ಮಂಜೇಶ್ವರ: ಭಾರತದ ಶಿಕ್ಷಣ ವ್ಯವಸ್ಥೆ ವಿಶ್ವದಲ್ಲಿಯೇ ಮಾನ್ಯತೆಯನ್ನು ಪಡೆದಿದೆ. ವಿದೇಶಿಗರು ಇಲ್ಲಿ ಬಂದು ಶಿಕ್ಷಣ ಪಡೆಯುತ್ತಿದ್ದು, ಗುಣಮಟ್ಟದ ಹಾಗೂ ಶಿಸ್ತುಬದ್ಧ ಶಿಕ್ಷಣಕ್ಕೆ ಭಾರತ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ವ್ಯಾಸಂಗಗೈದವರು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಜತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಕೇರಳ ಸರಕಾರದ ವಿನೂತನ ಯೋಜನೆಯಾದ ಮಕ್ಕಳ ಮೇಲಿರುವ ನಮ್ಮ ಜವಾಬ್ದಾರಿ ಎಂಬ ಯೋಜನೆಯ ಉದ್ಘಾಟಿಸಿ ಅವರು ಮಾತನಾಡಿದರು.
ಎಳವೆಯಲ್ಲಿಯೇ ಮಕ್ಕಳ ಶಿಕ್ಷಣದ ಬಗ್ಗೆ ಹೆತ್ತವರು ಬಹಳ ಜಾಗರೂಕರರಾಗಿರಬೇಕು, ಪ್ರಾಥಾಮಿಕ ಶಿಕ್ಷಣ ಕಾಲಘಟ್ಟದಲ್ಲಿ ಶಿಸ್ತುಬದ್ಧತೆ ಶುಚಿತ್ವ ಬಹಳ ಪ್ರಾಮುಖ್ಯ. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಹಾಗೂ ಇನ್ನಿತರ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ, ಇದರ ಕುರಿತು ಜವಾಬ್ದಾರಿಯುತ ಎಚ್ಚರ ನಮಗಿರಬೇಕು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಶಾಲಾ ರಕ್ಷಕ-ಶಿಕ್ಷ ಸಂಘದ ಅಧಕ್ಷ ಯು.ಎಚ್.ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ಬಿಜು.ಪಿ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯ ಮುಸ್ತಫಾ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್, ಮಂಜೇಶ್ವರ ಬ್ಲಾಕ್ ಯೋಜನಾಧಿಕಾರಿ ವಿಜಯಕುಮಾರ್,ಸಿಎಚ್‌ಸಿ ಮಂಜೇಶ್ವgದ ಸಹಾಯಕ ಸರ್ಜನ್ ಡಾ.ಅಬ್ದುಲ ಅಝೀಝ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ ಅಬ್ದುಲ್ ಕಾದರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ಹೆತ್ತವರಿಗಾಗಿ ಜುವೈನಲ್ ಜಸ್ಟಿಸ್ ಬೋರ್ಡು ಸದಸ್ಯ ಪಿ.ಕೆ.ಕುಂಞಿರಾಮನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ಶಾಲಾ ಮುಖ್ಯೋಪಾಧಯ ಅಗಸ್ಟಿನ್ ಬರ್ನಾಡ್ ಸ್ವಾಗತಿಸಿ, ಪಿಎಚ್‌ಸಿಯ ಶಿಕ್ಷಕ ಕಿಶೋರ್‌ಕುಮಾರ್ ವಂದಿಸಿದರು. ಶಾಲಾ ಶಿಕ್ಷಕರಾದ ಸುರೇಶನ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದುವು. ಶಾಲಾ ದೈಹಿಕ ಶಿಕ್ಷಕ ಅನಿತಾ ಕಾರ್ಯಕ್ರಮ ಆಯೋಜಿಸಿದ್ದರು.
Click this button or press Ctrl+G to toggle between Kannada and English