ಹೊಟ್ಟೆ ಉರಿ, ಅಜೀರ್ಣಕ್ಕೆ ಮನೆಮದ್ದು

12:43 PM, Wednesday, July 6th, 2011
Share
1 Star2 Stars3 Stars4 Stars5 Stars
(1 rating, 1 votes)
Loading...

stomach-pain/ಹೊಟ್ಟೆ ನೋವುಹೊಟ್ಟೆ ಉರಿ, ಅಜೀರ್ಣ, ಎದೆ ಉರಿ ಸಮಸ್ಯೆಗೆ ಮನೆಮದ್ದು ಇಲ್ಲಿದೆ.

ಮೊದಲ ಟಿಪ್ಸ್: ಸಾಕಷ್ಟು ನೀರು ಹಾಗೂ ಮಜ್ಜಿಗೆ ಕುಡಿಯಿರಿ. ಮಿಕ್ಕಿದ್ದು ಓದಿಕೊಳ್ಳಿ

* ಸೈಂಧವ ಲವಣ ಮಿಶ್ರಿತ ಬೆಳ್ಳುಳ್ಳಿ ರಸವನ್ನು ಸಿದ್ಧಪಡಿಸಿ, ಏಳೆಂಟು ಚಮಚ ಬಿಸಿ ನೀರಿಗೆ ಅರ್ಧ ಚಮಚದಷ್ಟು ಬೆಳ್ಳುಳ್ಳಿ ರಸ ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಸೇವಿಸಿ.

* ಒಂದು ದೊಡ್ಡ ಚಮಚದಷ್ಟು ಕೊತ್ತಂಬರಿ ಬೀಜ ಮತ್ತು ಅವರೆಕಾಳಿನಷ್ಟು ಗಾತ್ರದ ಒಣಶುಂಠಿ ಸ್ವಲ್ಪ ಜಜ್ಜಿ ಎರಡು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಕಷಾಯ ಶೋಧಿಸಿ, ಜೇನುತುಪ್ಪ ಸೇರಿಸಿ ಸೇವಿಸಿ.

* ಮೇಲಿನ ಕಷಾಯಕ್ಕೆ ಜೇನುತುಪ್ಪ ಬದಲು ಕಲ್ಲು ಸಕ್ಕರೆ ಬಳಸಬಹುದು, ಸಕ್ಕರೆ ಬಳಕೆ ಬೇಡ. ಕೊತ್ತಂಬರಿ ಬೀಜ ಪುಡಿಮಾಡಿಟ್ಟುಕೊಂಡರೆ ತಕ್ಷಣಕ್ಕೆ ಕಷಾಯ ತಯಾರಿಸಲು ಅನುಕೂಲವಾಗುತ್ತದೆ.

* ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪ ಸಮಭಾಗ ತೆಗೆದುಕೊಂಡು ಮಿಶ್ರಣ ತಯಾರಿಸಿ. ಮೂರು ದಿನಗಳಿಗೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುತ್ತಿದ್ದರೆ ಹೊಟ್ಟೆ ಉರಿ ಕಮ್ಮಿಯಾಗುತ್ತದೆ.

* ಪ್ರತಿದಿನವೂ ಒಂದು ಎಳನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಇತರೆ ತಂಪು ಪಾನೀಯಗಳನ್ನು ವರ್ಜಿಸಿ.

* ಅಡುಗೆ ಉಪ್ಪು, ಒಣಶುಂಠಿ ಚೂರ್ಣ, ಜೀರಿಗೆ ಮತ್ತು ಸಕ್ಕರೆ ಪ್ರತಿಯೊಂದನ್ನೂ ಒಂದು ಟೀ ಚಮಚದಷ್ಟು ತೆಗೆದುಕೊಂಡು ಒಂದು ಹೋಳು ನಿಂಬೆರಸದೊಂದಿಗೆ ಮಿಶ್ರಮಾಡಿ. ಈ ಮಿಶ್ರಣಕ್ಕೆ ಒಂದು ಬಟ್ಟಲು ಬಿಸಿ ನೀರು ಸೇರಿಸಿ, ಚೆನ್ನಾಗಿ ಕಲಕಿ ಕುಡಿಯಿರಿ.

