ಮಂಜೇಶ್ವರ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಮಜೀರ್‌ಪಳ್ಳ ಸಂಜೆ ಶಾಖೆಯನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸಿದರು. ಸಹಕಾರಿ ಬ್ಯಾಂಕ್ ಕೃಷಿಕರ ಬೆನ್ನೆಲುಬಾಗಿದೆ. ಸಹಕಾರಿ ಸಂಸ್ಥೆಯ ಪೂರ್ಣ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಂಡಲ್ಲಿ ನಮ್ಮ ಪ್ರದೇಶದ ಕೃಷಿ ಹಾಗೂ ವ್ಯಾಪಾರ ರಂಗಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾಂಕ್‌ನ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್‌ನ ಕಂಪ್ಯೂಟರ್ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಪಿ.ಬಿ.ಅಬ್ದುಲ್ ಮಜೀದ್ ನಿರ್ವಹಿಸಿದರು. ಪ್ರಥಮ ಕೃಷಿ ಸಾಲ ವಿತರಣೆಯನ್ನು ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಬಾಲಕೃಷ್ಣ ವೊರ್ಕೂಡ್ಲು ನೆರವೇರಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್ ಪ್ರಥಮ ನಿರಖು ಠೇವಣಿ ಮೊತ್ತವನ್ನು ಸ್ವೀಕರಿಸಿ ಶುಭಕೋರಿದರು.
ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಫಾತಿಮಾ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಪಿ.ಐತ್ತಪ್ಪ ಮವ್ವಾರು ಸೇಫ್ ಡಿಫಾಸಿಟ್ ಲಾಕರ್ ಉದ್ಘಾಟಿಸಿದರು. ಇದೇ ಸಂದಭ ಶುಭಹಾರೈಸಿ ಮಾತನಾಡಿದ ವರ್ಕಾಡಿ ಚರ್ಚ್‌ನ ಧರ್ಮಗುರು ವಂ.ಫಾ.ಫ್ರಾನ್ಸೀಸ್ ರೋಡ್ರಿಗಸ್ ಅವರು ಭವಿಷ್ಯವನ್ನು ಚಿಂತಿಸುವುದರೊಂದಿಗೆ ಜನಸೇವೆ ನಿರ್ವಹಿಸಿ ಗ್ರಾಹಕರನ್ನು ಸಂತೃಪ್ತಿಗೊಳಿಸಿ ಬ್ಯಾಂಕ್‌ನ್ನು ಲಾಭದಾಯಕ ಪಥದಲ್ಲಿ ಮುನ್ನಡೆಸಿದ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯನ್ನು ಪ್ರಶಂಸಿಸಿದರು.
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಬಿ.ಎಂ.ಅನಂತ ಆವರ್ತನ ಠೇವಣಿಯನ್ನು ಸ್ವೀಕರಿಸಿ ಮಾತನಾಡಿದರು. ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಂಜೀವ ಶೆಟ್ಟಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ವರ್ಕಾಡಿ ಘಟಕದ ಅಧ್ಯಕ್ಷ ಎ.ಎಂ.ಉಮ್ಮರ್ ಕುಂಞಿ, ಬಾಯಾರು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ತಲೆಂಗಳ ನಾರಾಯಣ ಭಟ್, ವರ್ಕಾಡಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಚೇಂಡೆಲ್ ನಾರಾಯಣ ನಾವಡ, ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಪೇರ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷ ವಿಶ್ವನಾಥ ಕುದುರು, ವರ್ಕಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ನೂಜಿ ಮುಂತಾದವರು ಶುಭಕೋರಿದರು.
ಬ್ಯಾಂಕ್‌ನ ಉಪಾಧ್ಯಕ್ಷ ನಾರಾಯಣ ತುಂಗ ಸ್ವಾಗತಿಸಿ, ಕಾರ್ಯದರ್ಶಿ ಶ್ರೀವತ್ಸ ಭಟ್ ವಂದಿಸಿದರು. ಬ್ಯಾಂಕ್‌ನ ನಿರ್ದೇಶಕ ದಿವಾಕರ ಎಸ್.ಜೆ. ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English