ಭಗವಾನ್ ನಿತ್ಯಾನಂದರ ಧೀ:ಶಕ್ತಿಯ ಕ್ಷೇತ್ರ ಕೊಂಡೆವೂರು-ಮಾಣಿಲ ಶ್ರೀಗಳು

11:00 PM, Tuesday, February 9th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
kondevooru

ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಭಾನುವಾರ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದರ 13ನೇ ಪ್ರತಿಷ್ಠಾ ವರ್ಧಂತಿ ಅಂಗವಾಗಿ ತ್ರಿಕಾಲ ಪೂಜೆ, ದುರ್ಗಾ ಹೋಮ, ದುರ್ಗಾ ನಮಸ್ಕಾರ ಪೂಜೆ, ಗಾಯತ್ರೀ ಹವನ ಮುಂತಾದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಭಗವಾನ್ ನಿತ್ಯಾನಂದರು ಓಡಾಡಿದ ಅವರ ಧೀ:ಶಕ್ತಿಯ ಈ ತಪೋಭೂಮಿಯ ಬೆಳವಣಿಗೆಯಲ್ಲಿ ಭಗವಂತನ ಪ್ರೇರಣೆ, ಪೂಜ್ಯರ ಸಾಧನಾ ಶಕ್ತಿ ಮತ್ತು ಇಲ್ಲಿನ ದಣಿವರಿಯದ ಕಾರ್ಯಕರ್ತರ ಪರಿಶ್ರಮ ಪ್ರೀತಿ ಪುಷ್ಟಿಗೊಳಿಸಿದೆ. ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಧಾರ ಗಳೆಂಬ ಪಂಚಮುಖೀ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಈ ಸಾಧನಾ ಕ್ಷೇತ್ರ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ಕೊಂಡೆವೂರಿನ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೇವರು ಕೊಟ್ಟದ್ದನ್ನು ದೇವರಿಗೇ ಕೊಟ್ಟು ಸಂತೋಷ ಪಡೋಣ, ಸಮಾಜದ ಸಹಕಾರದಿಂದ ಈ ಪುಣ್ಯಭೂಮಿಯನ್ನು ಇನ್ನಷ್ಟು ಸುಂದರವಾಗಿ ಮಾಡೋಣ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಕಟ್ಟಡ ನಿರ್ಮಾಣ ಉದ್ಯಮಿ ಲೋಕನಾಥನ್ ನಾಯ್ಡುರವರು ಮಾರ್ಚ್ ನಲ್ಲಿ ನಡೆದ ಚತುರ್ವೇದ ಸಂಹಿತಾಯಾಗ ಮತ್ತು ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಮಹಾಯಾಗದ ಸ್ಮರಣ ಸಂಚಿಕೆ ಯೋಗಾಮೃತವನ್ನು ಅನಾವರಣಗೊಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಕಿಳಿಂಗಾರು, ಬಿ.ಜೆ.ಪಿ. ರಾಜ್ಯ ಸಮಿತಿ ಸದಸ್ಯ ಅಶೋಕ್ ಕುಮಾರ್ ತಿರುವನಂತಪುರ, ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಕಾಂತ್ ಕಾಸರಗೋಡು, ಬೆಂಗಳೂರಿನ ಉದ್ಯಮಿ ಈಶ್ವರಪ್ಪ, ನಿವೃತ್ತ ಡಿಐಜಿ ರಮೇಶ್, ತಿರುವನಂತಪುರದ ಕೃಷ್ಣಕುಮಾರ್ ಮೊದಲಾದವರು ಆಶ್ರಮದ ಚಟುವಟಿಕೆಗಳನ್ನು ಶ್ಲಾಘಿಸಿದರು.

ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಪಿ.ಕೆ.ಎನ್ ಪಿಳ್ಳೈ ಎರ್ನಾಕುಲಂ ಇವರನ್ನು ಅವರ ದೇಶ ರಕ್ಷಣೆಯ ಕಾರ್ಯವನ್ನು ಗುರುತಿಸಿ ಶ್ರೀ ಗುರೂಜಿಯವರು ಸನ್ಮಾನಿಸಿದರು. ಅವರು ಮಾತಾಡುತ್ತಾ ಮಾನವ ಸೇವೆಯೇ ಮಾಧವ ಸೇವೆ, ಎಂದು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.

ಬೆಂಗಳೂರಿನ ಶ್ರೀ ಬಿ.ಟಿ.ಮೋಹನ್, ಶ್ರೀ ಕೆ.ನಾರಾಯಣ್, ತಿರುವನಂತಪುರದ ಪತ್ರಕರ್ತ ಸಂತೋಷ್ ಕುಮಾರ್, ಪುತ್ತೂರಿನ ಉದ್ಯಮಿ ಸಂಜೀವ ಶೆಟ್ಟಿ, ಮುಳಿಂಜದ ಸಂಜೀವ ಭಂಡಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ವಿದಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿಯವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕು. ಮೇಘನಾರ ಪ್ರಾರ್ಥನೆ, ಮೀರಾವತಿ ಆಳ್ವ ಸ್ವಾಗತಿಸಿ, ಕೆ. ಕೃಪಾಶಂಕರ್ ರವರು ವಂದನಾರ್ಪಣೆಗೈದರು. ಗಣೇಶ್ ಆಚಾರ್ಯ ಕಯ್ಯಾರು ನಿರೂಪಿಸಿದರು.

ಮಧ್ಯಾಹ್ನ ವಿದುಷಿ ಇಂದ್ರಾಣಿ ಲಕ್ಷ್ಮಣ್ ರವರ ವೀಣಾವಾದನ ಕಛೇರಿ ನಡೆಯಿತು. ರಾತ್ರಿ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರ ತುಳುನಾಡ ಸಂಸ್ಕೃತಿ ಕಾರ್ಯಕ್ರಮ ಜನಮನ ಸೆಳೆಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English