- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೀಯಪದವು ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಸುವರ್ಣ ಮಹೋತ್ಸವ

vidyavarthaka [1]

ಮಂಜೇಶ್ವರ: ವಿದ್ಯಾಭ್ಯಾಸದಿಂದ ಮಾನವೀಯ ಮೌಲ್ಯಗಳು ಬೆಳೆಯಬೇಕು.ಮೌಲ್ಯಯುತ ಶಿಕ್ಷಣ ನೀಡುವ ಸಂಸ್ಥೆಗಳಿಂದ ಅಭಿಮಾನ ಉಂಟಾಗಿ ಪ್ರತಿಭೆಗಳ ಅನಾವರಣಕ್ಕೆ ದಾರಿ ಸುಗಮಗೊಳಿಸುತ್ತದೆ.ಕಲೆ,ಸಂಸ್ಕ್ರತಿಗಳ ಬೆಳವಣಿಗೆ,ಪ್ರೋತ್ಸಾಹಗಳಿಗೆ ಶಿಕ್ಷಣ ಸಂಸ್ಥೆಗಳ ಕ್ರೀಯಾಶೀಲ ಚಟುವಟಿಕೆಗಳು ಬೆನ್ನೆಲುಬಾದಾಗ ನೈಜ ಅರ್ಥದ ಶಿಕ್ಷಣ ನೀಡಿದಂತಾಗುತ್ತದೆಯೆಂದು ಜಿಲ್ಲಾ ಪಂಚಾಯತ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ವ್ಯಕ್ತಪಡಿಸದರು.

ಮೀಯಪದವು ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಸುವರ್ಣ ಮಹೋತ್ಸವದ ಪೂರ್ವಭಾವಿಯಾಗಿ ನಡೆಸಲಾಗುವ ಒಂದು ವರ್ಷಗಳ ನಿರಂತರ ಕಾರ್ಯಕ್ರಮಗಳ ಸುವರ್ಣ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲಲಿ ಅವರು ಮಾತನಾಡುತ್ತಿದ್ದರು.

ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯ ಕಣಕ್ಕೂರು ತಿರುಮಲೇಶ್ವರ ಭಟ್ ಅಭಿಯಾನವನನು ಉದ್ಘಾಟಿಸಿದರು.

ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕೂರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿದ್ಯಾಧಿಕಾರಿ ವೇಣುಗೋಪಾಲ ಇ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.ಶಾಲಾ ಪ್ರಬಂಧಕಿ ಪ್ರೇಮಾ ಕೆ.ಭಟ್,ಮಮಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಆಶಲತಾ,ಎಸ್‌ಪಿಜಿ ಸಂಚಾಲಕ ಇಬ್ರಾಹಿಂ ಹೊನ್ನೆಕಟ್ಟೆ,ಹೈಯರ್ ಸೆಕೆಂಡರಿ ವಿಭಾಗದ ಪ್ರಭಾರ ಪ್ರಾಂಶುಪಾಲ ರಮೇಶ್ ಕೆ.ಎನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಯಾಸಾಗರ ಚೌಟ ಕೊಡಮಾಡಿಸುವ ಚಂದ್ರಾವತಿ-ರಘುರಾಮ ಚೌಟ ದತ್ತಿನಿಧಿಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಅಕ್ಷಿತಾ ಬಿ.ಹಾಗೂ ಮೊಹಮ್ಮದ್ ನೌಷಾದ್ ರಿಗೆ ನೀಡಿ ಗೌರವಿಸಲಾಯಿತು.ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ನೃತ್ಯ ವಿದುಷಿ ಪ್ರವಿತಾ ಅಶೋಕ್ ಶಿಷ್ಯೆಯರಿಂದ ನೃತ್ಯವೈವಿಧ್ಯ ನಡೆಯಿತು.

ಶಾಲಾ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ,ಮುಖ್ಯೋಪಾಧ್ಯಾಯ ಸದಾಶಿವ ಭಟ್ ವಂದಿಸಿದರು.ಶಿಕ್ಷಕ ರಾಜಾರಾಮ ರಾವ್ ಕಾರ್ಯಕ್ರಮ ನಿರೂಪಿಸಿದರು.