ಶ್ರೀಮಂಜುನಾಥೇಶ್ವರ ಜ್ಞಾನವಿಕಾಸ ಕೇಂದ್ರದ ವಾರ್ಷಿಕ ಸಮಾರಂಭ

3:16 PM, Wednesday, July 6th, 2016
Share
1 Star2 Stars3 Stars4 Stars5 Stars
(No Ratings Yet)
Loading...

Jnanavikasaಕುಂಬಳೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಸಾಮಾಜಿಕ,ಆರ್ಥಿಕ ಕ್ಷೇತ್ರದಲ್ಲಿ ಹೊಸ ಭರವಸೆಗೆ ಕಾರಣವಾಗಿ ಅಭಿವೃದ್ದಿ ಪಥದ ಕೈದೀವಿಗೆಯಾಗಿದೆ.ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರಬೇಕಿದ್ದ ಸ್ತ್ರೀಗೆ ಆಧುನಿಕ ಪ್ರಪಂಚದ ಆಗುಹೋಗುಗಳ ಅರಿವು,ಸ್ವಾವಲಂಬನೆ,ಆರ್ಥಿಕ ಪ್ರಗತಿ ಮತ್ತು ಸಹುಷ್ಣುತೆಗೆ ದಾರಿಮಾಡಿಕೊಟ್ಟಿದೆಯೆಂದು ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಎಲ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಯೋಜನೆಯ ಕುಂಬಳೆ ವಲಯದ ಶ್ರೀಮಂಜುನಾಥೇಶ್ವರ ಜ್ಞಾನವಿಕಾಸ ಕೇಂದ್ರದ ವಾರ್ಷಿಕ ಸಮಾರಂಭವನ್ನು ಕುಂಬಳೆ ಕಾಳಿಕಾಂಬಾ ದೇವಸ್ಥಾನಮಠದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದು ಪುರುಷರಿಗೆ ಸಮಾನರಾಗಿ ಸ್ತ್ರೀಯರೂ ಒಟ್ಟು ಸಾಮಾಜಿಕ ವ್ಯವಸ್ಥೆಯಲ್ಲಿ ಸರಿಸಮರಾಗಿ ಮುಂದುವರಿಯುವಲ್ಲಿ ಶ್ರೀಕ್ಷೇತ್ರದ ವಿವಿಧ ಕಾರ್ಯಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ.ಯೋಜನೆಯ ಸೂಕ್ತ ಮಾರ್ಗದರ್ಶನದೊಂದಿಗೆ ಪ್ರಗತಿಯ ಹೆಜ್ಜೆಗಳಲ್ಲಿ ಪ್ರತಿಯೊಬ್ಬರೂ ಕಾರ್ಯಶೀಲರಾದಾಗ ಸಮೃದ್ದಿ ನೆಲೆಗೊಳ್ಳುವುದೆಂದು ಅವರು ತಿಳಿಸಿದರು.

Jnanavikasaಯೋಜನೆಯ ಬಂಬ್ರಾಣ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು.ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾಚಂದ್ರ ದೇವಾಡಿಗ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.ಕಾಶೀಮಠದ ಅರ್ಚಕ ಅನಂತಪದ್ಮನಾಭ ಉಪಸ್ಥಿತರಿದ್ದು ಶುಭಹಾರೈಸಿದರು.ವಲಯ ಮೇಲ್ವಿಚಾರಕಿ ಶೋಭಾ ಐ ಸ್ವಾಗತಿಸಿ,ವಂದಿಸಿದರು.ಸೇವಾ ಪ್ರತಿನಿಧಿ ಉಷಾ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English