* ಬಿಸಿ ನೀರಿಗೆ ಜೇನು ತುಪ್ಪ ಬೆರೆಸಿ ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

* ಒಂದು ಬಟ್ಟಲು ನೀರಿಗೆ ಒಂದು ನಿಂಬೆ ಹಣ್ಣಿನ ರಸ ಹಿಂಡಿ, ಅರ್ಧ ಟೀ ಚಮಚ ಅಡಿಗೆ ಸೋಡ ಸೇರಿಸಿ. ಈ ಷರಬತ್ತನ್ನು ಸೇವಿಸಿದಲ್ಲಿ ಅಜೀರ್ಣದ ಹೊಟ್ಟೆನೋವು ನಿವಾರಣೆಯಾಗುವುದು.

* ಅಗತ್ಯವಾದಷ್ಟು ಹುರುಳಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಕಟ್ಟು ಬಸಿಯಿರಿ. ಒಂದು ಬಟ್ಟಲು ಬಿಸಿ ಕಟ್ಟಿಗೆ ಸ್ವಲ್ಪ ತುಪ್ಪ ಸೇರಿಸಿ, ಸೇವಿಸಿ. ದಿನದಲ್ಲಿ ಎರಡು ಬಾರಿ ಸೇವಿಸಿದರೆ ಹೊಟ್ಟೆ ನೋವು ಪರಿಹಾರವಾಗುವುದು.

* ನಡಿಗೆ, ಜಾಕಿಂಗ್ ಗೆ ಹೋಗುವ ಪದ್ಧತಿ ಇಟ್ಟುಕೊಳ್ಳಿ. ಆದರೆ, ಹೊಟ್ಟೆ ನೋವಿದ್ದಾಗ ಕಷ್ಟಕರ ದೈಹಿಕ ಕಸರತ್ತು ಮಾಡಲು ಯತ್ನಿಸಬೇಡಿ.

* ಹೊಟ್ಟೆಗೆ ಆಗಾಗ ಏನಾದರೂ ಪೋಷಣೆ ಮಾಡುತ್ತಿರಿ. ಖಾಲಿ ಇದ್ದಷ್ಟೂ ಹೆಚ್ಚು ಶಬ್ದ ಮಾಡುತ್ತದೆ.

* ಸೇಬು, ಕ್ಯಾರೆಟ್, ಬೀಟ್ ರೂಟ್ ಜ್ಯೂಸ್, ಹುರುಳಿಕಾಯಿ, ನಾರು ಬೇರಿನ ತರಕಾರಿ ಉತ್ತಮ

* ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಎಚ್ ಸಿಎಲ್ ಒದಗಿಸುವ ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ.

* ಹೊಟ್ಟೆ ನೋವು, ಉರಿ ಇದ್ದಾಗ ಕಾಫಿ, ಟೀ, ಆಲ್ಕೋಹಾಲ್, ಕೋಕ್, ಧೂಮಪಾನ ಬಿಟ್ಟು ಬಿಡಿ.

* ಕೊಬ್ಬಿನ ಪದಾರ್ಥಗಳು ಕೆನೆ ಮೊಸರು, ಪೇಡಾ, ಮಾಂಸ ಕೂಡಾ ಸೇವನೆಗೆ ಯೋಗ್ಯವಲ್ಲ.

* ಹೆಚ್ಚು ಬಿಗಿ ಉಡುಪುಗಳನ್ನು ಧರಿಸಬೇಡಿ. ರಾತ್ರಿ ಮಲಗುವುದಕ್ಕೂ ಎರಡು ಮೂರು ಗಂಟೆಗಳಿಗೆ ಮುನ್ನ ಆಹಾರ ಸೇವಿಸಿ. ರಾತ್ರಿ ಹೊತ್ತು ಕಾಫಿ, ಚಹಾ ಬೇಡ.

* ಎದೆ ಉರಿ ಇದ್ದಾಗ ಮಲಗುವುದಕ್ಕಿಂತ ಎದ್ದು ಓಡಾಡಿದರೆ ಉತ್ತಮ. ಹೊಚ್ಚು ಹೊತ್ತಿನಿಂದ ತೊಂದರೆ ಅನುಭವಿಸುತ್ತಿದ್ದರೆ ವೈದ್ಯರನ್ನು ಅವಶ್ಯವಾಗಿ ಕಾಣಿರಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English