂಡನ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅಲ್ಲಿ ಪಕ್ಕದಲ್ಲೇ ಇರುವ ೭ ಸೆಂಟ್ಸ್ ಸ್ಥಳದಲ್ಲಿ ಮನೆ ಕಟ್ಟಲು ಹೇಳುತ್ತಾನೆ. ಆ ಸ್ಥಳಕ್ಕೆ ಅಸ್ಮಾ ದುಡ್ಡು ಕೊಟ್ಟು ಹೇಗೋ ತನ್ನ ಹೆಸರಿಗೆ ಮಾಡಿಕೊಳ್ಳುತ್ತಾರೆ. ಆದರೆ ಇನ್ನಾದರೂ ಗಂಡನ ಮನೆಯವರು ಸರಿ ಹೋಗುತ್ತಾರೆ ಎಂದು ಅಂದುಕೊಂಡರೆ ಅಲ್ಲಿ ಮತ್ತೆ ಆಕೆಗೆ ಒಂದರ ಮೇಲೊಂದರ ಹಾಗೆ ಹಿಂಸೆಗಳು ಆರಂಭವಾಗುತ್ತದೆ. ಮನೆ ಕಟ್ಟಲು ಆರಂಭ ಮಾಡುತ್ತಿರುವಾಗಲೇ ಮನೆಯ ನೀರಿನ ಮತ್ತು ವಿದ್ಯುತ್ ಸಂಪರ್ಕವನ್ನು ಆಗಾಗ ಕಡಿತಗೊಳಿಸುತ್ತಾರೆ. ಹಣ ಕೊಟ್ಟು ಮನೆ ಕಟ್ಟಲು ತಂದಿದ್ದ ಕಲ್ಲುಗಳನ್ನು ಮಾವ ಇಸುಬು ಗಿರಾಕಿ ಹುಡುಕಿ ಬೇರೆಯವರಿಗೆ ಮಾರುತ್ತಾರೆ. ಮನೆಯ ಗೋಡೆಗಳಿಗೆ ಸುಣ್ಣ ಬಳಿದು ವಿರೂಪಗೊಳಿಸುತ್ತಾರೆ. ಅದಲ್ಲದೆ ಗಂಡನಿಗೆ ದೂರು ಕೊಟ್ಟು ಗಂಡ ಆಕೆಯ ಜೊತೆ ಮಾತನಾಡದ ಹಾಗೆ ಮಾಡಿದ್ದಾರೆ.” ಎನ್ನುತ್ತಾರೆ ಅಸ್ಮಾ.

ಆಸ್ಮಾನವರ ದುರಂತ ಕಥೆ ಇಲ್ಲಿಗೆ ಮುಗಿದಿಲ್ಲ. ಎಲ್ಲಿಯ ತನಕ ಅಂದರೆ ಈಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ಅಫಿಲ್ ಯಾಕೂಬ್ ಸಹದಿಯ ಕುಮ್ಮಕ್ಕಿನಿಂದ ಹೊರಗಿನ ಗಂಡಸರು ಇವಳ ಮನೆಗೆ ಬಂದು ಅಸಭ್ಯವಾಗಿ ವರ್ತಿಸುತ್ತಾರೆ. ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅಶ್ಲೀಲ ಸನ್ನೆಗಳನ್ನು ಮಾಡುತ್ತಾ ಆಸ್ಮಾ ಅವರ ಮರ್ಯಾದೆಗೆ ದಕ್ಕೆ ತರುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾವನಿಗೆ ಹೇಳಿದರೆ ಎಲ್ಲರೂ ಸೇರಿ ಇವಳನ್ನು ಮಾನಸಿಕ ಅಸ್ವಸ್ಥಳು ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಮನೆಯ ಹಿತ್ತಿಲಲ್ಲಿ ನೆಟ್ಟ ಬಾಳೆ ಗಿಡಗಳನ್ನು ಕಡಿಯುವುದು. ಹೀಗೆ ಅಸ್ಮಾಳನ್ನು ಚಿತ್ರಹಿಂಸೆ ನೀಡುವುದು ಮುಂದುವರಿದಿದೆ. ಇದೇನಾ ಧಾರ್ಮಿಕ ಪ್ರವಚನ ಮಾಡುತ್ತಾ ನಾಲ್ಕು ಜನರಿಗೆ ಒಳ್ಳೆಯದು ಭೋದಿಸುವ ಅಫಿಲ್ ಯಾಕೂಬ್ ಸಹದಿಯ ಮನೆಯ ಪರಿಸ್ಥಿತಿ.

