- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲಾರಿ ಡಿಕ್ಕಿಹೊಡೆದು ಮಹಿಳೆಗೆ ಗಂಭೀರ ಗಾಯ

Badiyadka [1]

ಬದಿಯಡ್ಕ: ನೀರ್ಚಾಲು ಕೆಳಗಿನ ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ಲಾರಿಯೊಂದು ಡಿಕ್ಕಿಹೊಡೆದು ಮಹಿಳೆಯೋರ್ವೆ ಗಾಯಗೊಂಡ ಘಟನೆ ನಡೆದಿದೆ.
ಏತಡ್ಕ ನಿವಾಸಿ ಅಕ್ಕಮ್ಮ(50)ಗಾಯಗೊಂಡ ಮಹಿಳೆ.ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಶಿಕಿತ್ಸೆ ನೀಡಿದ ಬಳಿಕ ಕಾಸರಗೋಡು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಶನಿವಾರ ಬೆಳಿಗ್ಗೆ ಏತಡ್ಕದಿಂದ ಆಗಮಿಸಿದ ಅಕ್ಕಮ್ಮ ನೀರ್ಚಾಲು ಪೇಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬದಿಯಡ್ಕ ಭಾಗದಿಂದ ಆಗಮಿಸಿದ ಲಾರಿ ಎದು ಭಾಗದಿಂದ ಆಗಮಿಸುತ್ತಿದ್ದ ಕಾರೊಂದಕ್ಕೆ ಸೈಡ್ ನೀಡುತ್ತಿದ್ದಾಗ ನಿಯಂತ್ರಣ ತಪ್ಪಿ ಅಕ್ಕಮ್ಮರಿಗೆ ಡಿಕ್ಕಿಹೊಡೆದು ಬಳಿಕ ರಸ್ತೆ ಬದಿಯ ಮೋರಿಯನ್ನು ಕೆಡವಿ ನಿಂತಿದೆ.ಎದುರು ಭಾಗದಿಂದ ಬರುತ್ತಿದ್ದ ಕಾರು ರಾಂಗ್ ಸೈಡ್ ನಿಂದ ಬರುತ್ತಿದ್ದಾಗ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಲಾರಿ ರಸ್ತೆಯಿಂದ ಕೆಳಗೆ ಚಲಿಸಲ್ಪಟ್ಟಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಅಪಘಾತದ ರಭಸಕ್ಕೆ ಲಾರಿಯ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.