- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೆಥೋಲಿಕ್ ಸಮಾಜ ಬಾಂಧವರ ಸಾಂಸ್ಕೃತಿಕ ಹಬ್ಬ, ಮೊಂತಿ ಫೆಸ್ತ್.

[1]ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕೊಂಕಣಿ ಕೆಥೋಲಿಕ್ ಸಮಾಜ ಬಾಂಧವರು ಮಾತೆ ಮೇರಿಯ ಜನ್ಮ ದಿನವನ್ನು ತೆನೆ ಹಬ್ಬವಾಗಿ ಆಚರಿಸಿದರು.
ಇಂದು (ಸೆ. 8) ಮಾತೆ ಮೇರಿಯ ಜನ್ಮ ದಿನ ಮೊಂತಿ ಹಬ್ಬವನ್ನು ಕುಟುಂಬದ ಎಲ್ಲಾ ಸದಸ್ಯರು ಜತೆಯಾಗಿ ಒಗ್ಗಟ್ಟಿನಿಂದ ಆಚರಿಸುತ್ತಾರೆ. ಈ ದಿನದಂದು ಮೇರಿಯನ್ನು ಅದ್ಬುತ ಪವಾಡ ಮತ್ತು ಭಕ್ತಾಧಿಗಳ ಬೇಡಿಕೆಗಳನ್ನು ಈಡೇರಿಸಿದ ಪ್ರತೀಕವಾಗಿ ಹಲವು ನಾಮಗಳಿಂದ ಕರೆಯಲಾಗುತ್ತದೆ. ಮೊಂತಿ ಫೆಸ್ತ್ ಎಂದರೆ ಪರ್ವತದ ಮೇಲಿನ ಮಾತೆಯ ಹಬ್ಬ ಎಂದು ಅರ್ಥೈಸಿಕೊಳ್ಳಲಾಗಿದೆ.

[2]
ಸರಿಸುಮಾರು 500 ವರ್ಷಗಳ ಹಿಂದಿನಿಂದ ಮೇರಿ ಮಾತೆಯ ಜನ್ಮ ದಿನದ ಪ್ರತೀಕವಾಗಿ ಮೊಂತಿ ಫಸ್ತ್ (ಕುಟುಂಬ ಹಬ್ಬ) ವನ್ನು ಆಚರಣೆ ಪ್ರಾರಂಭವಾಗಿತ್ತು. ಈ ಹಬ್ಬದ ವಿಷೇಶತೆಯೇನೆಂದರೆ ಭತ್ತದ ಹೊಸ ತೆನೆಯನ್ನು ಕೊಯ್ದು ದೇವಾಲಯಕ್ಕೆ ಕೊಂಡೊಯ್ದು ಆಶೀರ್ವದಿಸಿ ನಂತರ ಮನೆಗೆ ತಂದು ಆ ಅಕ್ಕಿಯನ್ನು ಸುಲಿದು ಪಾಯಸಮಾಡಿ ಕುಟುಂಬದ ಎಲ್ಲಾ ಸದಸ್ಯರು ಸಂತೋಷದಿಂದ ಸೇವಿಸುವುದಾಗಿದೆ.

[3]
ಬೇರೆ ಬೇರೆ ಕಡೆಗಳಲ್ಲಿರುವ ಕುಟುಂಬದ ಸದಸ್ಯರು ಈ ದಿನದಂದು ಒಟ್ಟುಗೂಡಿ ಒಂದೇ ಮನೆಯಲ್ಲಿ ಹಬ್ಬವನ್ನು ಆಚರಿಸುವುಚರಿಂದ ಇದನ್ನು ಕುಟುಂಬದ ಐಕ್ಯವನ್ನು ಸಾರುವ ಹಬ್ಬವೆನ್ನಲಾಗುವುದು.
ಮೊಂತಿ ಹಬ್ಬಕ್ಕೆ ಪೂರ್ವಭಾವಿಯಾಗಿ 9 ದಿನಗಳ ‘ನೊವೆನಾ’ ಪ್ರಾರ್ಥನೆ ಇರುತ್ತದೆ. ಈ ದಿನಗಳಲ್ಲಿ ಎಲ್ಲಾ ಪುಟ್ಟ ಪುಟ್ಟ ಮಕ್ಕಳು ತಮ್ಮ ತಮ್ಮ ಮನೆಗಳಿಂದ ಹೂಗಳನ್ನು ತಂದು ಶಿಶು ಮೇರಿ ಮಾತೆಯ ಸುಂದರವಾದ ಮೂರ್ತಿಗೆ ಪುಷ್ಪಾರ್ಚನೆ ಮಾಡುತ್ತಾರೆ. ಜಾತಿ ಮತ ಬೇದವಿಲ್ಲದೆ ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಿಶೇಷ.
[4]