ಕಾನತ್ತೂರು ಅರಣ್ಯದಲ್ಲಿ ಮಾವೋವಾದಿ ವದಂತಿ

11:39 PM, Wednesday, February 3rd, 2016
Share
1 Star2 Stars3 Stars4 Stars5 Stars
(5 rating, 4 votes)
Loading...
Kerla Naxalas

ಮುಳ್ಳೇರಿಯಾ: ಕಾರಡ್ಕ ಅರಣ್ಯ ವಲಯಕ್ಕೆ ಒಳಪಟ್ಟ ಕಾನತ್ತೂರು ಅರಣ್ಯದಲ್ಲಿ ಮಾವೋವಾದಿಗಳಿರುವ ಬಗ್ಗೆ ದಟ್ಟ ವದಂತಿಗಳು ಹಬ್ಬಿದ್ದು, ಆದರೆ ಪೋಲೀಸ್ ಇಲಾಖೆ ಖಚಿತಪಡಿಸಿಲ್ಲ.

ಇತ್ತೀಚೆಗೆ ಕಾನತ್ತೂರಿನ ಅರಣ್ಯದಂಚಿನ ಮನೆಗೆ ತಲಪಿದ್ದ ಮಹಿಳೆಯೋರ್ವೆ ಕೇರಳ,ಕರ್ನಾಟಕ ಸಹಿತ ವಿವಿಧೆಡೆಗಳಲ್ಲಿ ಮಾವೋವಾದಿ ನಿಗ್ರಹ ಪಡೆಗೆ ಬೇಕಾಗಿದ್ದ ಮುಂಚೂಣಿಯ ನಾಯಕಿ ಇರಬಹುದೆಂದು ಸಂಶಯಿಸಲಾಗಿದೆ.ಮುಳ್ಳೇರಿಯಾ ಸಮೀಪದ ಕೊಟ್ಟಂಗುಳಿ ಅರಣ್ಯದೊಳಗೆ ಇತ್ತೀಚೆಗೆ ಸೌದೆಗೆ ತೆರಳಿದ್ದ ಕೆಲವು ಮಹಿಳೆಯರು ಕಾಡೊಳಗೆ ಅಪರಿಚಿತರನ್ನು ಕಂಡಿರುವುದಾಗಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮಾವೋವಾದಿಗಳು ಇರಬಹುದೆಂದು ಸಂಶಯಿಸಲಾಗಿದ್ದರೂ ಪೋಲೀಸ್ ಇಲಾಖೆ ಇನ್ನೂ ದೃಢಪಡಿಸಿಲ್ಲ.ಕಾನತ್ತೂರು,ಕೊಟ್ಟಂಗುಳಿ,ಅಡೂರು,ಪಾಂಡಿ ಮೂಲಕ ಕರ್ನಾಟಕವನ್ನು ಸಂಪರ್ಕಿಸುವ ಸುಲಭ ದಾರಿಯಿದ್ದು,ಇದು ಮಾವೋವಾದಿಗಳ ಅಡಗುದಾಣವಾಗುವ ಸಾಧ್ಯಯತೆಗಳಿರುವುದರಿಂದ ಸಹಜ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English