ದಿನದ ಗರಿಷ್ಟ ಸಮಯವನ್ನು ಕ್ಷೇತ್ರದ ಸಮಸ್ಯೆಗೆ ಮೀಸಲಿರಿಸುವ ಮಹಮ್ಮದ್ ಮುಸ್ತಾಫ

7:17 PM, Wednesday, February 17th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

musthafa

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 16 ನೇ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಸಮರ್ಥ ಅಭ್ಯರ್ಥಿಯಾಗಿ ಮಹಮ್ಮದ್ ಮುಸ್ತಾಫ ಇವರು ಸ್ಪರ್ಧಿಸುತ್ತಿದ್ದಾರೆ.

ಸಾಧನೆಯ ಹಾದಿಯೆಡೆಗೆ ಸಾಧಿಸುವ ಛಲದೊಂದಿಗೆ ಗುರಿ ಮುಟ್ಟುವ ಹಾದಿ ಮಧ್ಯೆ ಕಠಿಣ ಸವಾಲನ್ನು ಮೆಟ್ಟಿನಿಂತು ವೃತ್ತಿ ಜೀವನದ ಜೊತೆಜೊತೆಗೆ ರಾಜಕೀಯ ಆಸಕ್ತಿಯಿಂದ ಅವಕಾಶವು ತನ್ನನ್ನು ಅರಸಿಕೊಂಡು ಬಂದಾಗ ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ 2000 ನೇ ಇಸವಿಯಲ್ಲಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೆಶ ಮಾಡಿದರು. 2005 ರಲ್ಲಿ ಗೋಳ್ತಮಜಲು ಗ್ರಾಮ ಪಂಚಾಯ್‌ನಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಯಾಗಿ ಪಕ್ಷ ಅವಕಾಶ ಮಾಡಿ ಕೊಟ್ಟಾಗ ಅತ್ಯಂತ ಬಹುಮತದಿಂದ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದರು.

ಎಲ್ಲರನ್ನು ಸಮಾನರಾಗಿ ನೋಡಿಕೊಂಡು ಜಾತಿ ಧರ್ಮದ ಭೇದ ಭಾವವನ್ನು ತೋರದೆ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ವಾರ್ಡಿನ ಬಡಕುಟುಂಬಗಟಳಿಗೆ ಆರ್ಥಿಕ ಸಹಾಯವನ್ನು ನೀಡಿದ್ದಾರೆ. 2010 ರಲ್ಲಿ ಮತ್ತೆ ಅದೇ ವಾರ್ಡಿನಿಂದ ಪಂಚಾಯತ್ ಸ್ಪರ್ಧೆಗೆ ಪಕ್ಷ ಅವಕಾಶ ಮಾಡಿಕೊಟ್ಟಾಗ ಸ್ಪರ್ಧೆ ಮಾಡಿ ಗೆದ್ದು ಬಂದುದಲ್ಲದೇ ಆ ವಾರ್ಡಿನಿಂದ ಹೆಚ್ಚುವರಿ ಸೀಟನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ತನ್ನ ಸ್ವಂತ ದುಡಿಮೆಯ ಒತ್ತಡದ ನಡುವೆಯೂ 2015 ರ ಚುನಾವಣೆಯಲ್ಲಿ ಪಕ್ಷ ಬೇರೆ ವಾರ್ಡಿನಿಂದ ಪಂಚಾಯತ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಾಗ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಇವರನ್ನು ೩ ನೇ ಬಾರಿಗೆ ಪಂಚಾಯತ್ ಸದಸ್ಯನಾಗಿ ಆಶೀರ್ವದಿಸಿದರು. 2015 ರಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಸಾನಕ್ಕೆ ಪಕ್ಷವು ಇವರನ್ನು ಆಯ್ಕೆ ಮಾಡಿದಾಗ ಪಂಚಾಯತ್ ಮಟ್ಟದಲ್ಲಿ ಆಗಬೇಕಾದ ತುರ್ತು ಕಾರ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಿರುತ್ತಾರೆ. ಸರಕಾರದಿಂದ ಬರುವ ಯಾವುದೇ ಅನುದಾನವನ್ನು ಕಾಯದೇ ತನ್ನ ಸ್ವಂತ ಆರ್ಥಿಕ ಸಹಾಯದಿಂದ ಗೋಳ್ತಮಜಲು ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಅಭಿವ್ರದ್ಧಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುತ್ತಾರೆ.

ಮುಂದೆ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಬಿ.ಪಿ.ಎಲ್ ಕಾರ್ಡ್ ಬಳಕೆದಾರರ ಸಮಸ್ಯೆಗೆ ಪರಿಹಾರ ಒದಗಿಸುವುದೂ ಸೇರಿದಂತೆ ಸರ್ವಶಿಕ್ಷಣ ಅಭಿಯಾನದಲ್ಲಿ ಸರಕಾರಿ ಶಾಲೆಗಳಿಗೆ ಸಿಗುವಂತಹ ಸೌಲಭ್ಯಗಳನ್ನು ಕ್ಷೇತ್ರಕ್ಕೆ ತರಲು ಶಕ್ತಿ ಮೀರಿ ಪ್ರಯತ್ನ, ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನ ತರುವಲ್ಲಿ ಸರ್ವ ಪ್ರಯತ್ನ, ಕೃಷಿಕರು ಕಾರ್ಮಿಕರು ಕುಶಲ ಕರ್ಮಿಗಳಿಗೆ ಸರಕಾರದಿಂದ ಸಿಗುವಂತ ಯೋಜನೆಯನ್ನು ಮುಟ್ಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ , ಕ್ಷೇತ್ರದ ರಸ್ತೆಗಳ ಸಮಸ್ಯೆಯನ್ನು ಬಗೆಹರಿಸಲು ಶಕ್ತಿಮೀರಿ ಪ್ರಯತ್ನ, ಅಭಿವೃದ್ಧಿ ಕಾರ್ಯದಲ್ಲಿ ಪಕ್ಷ ಬೇದ ಮರೆತು ಸಹಕಾರ, ದಿನದ ಗರಿಷ್ಟ ಸಮಯವನ್ನು ಕ್ಷೇತ್ರದ ಸಾರ್ವಜನಿಕರ ಸಮಸ್ಯೆಗೆ ಮೀಸಲಿರಿಸುವುದು. ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ಮುಟ್ಟಿಸುವ ಪ್ರಯತ್ನ ಮಾಡುವುದಾಗಿ ಮಹಮ್ಮದ್ ಮುಸ್ತಾಪ ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English