ಮೂರು ದೋಣಿ,ನೂರು ಮರಳು ಗೋಣಿ ವಶಕ್ಕೆ-ಇಬ್ಬರು ಹೊಳೆಯಲ್ಲಿ ಪರಾರಿ

12:37 AM, Thursday, February 11th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

Kumble Sand

ಕುಂಬಳೆ: ಮೊಗ್ರಾಲ್ ಕಡವತ್ತಿನಲ್ಲಿ ಅನಧಿಕೃತವಾಗಿ ಮರಳು ಸಾಗಾಟದ ಬಗ್ಗೆ ಪತ್ತೆಹಚ್ಚುವ ಕಾರ್ಯಾಚರಣೆಗೆ ಕಂದಾಯ ಅಧಿಕಾರಿಗಳು ಮಂಗಳವಾರ ರಾತ್ರಿ ಮಿಂಚಿನ ಧಾಳಿ ನಡೆಸಿದ್ದು ಅಧಿಕಾರಿಗಳನ್ನು ಕಂಡು ಇಬ್ಬರು ಮರಳು ಸಾಗಾಟದಾರರು ಹೊಳೆಗೆ ಹಾರಿ ತಪ್ಪಿಸಿಕೊಂಡ ಘಟನೆ ನಡೆದಿದೆ.

ಮಂಗಳವಾರ ರಾತ್ರಿ ಮಂಜೇಶ್ವರ ತಹಶೀಲ್ದಾರ್ ಕೆ.ಶಶಿಧರ ಶೆಟ್ಟಿ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಕಡವಿಗೆ ಧಾಳಿ ನಡೆಸಿದರು.ಧಾಳಿಯ ವೇಳೆ ಮರಳು ಸಂಗ್ರಹಿಸುತ್ತಿದ್ದ ಇಬ್ಬರು ಹೊಳೆಗೆ ಹಾರಿ ಪರಾರಿಯಾಗಿದ್ದು,100 ಗೋಣಿಚೀಲಗಳಲ್ಲಿ ಸಂಗ್ರಹಿಸಲಾಗಿದ್ದ ಮರಳು ಹಾಗೂ ಮರಳು ಸಂಗ್ರಹಕ್ಕೆ ಬಳಸಿದ ಮೂರು ನಾಡ ದೋಣಿಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.

ತಹಶೀಲ್ದಾರ್ ಜೊತೆಗೆ ಹೆಡ್ ಕ್ವಾರ್ಟರ್ಸ್ ಡೆಪ್ಯುಟಿ ತಹಶೀಲ್ದಾರ್ ಸುರೇಶ್‌ಚಂದ್ರ ಬೋಸ್,ಕೊಯಿಪ್ಪಾಡಿ ಗ್ರಾಮಾಧಿಕಾರಿ ಲೋಕೇಶ್ ಎಂ.ಬಿ ಆಚಾರ್,ಅಧಿಕಾರಿಗಳಾದ ಅನೂಪ್ ಕುಮಾರ್,ಸಜಿಲ್ ಪ್ರಸಾದ್,ಕುಲಶೇಖರ ರೈ,ಯಜೇಶ್ ರೈ ಮೊದಲಾದವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.ಕುಂಬಳೆ ಹೆಚ್ಚುವರಿ ಎಸ್ ಐ ಸೋಮಯ್ಯ ಹಾಗೂ ಪೋಲೀಸರು ಸ್ಥಳಕ್ಕೆ ತಲುಪಿ ದೋಣಿ ಹಾಗೂ ಮರಳನ್ನು ಠಾಣೆಗೆ ತಲುಪಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English