ಅಸ್ಮಾ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಆ ಸ್ಥಳವನ್ನು ಮಾರಾಟ ಮಾಡಿ ಬೇರೆಲ್ಲಾದರೂ ಜೀವನ ಮಾಡಿ ಬದುಕಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗಂಡನ ಮನೆಯವರ ವಿರುದ್ದ ಅಸ್ಮಾ ಸೆಪ್ಟಂಬರ್ ತಿಂಗಳ ಮೂರನೇ ತಾರೀಕಿನಂದು ದೂರು ನೀಡುತ್ತಾರೆ. ಏಳನೇ ತಾರೀಕಿನಂದು ಅಫಿಲ್ ಯಾಕೂಬ್ ಸಹದಿ ಸಹಿತ ಗಂಡನ ಮನೆಯವರು ಇವಳ ಮನೆಗೆ ನುಗ್ಗಿ ಕತ್ತಿ ತೋರಿಸಿ ಈ ಜಾಗ, ಮನೆಯನ್ನು ಬೇರೆಯವರಿಗೆ ಮಾರಿ ಹೋದರೆ ಕೊಂದು ಬಿಡುತ್ತೇವೆ ಎಂದು ಹೆದರಿಸಿದ್ದಾರೆ. ಅಲ್ಲದೆ ಏಸಿಡ್ ಹಾಕಿ ಮುಖ ವಿರೂಪಗೊಳಿಸುತ್ತೆವೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ಕೋರ್ಟಿಗೆ ಹೋಗಿ ಮಾರುವುದರ ವಿರುದ್ದ ತಡೆ ತಂದಿದ್ದಾರೆ. ಇಂತಹ ಘಟನೆಗಳು ಯಾವ ಹೆಣ್ಣಿನ ಮೇಲೆ ಆದರೂ ಅದು ತಪ್ಪು ತಪ್ಪೇ. ಅದರಲ್ಲೂ ಹೊರಗಿನ ಪ್ರಪಂಚಕ್ಕೆ ಆದರ್ಶಪ್ರಾಯರಂತೆ ಕಾಣುವ ಅಫಿಲ್ ಯಾಕೂಬ್ ಸಹದಿಯಂತವರ ಮನೆಯಲ್ಲಿ ಅವರ ಕುಮ್ಮಕ್ಕಿನಿಂದ ನಡೆಯುತ್ತದೆ ಎಂದಾದರೆ ಇತನನ್ನು ಗೋಮುಖ ವ್ಯಾಘ್ರ ಎಂದು ಕರೆದರೂ ಅದು ಕಡಿಮೆ ಆದೀತು.

ಗಂಡನ ಮನೆಯಲ್ಲಿ ತನ್ನ ಮೇಲೆ ಇಷ್ಟು ನೀಚ ಕೃತ್ಯ ನಡೆಯುತ್ತಿರುವಾಗ ಅಲ್ಲಿ ಇರಲಾಗದೆ ಆಸ್ಮಾ ತನ್ನದೇ ಒಂದು ಪುಟ್ಟ ಗೂಡು ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದರು. ಅದಕ್ಕಾಗಿ ಶ್ರೀಧರವರ ಕಕ್ಕಿಂಜೆಯ ಫೈನಾನ್ಸ್ ನಿಂದ ೫೫ ಸಾವಿರ ಸಾಲ ಪಡೆದುಕೊಂಡಿದ್ದಾರೆ. ಇನ್ನೂ ಬೆಳ್ತಂಗಡಿಯಲ್ಲಿರುವ ಡೆಲ್ಮಾ ಸ್ಯಾನಿಟರಿಯಿಂದ ಏಳು ಸಾವಿರ ಮೌಲ್ಯದ ವಸ್ತುಗಳನ್ನು ಕಂತಿನ ರೂಪದಲ್ಲಿ ಖರೀದಿಸಿದ್ದಾರೆ. ಈಗ ಹಣದ ತಾಪತ್ರಯ ಇವರನ್ನು ಕಾಡುತ್ತಿದೆ. ಆದರೆ ಅತ್ತ ಅಫಿಲ್ ಯಾಕೂಬ್ ಸಹದಿ ವಿದೇಶಕ್ಕೆ ಹೋಗಿ ಮಂಗಳೂರಿನಲ್ಲಿ ಮಸೀದಿ ಕಟ್ಟಿಸುತೇನೆ, ಧನ ಸಹಾಯ ಮಾಡಿ ಎಂದು ಹೇಳಿ ಇಲ್ಲಿಯ ತನಕ 60ಲಕ್ಷ ಸಂಗ್ರಹಿಸಿದ್ದಾನೆ. ಆದರೆ ಯಾವುದೇ ಮಸೀದಿ ಕಟ್ಟಿಸುವುದು ಬಿಡಿ, ಆ ಹಣದಲ್ಲಿ ತನಗೊಂದು ವಿಶಾಲ ಸ್ವಂತ ಮನೆ ಮತ್ತು ರಿಜ್ಜ್ ಕಾರು ಖರೀದಿಸಿ ಶೋಕಿ ಮಾಡುತ್ತಿದ್ದಾನೆ. ಎಂಟು ಸಾವಿರ ಸಂಬಳ ಇರುವ ಒಬ್ಬ ವ್ಯಕ್ತಿ ಇಷ್ಟು ಲಕ್ಸುರಿಯಾಗಿ ಜೀವನ ಸಾಗಿಸಲು ಹೇಗೆ ಸಾಧ್ಯ ಎಂದು ಎಲ್ಲರೂ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ದೌರ್ಜನ್ಯ ನಡೆಸುತ್ತಿದ್ದರೂ ಅಫಿಲ್ ಯಾಕೂಬ್ ಸಹದಿ ತನಗೆ ಸಚಿವ ಯು.ಟಿ.ಖಾದರ್ ಅವರ ಬೆಂಬಲ ಇದೆ, ಆದ್ದರಿಂದ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಇನ್ನೂ ಮುಸ್ಲಿಂ ಸಂಘಟನೆಗಳಾದ ಎಸ್‌ಕೆಎಸ್‌ಎಸ್‌ಎಫ್ ಮತ್ತು ಎಸ್‌ಎಸ್‌ಎಫ್ ನಡುವೆ ಗಲಾಟೆ ಮಾಡಿಸಿ ತನ್ನ ಲಾಭ ನೋಡಿಕೊಳ್ಳುತ್ತಿದ್ದಾನೆ.

ಕೃಪೆ : ಮೆಗಾ ಮೀಡಿಯಾ ಪತ್ರಿಕೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English