ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರ “ಮೈನರ್‌ ಬಸಿಲಿಕ”ವಾಗಿ ಘೋಷಣೆ

10:07 AM, Tuesday, August 2nd, 2016
Share
1 Star2 Stars3 Stars4 Stars5 Stars
(No Ratings Yet)
Loading...

St-Lawrence-Shrineಕಾರ್ಕಳ: ರಾಜ್ಯದ ಕರಾವಳಿಯ ಕ್ರೈಸ್ತರ ಪರಮ ಪಾವನ ಹಾಗೂ ಕಾರಣಿಕ ಕ್ಷೇತ್ರವಾಗಿರುವ ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರವನ್ನು ಸೋಮವಾರ ಕಿರಿಯ ಮಹಾದೇವಾಲಯ (ಮೈನರ್‌ ಬಸಿಲಿಕ) ಎಂಬುದಾಗಿ ಘೋಷಿಸುವ ಮೂಲಕ ಉಡುಪಿ ಜಿಲ್ಲೆಯ ಪುಟ್ಟ ತಾಲೂಕು ಕಾರ್ಕಳ ವಿಶ್ವದ ಇತಿಹಾಸದ ಪುಟದಲ್ಲಿ ಸದಾ ಗುರುತಿಸುವ ಸ್ಥಾನ ಪಡೆದುಕೊಂಡಿತು.

ಇದು ಕರ್ನಾಟಕ ರಾಜ್ಯದ 2ನೇ ಮತ್ತು ರಾಜ್ಯದ 22ನೇ ಕಿರಿಯ ಹಾಗೂ ಜಗತ್ತಿನ 1742ನೇ ಮಹಾ ದೇವಾಲಯವಾಗಿದೆ.

ಬೆಳಗ್ಗೆ 10 ಗಂಟೆಗೆ ಮುಂಬಯಿ ಆರ್ಚ್‌ ಬಿಷಪ್‌ ಹಾಗೂ ಸಿಸಿಬಿಐ ಮತ್ತು ಎಫ್‌ಎಬಿಸಿ ಅಧ್ಯಕ್ಷ ಕಾರ್ಡಿನಲ್‌ ಓಸ್ವಾಲ್ಡ್‌ ಗ್ರೇಶಿಯಸ್‌ ಅವರ ನೇತೃತ್ವದಲ್ಲಿ ಅತ್ತೂರು ಪುಣ್ಯಕ್ಷೇತ್ರದಲ್ಲಿ ಜರಗಿದ ದಿವ್ಯ ಬಲಿಪೂಜೆ ಸಮಾರಂಭದಲ್ಲಿ ತಿರುವನಂತಪುರಂ ಸಿರೊ-ಮಲಂಕರ ಕೆಥೋಲಿಕ್‌ ಚರ್ಚ್‌ನ ಮೇಜರ್‌ ಆರ್ಚ್‌ ಬಿಷಪ್‌ ಹಾಗೂ ಭಾರತದ ಕೆಥೋಲಿಕ್‌ ಧರ್ಮಾಧ್ಯಕ್ಷರ ಮಂಡಳಿಯ (ಸಿಬಿಸಿಐ) ಅಧ್ಯಕ್ಷ ಕಾರ್ಡಿನಲ್‌ ಬಸೆಲಿಯೋಸ್‌ ಕ್ಲೀಮಿಸ್‌ ಅವರು ಲ್ಯಾಟಿನ್‌ ಭಾಷೆಯಲ್ಲಿ ಹಾಗೂ ಉಡುಪಿಯ ಬಿಷಪ್‌ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಕೊಂಕಣಿಯಲ್ಲಿ ಕಿರಿಯ ಮಹಾ ದೇವಾಲಯದ ಘೋಷಣೆ ಮಾಡಿದರು.

ದೇಶಾದ್ಯಂತದ ವಿವಿಧ ಭಾಗಗಳಿಂದ ಆಗಮಿಸಿದ 25ರಷ್ಟು ಧರ್ಮಾಧ್ಯಕ್ಷರು, 500ರಷ್ಟು ಧರ್ಮಗುರುಗಳು, ನೂರಾರು ಮಂದಿ ಧರ್ಮ ಭಗಿನಿಯರು ಮತ್ತು ಸುಮಾರು 15,000ರಷ್ಟು ಮಂದಿ ಕ್ರೈಸ್ತರು ಮತ್ತು ಇತರ ಧರ್ಮೀಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.

