ಪೆರ್ಲ : ಕಾಸರಗೋಡು ಜೈವಿಕ ಜಿಲ್ಲೆಯಾಗಿದ್ದು, ಕಾಸರಗೋಡು ಗಿಡ್ಡ ತಳಿಯ ಗೋವನ್ನು ಆಧರಿಸಿ ಕೃಷಿಯನ್ನು ಮಾಡುತ್ತಿರುವ ಸಂಘಕ್ಕೆ ಹೆಚ್ಚಿನ ಮಹತ್ವವಿದೆ. ಕೃಷಿ ಕ್ಷೇತ್ರದ ಹೊಸ ಹೊಸ ಸಂಶೋಧನೆ ಮತ್ತು ತಂತ್ರಜ್ಜಾನವನ್ನು ತಳಮಟ್ಟದ ಕೃಷಿಕರಿಗೆ ತಲುಪಿಸಲು ಇಂತಹ ಕೃಷಿಕರ ಸಂಘ ಅತ್ಯಗತ್ಯ ಎಂದು ‘ಆತ್ಮ’ದ ಡೆಪ್ಯುಟಿ ಪ್ರೋಜೆಕ್ಟ್ ಡೈರೆಕ್ಟರ್ ಡಾ. ಜಯಪ್ರಕಾಶ್ ಲಾಡಾ ಹೇಳಿದರು.
ಅವರು ಇತ್ತೀಚೆಗೆ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಆರಂಭಗೊಂಡ ‘ಬಂಗಾರಿ’ ಮಂಜೇಶ್ವರ ಬ್ಲಾಕ್ ಫಾರ್ಮರ‍್ಸ್ ಎಕ್ಸ್ಟೆನ್ಶನ್ ಓರ್ಗನೈಸೇಶನ್‌ನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಸದಸ್ಯರಿಗೆ ಸಂಘಟನೆಯು ಮಾಡಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡುತ್ತಿದ್ದರು.
ಪೆರ್ಲ ಕ್ಷೀರೋತ್ಪಾಧಕ ಸಹಕಾರಿ ಸಂಘದ ನಿರ್ದೇಶಕ ಬಾಲಸುಬ್ರಹ್ಮಣ್ಯ ಸರ್ಪಮಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಕೃಷಿಕರಿಗೆ ಸರಕಾರದ ಸವಲತ್ತುಗಳನ್ನು ಹಾಗೂ ವಿವಿಧ ರೀತಿಯ ಕೃಷಿ ತರಗತಿಗಳನ್ನು ಈ ಸಂಸ್ಥೆಯ ಮೂಲಕ ನಡೆಸಿ ಕೃಷಿಕರಿಗೆ ಫಲಪ್ರದವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಲಾಕ್ ಪಂಚಾಯತು ಸದಸ್ಯೆ ಸಫ್ರೀನಾ, ಗ್ರಾಮಪಂಚಾಯತು ಸದಸ್ಯೆ ಮಲ್ಲಿಕಾ ರೈ, ಕೃಷಿ ಅಧಿಕಾರಿ ಮೀರಾ ಶುಭಾಶಂಶನೆಗೈದರು. ಕೇಶವಪ್ರಸಾದ ಕೂಟೇಲು ಪ್ರಾರ್ಥಿಸಿದರು. ಜಗದೀಶ್ ಬಿ. ಜಿ. ಸ್ವಾಗತಿಸಿ, ಸಂಘದ ಕಾರ್ಯದರ್ಶಿ ರಾಜೇಶ್ವರಿ ಧನ್ಯವಾದವಿತ್ತರು. ಉಮೇಶ್ ಕೆ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English