- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಧುನಿಕ ಕೃಷಿ ತಂತ್ರಜ್ಞಾನಗಳು ಯುವ ಪೀಳಿಗೆಯನ್ನು ಆಕರ್ಷಿಸಬಲ್ಲುದು- ಹರ್ಷಾದ್ ವರ್ಕಾಡಿ

Agriculture-education [1]ಮಂಜೇಶ್ವರ : ಪರಂಪರಾಗತ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಕೃಷಿಗೆ ಹೊಸ ಸ್ವರೂಪವನ್ನು ನೀಡಿ ಯುವಕರನ್ನು ಕೃಷಿಯತ್ತ ಆಕರ್ಷಿಸುವ ಯೋಜನೆಗಳನ್ನು ಸರಕಾರ ರೂಪಿಸಬೇಕೆಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ಪಟ್ಟರು.

ಮೀಂಜ ಗ್ರಾಮ ಪಂಚಾಯತು ಹಾಗೂ ಮೀಂಜ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಸಿಂಹ ಮಾಸದ ಪ್ರಥಮ ದಿ ಬುಧವಾರ ಮೀಂಜ ಗ್ರಾಮ ಪಂಚಾಯತು ಮಾರ್ಕೆಟ್ ಹಾಲ್‌ನಲ್ಲಿ ನಡೆದ ಕೃಷಿಕರ ದಿನವನ್ನು ಉದ್ಘಾಟಿಸಿ,ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಯುವ ಸಮೂಹಕ್ಕೆ ಕೃಷಿ ಆಸಕ್ತಿಯನ್ನು ಉಂಟುಮಾಡುವ ಕೆಲಸವನ್ನು ಮಾಡಬೇಕು. ವೃತ್ತಿಪರ ಶಿಕ್ಷಣ ಕೋರ್ಸುಗಳಂತೆ ಕೃಷಿ ಶಿಕ್ಷಣವನ್ನು ಮಾರ್ಪಾಡುಗೊಳಿಸಿ, ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಕೃಷಿಯನ್ನು ಅಭಿವೃದ್ಧಿ ಪಡಿಸುವುದು ಸೂಕ್ತ ಮಾರ್ಗ ಎಂದು ಅವರು ಹೇಳಿದರು. ಜಾಗತಿಕ ಮಟ್ಟದಲ್ಲಿ ಕೃಷಿ ದಿನಾಚರಣೆಯನ್ನು ಮಾಡುವ ಮೂಲಕ ಜಾಗತಿಕ ಮಟ್ಟದ ಜಾಗೃತಿಗೆ ಜಗತ್ತಿನ ರಾಷ್ಟ್ರಗಳು ಒಗ್ಗೂಡಬೇಕೆಂದು ಅವರು ತಿಳಿಸಿದರು.

Agriculture-education [2]ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶಂಷಾದ್ ಶುಕೂರ್ ಅಧ್ಯಕ್ಷತೆ ವಹಿಸಿದ್ದು, ಕೃಷಿ ಸಹಾಯಕ ನಿರ್ದೇಶಕ ಅಬೂಬಕ್ಕರ್ ಯೋಜನೆಯ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಮತಾ ದಿವಾಕರ್, ಬ್ಲಾಕ್ ಪಂಚಾಯತು ಸದಸ್ಯೆ ಆಶಾಲತಾ, ಗ್ರಾಮ ಪಂಚಾಯತು ಉಪಾಧ್ಯಕ್ಷೆ ಫಾತಿಮಾ, ಸ್ಥಾಯೀ ಸಮಿತಿ ಅಧ್ಯಕ್ಷ ಮುಹಮ್ಮದ್ ಜೆ.ಎಂ, ಶೋಭಾ ಎಸ್, ಕೃಷ್ಣ, ಸದಸ್ಯ ವಹೀದ್ ಕೂಡೇಲು, ಶಾಲಿನಿ ಬಿ ಶೆಟ್ಟಿ, ಚಂದ್ರಶೇಖರ, ಚಂದ್ರಾವತಿ ವಿ ಪಿ, ಚಂದ್ರಾವತಿ,ಯಶೋದಾ, ಶೈಲಾ ಬಾಲಕೃಷ್ಣ, , ಕುಸುಮ, ಸುಂದರಿ ಆರ್ ಶೆಟ್ಟಿ, ಹೇಮಲತಾ, ಸಂಜೀವ ಶೆಟ್ಟಿ, ಹರೀಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ದೇವರಾಜನ್ ಜಿ.ಸ್ವಾಗತಿಸಿ, ಶ್ರೀಜಾ ವಂದಿಸಿದರು. ಪ್ರಗತಿಪರ ಕೃಷಿಕ ಸಂಜೀವ ಶೆಟ್ಟಿ ಬೆಜ್ಜ, ಡಾ.ಐ.ಕೃಷ್ಣ ಭಟ್, ಭುವನೇಶ್ವರಿ ಮಿತ್ತಾಳ, ಐತ ಮೀಂಜ, ಶಂಕರನಾರಾಯಣ ಭಟ್ ಅರಿಯಾಳ, ಕೃಷ್ಣ ನಾವಡ ಮೀಯಪದವು ,ಚಂದ್ರಶೇಖರ ನಾಯಕ್ ಹೆದ್ದಾರಿ,ಸಂತೋಷ್ ಕುಮಾರ್ ಎಂಬವರನ್ನು ಗೌರವಿಸಲಾಯಿತು.