ಪೆರ್ಲ: ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ಕ್ಷೇತ್ರ ವಾರ್ಷಿಕೋತ್ಸವ ಸೋಮವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು,ಬೆಳಿಗ್ಗೆ ಹೊರೆಕಾಣಿಕೆ ಮೆರವಣಿಗೆ ಮೊದಲಾದ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು.
ಸೋಮವಾರ ಬೆಳಿಗ್ಗೆ ಮಹಾಗಣಪತಿ ಹೋಮ,ಧ್ವಜಾರೋಹಣ,ಬಳಿಕ ಪೆರ್ಲ ಸತ್ಯನಾರಾಯಣ ಮಂದಿರ ಪರಿಸರದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿತು.ಈ ಸಂದರ್ಭ ಕ್ಷೇತ್ರದ ಗೌರವಾಧ್ಯಕ್ಷ ಟಿ.ಆರ್.ಕೆ ಭಟ್,ಅಧ್ಯಕ್ಷ ಎ.ಬಿ.ತಂಬಾನ್ ಪೊದುವಾಳ್,ಕಾರ್ಯದರ್ಶಿ ಸದಾನಂದ ಶೆಟ್ಟಿ.ಕುದ್ವ,ಉಪಾಧ್ಯಕ್ಷ ವಿಷ್ಣು ಭಟ್ ಕುಂಚಿನಡ್ಕ,ಮೋಹನ ಆಚಾರ್ಯ,ಟಿ.ಶಿವರಾಮ ಭಟ್,ಪೊಯ್ಯೆ ಶಿವರಾಮ ಭಟ್,ಕುಂಞಿರಾಮ ಅಮೆಕ್ಕಳ,ವಾಸು ಶೆಟ್ಟಿ ಪೆರ್ಲ,ಮೋಹಿನಿ ಜೆ.ಆಳ್ವ, ವೀಣಾ ಪೆರ್ಲ,ಪುಷ್ಪಾವತಿ ಮೊದಲಾದವರು ನೇತೃತ್ವ ನೀಡಿದರು. ನೂರಾರು ಭಗವದ್ಬಕ್ತರು ಪಾಲ್ಗೊಂಡರು.ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ, ರಾತ್ರಿ ರಂಗಪೂಜೆ ನಡೆಯಿತು.
ಕಾರ್ಯಕ್ರಮದಂಗವಾಗಿ ಮಂಗಳವಾರ ಬೆಳಿಗ್ಗೆ 108 ತೆಂಗಿನ ಕಾಯಿಗಳ ಮಹಾಗಣಪತಿಹವನ,ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.ರಾತ್ರಿ ನೃತ್ಯ ವೈವಿಧ್ಯ ನಡೆಯಲಿದೆ.
ದೈವ-ದೇವರುಗಳ ಸಂಗಮ ಸ್ಥಳ ಇಡಿಯಡ್ಕ ಕ್ಷೇತ್ರ ೨೦೦೮ರಲ್ಲಿ ಜೀರ್ಣೋದ್ಧಾರಗೊಮಡು ಪ್ರತಿಷ್ಠಾ ಬ್ರಹ್ಮಕಲಶ ನಡೆದಿದೆ. ದೇವಸ್ಥಾನದ ವಠಾರದಲ್ಲಿರುವ ಕಾರಣಿಕ ಹಾಗೂ ಪವಿತ್ರ ಶಂಖ ತೀರ್ಥ ಕೆಲವೊಂದು ಐತಿಹ್ಯಗಳಿಗೂ ಕಾರಣವಾಗಿದ್ದು, ಇದೇ ಕೆರೆಯಲ್ಲಿ ಮಕ್ಕಳ ವಿಶೇಷ ಸೇವೆಯಾಗಿ ಕಜಂಬು ಉತ್ಸವ ನಡೆದುಬರುತ್ತಿದೆ. ಜಾತಿ ಮತ ಭೇದವಿಲ್ಲದೆ ಇಲ್ಲಿ ಪ್ರಾರ್ಥಿಸಿದವರಿಗೆಲ್ಲರಿಗೂ ಶ್ರೀದುರ್ಗೆ ಸನ್ಮಂಗಲ ಕರುಣಿಸಿದ ನಿದರ್ಶನಗಳಿವೆ. ಉಳಿದ ಕ್ಷೇತ್ರಗಳಲ್ಲಿ ಶ್ರೀ ಉಳ್ಳಾಲ್ತೀ ದೈವನರ್ತನ ವೀಕ್ಷಣೆಗೆ ಮಹಿಳೆಯರಿಗೆ ಅವಕಾಶವಿರುವುದಿಲ್ಲ. ಆದರೆ ಇಡಿಯಡ್ಕದಲ್ಲಿ ಈ ನಿರ್ಬಂಧವಿಲ್ಲ.
ಜೀರ್ಣೋದ್ಧಾರ ಪ್ರಕ್ರಿಯೆ ಪುರ್ತಿಗೊಂಡ ಬಳಿಕ ಭಕ್ತಾದಿಗಳ ನೆರವಿನಿಂದ ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದುಬಂದಿದೆ. ಸುಸಜ್ಜಿತ ಸಭಾಂಗಣ, ಪಾಕಶಾಲೆ, ಅಡುಗೆಗೆ ಸ್ಟೀಮರ್ ಅಳವಡಿಕೆ, ಶಂಖತೀರ್ಥ ವಠಾರದಲ್ಲಿ ಚಪ್ಪರ ನಿರ್ಮಾಣಕ್ಕೆ ಶಾಶ್ವತ ಕಂಬಗಳ ಅಳವಡಿಕೆ, ಕಚೇರಿ, ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇಂಟರ್‌ಲಾಕ್ ಅಳವಡಿಕೆ, ದೇವಸ್ಥಾನದ ಎದುರು ಭಾಗದಲ್ಲಿ ಜಾಗ ಖರೀದಿ ಸಹಿತ ಹಲವಾರು ಕೆಲಸಗಳು ನಡೆದುಬಂದಿದೆ. ಮುಂದೆ ದೇವಸ್ಥಾನದ ಎದುರು ಶಾಶ್ವತ ಚಪ್ಪರದ ಯೋಜನೆಯನ್ನಿರಿಸಿಕೊಳ್ಳಲಾಗಿದೆ. ದುರ್ಗಾಪೂಜೆ, ಸ್ವಯಂವರ ಪುಷ್ಪಾಂಜಲಿ, ಶ್ರೀದೇವಿಗೆ ಸೀರೆ ಸಮರ್ಪಣೆ, ವಿಶೇಷ ಪ್ರಾರ್ಥನಾ ಸೇವೆ ನಡೆದು ಬರುತ್ತಿದೆ.
Click this button or press Ctrl+G to toggle between Kannada and English