ಕುಂಬಳೆ: ಹಿತ್ತಿಲೊಂದರಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಸ್ಪಿರಿಟ್ ಮತ್ತು ವಿದೇಶಿ ಮದ್ಯವನ್ನು ಅಬಕಾರಿ ಸ್ಪೆಶಲ್ ಸ್ವ್ಕಾಡ್ನ ಇನ್ಸ್ಪೆಕ್ಟರ್ ವಿ.ಕೃಷ್ಣಕುಮಾರ್ ನೇತೃತ್ವದಲ್ಲಿ ಪೇರಾಲ್ ಕಣ್ಣೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೇರಾಲ್ ಕಣ್ಣೂರು ನಿವಾಸಿ ನಾರಾಯಣ ಪೂಜಾರಿ(51)ಎಂತಾತನನ್ನು ಈ ಸಂಬಂಧ ಬಂಧಿಸಲಾಗಿದೆ. 120 ಲೀಟರ್ ಅಕ್ರಮ ಸ್ಪಿರಿಟ್ ಮತ್ತು 180 ಎಂ.ಎಲ್ನ 375 ಬಾಟಲಿ ವಿದೇಶಿ ಮದ್ಯವನ್ನು ಈತನಿಂದ ವಶಪಡಿಸಲಾಗಿದೆ. ಸ್ಪಿರಿಟನ್ನು 30 ಲೀಟರಿನ 4 ಕ್ಯಾನ್ಗಳಲ್ಲಾಗಿ ಹಿತ್ತ್ತಲೊಂದರಲ್ಲಿ ಬಚ್ಚಿಡಲಾಗಿತ್ತು. ಮದ್ಯ ಗೋವಾ ನಿರ್ಮಿತ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತವಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು ತಂಡದಲ್ಲಿ ಪ್ರಿವೆಂಟಿವ್ ಅಧಿಕಾರಿ ಪಿ.ಗೋವಿಂದನ್, ಗಾರ್ಡ್ಗಳಾದ ಎನ್.ಕೆ.ರವೀಂದ್ರನ್, ಮಹ್ಮದ್ ಕಬೀರ್ ಮತ್ತು ಚಾಲಕ ಕುಂಞಕಣ್ಣನ್ ಭಾಗವಹಿಸಿದ್ದರು.
Click this button or press Ctrl+G to toggle between Kannada and English