St-Lawrence-Shrineಪ್ರಾರಂಭದಲ್ಲಿ ಸಂತ ಲಾರೆನ್ಸರ ಗೌರವಾರ್ಥ ನೊವೇನಾ ಪ್ರಾರ್ಥನೆ ನಡೆಯಿತು. ಪುಣ್ಯಕ್ಷೇತ್ರದ ನಿರ್ದೇಶಕ ಹಾಗೂ ಕಿರಿಯ ಮಹಾ ದೇವಾಲಯದ ರೆಕ್ಟರ್‌ ಫಾ| ಜಾರ್ಜ್‌ ಡಿ’ಸೋಜಾ ಅವರು ಇದನ್ನು ನಡೆಸಿಕೊಟ್ಟರು.

ಧರ್ಮಾಧ್ಯಕ್ಷರ ಮತ್ತು ಧರ್ಮಗುರುಗಳ ಭವ್ಯ ಮೆರವಣಿಗೆ ಬಳಿಕ ಬಲಿಪೂಜೆ ಪ್ರಾರಂಭದಲ್ಲಿ ಬೆಂಗಳೂರಿನ ಆರ್ಚ್‌ ಬಿಷಪ್‌ ರೆ| ಡಾ| ಬರ್ನಾರ್ಡ್‌ ಮೊರಾಸ್‌ ಪ್ರಸ್ತಾವನೆಗೈದರು. ಮಂಗಳೂರಿನ ಧರ್ಮಾಧ್ಯಕ್ಷ ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಅವರು ದೇವರಿಗೆ ಧೂಪದ ಆರತಿ ಎತ್ತುವ ಪ್ರಕ್ರಿಯೆ ನಡೆಸಿಕೊಟ್ಟರು.

ಸಂತ ಲಾರೆನ್ಸರ ಬಗ್ಗೆ ಈ ನಾಡಿನಲ್ಲಿ ವಿಶೇಷ ಆಕರ್ಷಣೆ ಮತ್ತು ಸ್ಥಾನಮಾನವಿದೆ. ಅವರಿಗೆ ಸಮರ್ಪಿಸಿದ ಪುಣ್ಯಕ್ಷೇತ್ರವನ್ನು ಕಿರಿಯ ಮಹಾ ದೇವಾಲಯದ ಸ್ಥಾನಕ್ಕೇರಿಸುವ ಈ ಶುಭ ಘಳಿಗೆಯು ಉಡುಪಿ ಮತ್ತು ಮಂಗಳೂರು (ಮಾತೃ ಧರ್ಮಪ್ರಾಂತ) ಧರ್ಮ ಪ್ರಾಂತಕ್ಕೆ ಮಾತ್ರವಲ್ಲ, ಕರ್ನಾಟಕ ರಾಜ್ಯ ಮತ್ತು ಭಾರತ ದೇಶಕ್ಕೆ ವಿಶೇಷ ಸಂದರ್ಭವಾಗಿದೆ ಎಂದು ಬಲಿಪೂಜೆ ನೇತೃತ್ವ ವಹಿಸಿದ್ದ ಕಾರ್ಡಿನಲ್‌ ಓಸ್ವಾಲ್ಡ್‌ ಗ್ರೇಶಿಯಸ್‌ ಹೇಳಿದರು.

ಪ್ರವಚನ ನೀಡಿದ ಆರ್ಚ್‌ ಬಿಷಪ್‌ ರೆ| ಡಾ| ಬರ್ನಾರ್ಡ್‌ ಮೊರಾಸ್‌ ಚರ್ಚ್‌ವೊಂದನ್ನು ಮೈನರ್‌ ಬಸಿಲಿಕ ಹಂತಕ್ಕೇರಿಸುವುದು ಜನರ ಏಕತೆಯ ಸಂಕೇತ. ಇದರಿಂದ ಪುಣ್ಯ ಕ್ಷೇತ್ರದ ಹಿರಿಮೆಗೆ ಮತ್ತೂಂದು ಗರಿ ಬಂದಂತಾಗಿದೆ. ಇದೊಂದು ಅಪರೂಪದ, ಚಾರಿತ್ರಿಕ ಧಾರ್ಮಿಕ ಸಮಾರಂಭ. ಉಡುಪಿ ಧರ್ಮ ಪ್ರಾಂತದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಂಗತಿ ಎಂದರು.

