ಬದಿಯಡ್ಕ:ಸ್ಥಳೀಯ ಪತ್ರಕರ್ತರ ಸಂಘಟನೆ ಬದಿಯಡ್ಕ ಪ್ರೆಸ್ ಪೋರಂ ಸಭೆ ಬದಿಯಡ್ಕದಲ್ಲಿ ಶುಕ್ರವಾರ ನಡೆಯಿತು.
ಬದಿಯಡ್ಕ ಪ್ರೆಸ್ ಪೋರಂ ಅಧ್ಯಕ್ಷ ಗಂಗಾಧರ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಸದಸ್ಯತ್ವ ನವೀಕರಣ,ನೂತನ ಸದಸ್ಯರಿಗೆ ಸದಸ್ಯತ್ವ,ಸಾಮಾಜಿಕ ವಿಚಾರಗಳಲ್ಲಿ ಬರವಣಿಗೆಯ ಸವಾಲುಗಳು ಹಾಗೂ ಭದ್ರತೆಯ ವಿಷಯಗಳ ಬಗ್ಗೆ ಚರ್ಚಿಸಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪ್ರೆಸ್ ಪೋರಂ ಜಿಲ್ಲಾ ಅಧ್ಯಕ್ಷ ಅಶೋಕ ನೀರ್ಚಾಲು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಪತ್ರಕರ್ತರಾದ ಶಿವಶಂಕರ ಪೆರ್ಲ,ರವೀಂದ್ರ ರೈ ಮಲ್ಲಾವರ,ಪುರುಷೋತ್ತಮ ಭಟ್ ಕೆ,ಅಖಿಲೇಶ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English