- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಯು.ಎಸ್ ಓಪನ್ ಕೂಟದಲ್ಲಿ ಬೋಪಣ್ಣ-ಕುರೇಶಿ ಸೆಮಿಫೈನಲಿಗೆ.

[1]ನ್ಯೂಯಾರ್ಕ್: ಯು.ಎಸ್ ಓಪನ್ ಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಅವರು ಪಾಕಿಸ್ಥಾನದ ಐಸಾಮ್ ಉಲ್ ಹಕ್ ಕುರೇಶಿ ಜತೆಗೂಡಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.  ಬೋಪಣ್ಣ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಉಪಾಂತ್ಯ ತಲುಪಿದ ಸಾಧನೆಯಾಗಿದೆ.
ಯು.ಎಸ್ ಓಪನ್ ಕೂಟದ 16ನೇ ಶ್ರೇಯಾಂಕಿತರಾದ ಬೋಪಣ್ಣ – ಕುರೇಶಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 10ನೇ ಶ್ರೇಯಾಂಕದ ದಕ್ಷಿಣ ಆಫ್ರಿಕಾದ ವೆಸ್ಲೆ ಮೂಡಿ ಮತ್ತು ಬೆಲ್ಜಿಯಂನ ಡಿಕ್ ನಾರ್ಮನ್ ವಿರುದ್ಧ 7-5, 7-6 ಅಂತರದಿಂದ ಜಯ ದಾಖಲಿಸಿದರು. ಈ ವರ್ಷದ ವಿಂಬಲ್ಡನ್ ಕೂಟದಲ್ಲಿ ಕ್ವಾಟರ್ ಫೈನಲ್ ಹಂತದವರೆಗೆ ಏರಿದ್ದು ಈ ಜೋಡಿಯ ಶ್ರೇಷ್ಠ ಸಾಧನೆಯಾಗಿದೆ.
ನಮ್ಮ ಇಂದಿನ ಉದ್ವೇಗವನ್ನು ಬಣ್ಣಿಸಲಾಗದು, ಇದು ಅತ್ಯಂತ ನಿಕಟ ಸ್ಪರ್ಧೆಯ ಪಂದ್ಯವಾಗಿತ್ತು, ಅಂತ್ಯದಲ್ಲಿ ನಾವು ವಿಜಯಿಗಳಾಗಿ ಹೊರಹಮ್ಮಿದೆವು, ಇದು ನಿಜಕ್ಕೂ ನಂಬಲಸಾದ್ಯ ಎಂದು ಬೋಪಣ್ಣ ಸಂಭ್ರಮದಿಂದ ನುಡಿದಿದ್ದಾರೆ. ಅನುಭವಿ  ಡಬಲ್ಸ್ ಆಟಗಾರರಾದ ಭೂಪತಿ ಮತ್ತು ಲಿಯಾಂಡರ್ ಫೇಸ್ ಅವರು ಈಗಾಗಲೇ ಕೂಟದಲ್ಲಿ ಅಂತ್ಯಗೊಂಡಿದ್ದು, ಬೋಪಣ್ಣ ಈಗ ಉಳಿದಿರುವ ಭಾರತದ ಏಕೈಕ ಆಶಾಕಿರಣವಾಗಿದ್ದಾರೆ.
ಪ್ರಶಸ್ತಿ ಸುತ್ತಿನ ಸ್ಥಾನಕ್ಕಾಗಿ ಬೋಪಣ್ಣ-ಕುರೇಶಿ ಜೋಡಿ ಶ್ರೇಯಾಂಕ ರಹಿತ ಅರ್ಜೆಂಟೀನಾದ ಜೋಡಿ ಆಡವರ್ಡ್ ಶವಂಕ್ ಮತ್ತು ಹೊರಾಸಿಯೊ ಝೆಬಲ್ಲೊಸ್ ವಿರುದ್ಧ ಸೆಣಸಲಿವೆ.