ಪರರ ಸಂಕಷ್ಟಗಳಿಗೆ ಸ್ಪಂದಿಸಿ ಹುತಾತ್ಮರಾಗಿ ದೇವರ ಸಂಪ್ರೀತಿಗೆ ಪಾತ್ರರಾದ ಸಂತ ಲಾರೆನ್ಸರ ಬದುಕು ಎಲ್ಲರಿಗೂ ಆದರ್ಶಯುತವಾದುದು. ಅವರ ಹಾಗೆ ಕ್ರೈಸ್ತರು ಯೇಸು ಕ್ರಿಸ್ತರಿಗೆ ಸಾಕ್ಷಿಗಳಾಗಿ ಬದುಕಬೇಕು. ವಿಶೇಷವಾಗಿ ದಯೆಯ ವರ್ಷಾಚರಣೆಯ ಈ ಸಂದರ್ಭ ಪರರ ಕಷ್ಟ, ಸಂಕಷ್ಟಗಳಿಗೆ ಸ್ಪಂದಿಸಿ ಬಾಳ್ವೆ ನಡೆಸಿದರೆ ಈ ವರ್ಷಾಚರಣೆ ಸಾರ್ಥಕವಾಗುವುದು ಎಂದರು.

ಮಹಾ ಪ್ರಾರ್ಥನೆ ಮತ್ತು ಪರಮ ಪ್ರಸಾದದ ವಿತರಣೆಯೊಂದಿಗೆ ಬಲಿ ಪೂಜೆ ಮುಕ್ತಾಯಗೊಂಡ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಮೂವರು ಕಾರ್ಡಿನಲ್‌ಗ‌ಳು, ಮೂವರು ಆರ್ಚ್‌ ಬಿಷಪರು ಮತ್ತು 18 ಮಂದಿ ಬಿಷಪರ ಹೊರತಾಗಿ ಉಡುಪಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಬ್ಯಾಪ್ಟಿಸ್ಟ್‌ ಮಿನೇಜಸ್‌, ಛಾನ್ಸಲರ್‌ ಫಾ| ವಲೇರಿಯನ್‌ ಮೆಂಡೊನ್ಸಾ, ಎಪಿಸ್ಕೋಪಲ್‌ ವಿಕಾರ್‌ ಫಾ| ರೋಶನ್‌ ಮಿನೇಜಸ್‌, ಜ್ಯುಡೀಶಿಯಲ್‌ ವಿಕಾರ್‌ ಫಾ| ವಲೇರಿಯನ್‌ ಮಿನೇಜಸ್‌, ಅತ್ತೂರು ಪುಣ್ಯ ಕ್ಷೇತ್ರದ ರೆಕ್ಟರ್‌ ಫಾ| ಜಾರ್ಜ್‌ ಡಿ’ಸೋಜಾ, ವಲಯ ಮುಖ್ಯಸ್ಥರಾದ ಫಾ| ಸ್ಟಾÂನಿ ಬಿ. ಲೋಬೊ, ಫಾ| ಸ್ಟಾÂನಿ ತಾವ್ರೊ, ಫಾ| ಫ್ರೆಡ್‌ ಮಸ್ಕರೇನ್ಹಸ್‌, ಫಾ| ಅನಿಲ್‌ ಡಿ’ಸೋಜಾ, ಫಾ| ಜೋಸ್ವಿ ಫೆರ್ನಾಂಡಿಸ್‌, ಸಲಹೆಗಾರರಾದ ಫಾ| ರೊಕಿ ಡಿ’ಸೋಜಾ, ಫಾ| ಡೆನಿಸ್‌ ಡೆ’ಸಾ, ಫಾ| ಚಾರ್ಲ್ಸ್ ನೊರೋನ್ಹಾ, ಕಾರ್ಯಕ್ರಮದ ಸಂಚಾಲಕ ಫಾ| ಲಾರೆನ್ಸ್‌ ಸಿ. ಡಿ’ಸೋಜಾ, ವಿವಿಧ ಧರ್ಮ ಪ್ರಾಂತಗಳ ಪ್ರಧಾನ ಗುರುಗಳಾದ ಮೊ| ಡೆನಿಸ್‌ ಮೊರಸ್‌ ಪ್ರಭು (ಮಂಗಳೂರು), ಮೊ| ಜಾರ್ಜ್‌ ಡಿ’ಸೋಜಾ (ಚಿಕ್ಕಮಗಳೂರು), ಮೊ| ಫೆಲಿಕ್ಸ್‌ ನೊರೋನ್ಹಾ (ಶಿವಮೊಗ್ಗ), ಮೊ| ಜಯನಾಥನ್‌ (ಬೆಂಗಳೂರು), ಮೊ| ಎಡ್ವಿನ್‌ ಸಿ. ಪಿಂಟೊ (ಮೌಂಟ್‌ ರೋಸರಿ), ಫಾ| ಜೋಸೆಫ್‌ ಮಾರ್ಟಿಸ್‌ (ಜಪ್ಪು ಸೆಮಿನರಿಯ ರೆಕ್ಟರ್‌) ಸೇರಿದಂತೆ 51 ಮಂದಿ ಉಪಸ್ಥಿತರಿದ್ದರು.ಫಾ| ಡೆನ್ನಿಸ್‌ ಡೆ’ಸಾ ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English