ಬದಿಯಡ್ಕ: ವಿಶ್ವ ತುಳುವರೆ ಆಯನೊ ಆಡಂಬರಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ತುಳು ಮನಸ್ಸುಗಳನ್ನು ಜೋಡಿಸುವ ಮೌಲ್ಯಯುತ ಉತ್ಸವವಾಗುವಂತೆ ಶ್ರಮಿಸಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮಾರ್ಗದರ್ಶನ ನೀಡಿದರು.
ತುಳುವರೆ ಆಯನೊದ ಪೂರ್ವಭಾವಿಯಾಗಿ ಸಂಘಟನಾ ಸಮಿತಿಯ ಮಾಹಿತಿಯ ಬಗ್ಗೆ ವಿವರ ನೀಡಲು ಸ್ವಾಗತ ಸಮಿತಿ ಪದಾಧಿಕಾರಿಗಳು ಶ್ರೀಕ್ಷೇತ್ರಕ್ಕೆ ಇತ್ತೀಚೆಗೆ ನೀಡಿದ ಭೇಟಿಯ ವೇಳೆ ತಂಡದೊಂದಿಗೆ ಮಾತನಾಡಿ ಮಾರ್ಗದರ್ಶನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಯಶಸ್ವಿಗೆ ಶ್ರೀಕ್ಷೇತ್ರದ ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಎಲ್ಲಾ ಸಹಾಯ-ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ಯೋಜನೆಯ ಸಂಬಂಧಿತ ಅಧಿಕೃತರಿಗೆ ನಿರ್ದೇಶನ ನೀಡಲಾಗಿದೆಯೆಂದು ಅವರು ತಂಡಕ್ಕೆ ತಿಳಿಸಿದರು.
ತುಳುವೆರೆ ಆಯನೊ ಕೂಟ ನೇತೃತ್ವದಲ್ಲಿ ಡಿ.9 ರಿಂದ 13ರ ವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ವ್ಯವಸ್ಥೆಗಳು ಭರದಿಂದ ಸಾಗುತ್ತಿದ್ದು,ಸ್ವಾಗತ ಸಮಿತಿಯ ನೇತೃತ್ವದಲ್ಲಿ ಸಮಾಜದ ಹಿರಿಯ ಮುಖಂಡರೊಂದಿಗೆ ಯಶಸ್ವೀ ಕಾರ್ಯಕ್ರಮದ ನಿಟ್ಟಿನಲ್ಲಿ ಸಮಾಲೋಚನೆ,ಸಿದ್ದತಾ ಸಭೆಗಳು ನಡೆಯುತ್ತಿವೆ.ತುಳು ಭಾಷೆ,ಸಂಸ್ಕೃತಿಯ ಸಂವರ್ಧನೆಗಾಗಿ ವಿವಿಧ ಆಯಾಮಗಳೊಂದಿಗೆ ಕಾರ್ಯಕ್ರಮ ಮೂಡಿಬರಲಿದ್ದು,ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ವಿಶ್ವ ತುಳುವೆರೆ ಆಯನೊ ಸಮಿತಿಯ ಗೌರವಾಧ್ಯಕ್ಷ ಪ್ರೊ.ಎ.ಶ್ರೀನಾಥ್,ಡಾ.ರಾಜೇಶ್ ಆಳ್ವ,ಹರ್ಷ ರೈ ಪುತ್ರಕಳ,ನಿಶಾಂತ್ ಪಾಟಾಳಿ,ಅಭಿಷೇಕ್ ನಾಡಾಜೆ,ಮಲ್ಲಿಕಾ ಜೆ.ರೈ ಪುತ್ತೂರು,ಪ್ರಭಾವತಿ ಕೆದಿಲಾಯ ಪುಂಡೂರು,ಜ್ಯೋತಿಪುಷ್ಪ ಸರಳಾಯ,ಸತ್ಯಾವತಿ ಬಾಲಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English