- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಾಲಾ ಪರಿಸರದಲ್ಲಿ ಮದ್ಯ ಮಾರಾಟ-ಓರ್ವನ ಸೆರೆ

liquor chandrahasa 48 [1]

ಉಪ್ಪಳ: ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಲಭಿಸಿದ ದೂರಿನ ಮೇರೆಗೆ ಅಬಕಾರಿ ಪೋಲೀಸರು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟದ ಮೂಲ ಸೂತ್ರದಾರನಾದ ಓರ್ವನನ್ನು ಬಂಧಿಸುವಲಲ್ಲಿ ಯಶಸ್ವಿಯಾಗಿದ್ದಾರೆ.

ಉಪ್ಪಳ ಪಚ್ಲಂಪಾರೆಯ ಚಂದ್ರಹಾಸ(48)ಬಂಧಿತ ಆರೋಪಿ.ಈತನಿಂದ 180 ಮಿಲ್ಲಿಯ 48 ಮದ್ಯ ಬಾಟಲಿಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಶಾಲಾ ಪರಿಸರದಲ್ಲಿ ಪ್ಲಾಸ್ಟಿಕ್ ಬಕೇಟ್ ನಲ್ಲಿ ತುಂಬಿಸಿ ಮದ್ಯ ಮಾರಾಟ ಮಾಡುತ್ತಿರುವ ಮಧ್ಯೆ ಆರೋಪಿಯನ್ನು ಚಾಣಾಕ್ಷತನದಿಂದ ಸೆರೆಹಿಡಿಯಲಾಗಿದೆ.ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಸಲಾಗುತ್ತಿದೆಯೆಂಬ ಊರವರ ನಿರಂತರ ದೂರಿನ ಪರಿಣಾಮ ಈ ಕಾರ್ಯಾಚರಣೆ ನಡೆದಿದೆ.