- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೋಲಿಯೋ ಲಿಸಿಕಾ ಕಾರ್ಯಕ್ರಮ ಯಶಸ್ವಿ

Kerala polio drops [1]

ಕಾಸರಗೋಡು: ಸಂಪೂರ್ಣ ಪೋಲಿಯೋ ಮುಕ್ತ ರಾಷ್ಟ್ರವಾಗಿಸುವ ಗುರಿಯೊಂದಿಗೆ ನಡೆಸಲಾದ ಪ್ರಸಕ್ತ ಸಾಲಿನ ಮೊದಲ ಪೋಲಿಯೋ ರೋಗ ಪ್ರತಿರೋಧ ಕಾರ್ಯಕ್ರಮದಂಗವಾಗಿ ಭಾನುವಾರ ಜಿಲ್ಲೆಯಾದ್ಯಂತ 5 ವರ್ಷಗಳಿಗಿಂತ ಕೆಳಗಿನ ಹರೆಯದ ಮಕ್ಕಳಿಗೆ ಲಸಿಕೆ ನೀಡಲಾಯಿತು.

ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಲಸಿಕೆ ವಿತರಣಾ ಕಾರ್ಯಕ್ರಮ ಸಂಜೆ5 ಗಂಟೆಯ ತನಕ ಯಶಸ್ವಿಯಾಗಿ ನಡೆಯಿತು.ಜಿಲ್ಲೆಯ 1997 ಬೂತ್ ಗಳಲ್ಲಿ ಲಸಿಕೆ ವಿತರಿಸಲಾಯಿತು.ಒಟ್ಟು 1,20,734 ಮಂದಿ ಮಕ್ಕಳಿಗೆ ಲಸಿಕೆ ನೀಡಲಾಗಿದೆಯೆಂದು ಪ್ರಾಥಮಿಕ ಅಂಕಿಅಂಶಗಳು ತಿಳಿಸಿವೆ.119 ಸಂಚಾರಿ ಬೂತ್ ಗಳ ಮೂಲಕವೂ ಲಸಿಕಾ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.ಬಸ್ ನಿಲ್ದಾಣ,ರೈಲು ನಿಲ್ದಾಣ,ಅಂಗನವಾಡಿ,ಶಾಲೆಗಳು,ಕ್ಲಬ್‌ಗಳು,ಗಡಿ ಪ್ರದೇಶದ ವಿಶೇಷ ಕೇಂದ್ರಗಳು,ಜಿಲ್ಲೆಯ 44 ಪ್ರಾಥಮಿಕ ಆರೋಗ್ಯ ಕೇಂದ್ರಗಳು,ಎಂಟು ಸಾಮೂಹಿಕ ಆರೋಗ್ಯ ಕೇಂದ್ರಗಳು,ತಾಲೂಕು,ಜಿಲ್ಲಾ ಮತ್ತು ಜನರಲ್ ಆಸ್ಪತ್ರೆಗಳು,ಸಬ್ ಸೆಂಟರ್ ಗಳು ಹಾಗೂ ಹಲವು ಖಾಸಗೀ ಆಸ್ಪತ್ರೆಗಳಲ್ಲಿ ಯಶಸ್ವೀ ಲಸಿಕಾ ಕಾರ್ಯಕ್ರಮ ನಡೆಯಿತು. 6104 ಸ್ವಯಂ ಸೇವಕರು ಲಸಿಕೆ ವಿತರಣೆಯಲ್ಲಿ ಕರ್ಯೋನ್ಮುಖರಾಗಿದ್ದರು.

ಲಸಿಕೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಭಾನುವಾರ ಬೆಳಿಗ್ಗೆ ತೃಕ್ಕರಿಪುರದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ನಿರ್ವಹಿಸಿದರು.ಕಾಸರಗೊಡು ನಗರಸಭೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಜನರಲ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭಾಧ್ಯಕ್ಷೆ ಬೀಪಾತಿಮ್ಮಾ ಇಬ್ರಾಹಿಂ ಉದ್ಘಾಟಿಸಿದರು.