ಚರ್ಚ್ ದಾಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮಂಗಳೂರು ಬಿಷಪ್ ಮನವಿ

7:52 PM, Saturday, July 23rd, 2011
Share
1 Star2 Stars3 Stars4 Stars5 Stars
(No Ratings Yet)
Loading...

Mangalore Bishop/ಮಂಗಳೂರು ಬಿಷಪ್ ಮಂಗಳೂರು : ಮಂಗಳೂರು ಬಿಷಪ್ ರೆ. ಪಾ. ಅಲೋಸಿಯಸ್ ಪೌಲ್ ಡಿ. ಸೊಜ ನೇತೃತ್ವದ ತಂಡ ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ 2008 ಚರ್ಚ್ ದಾಳಿಗೆ ಸಂಬಂಧಪಟ್ಟ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಮನವಿ ನೀಡಿತು.
ರಾಜ್ಯ ಸರ್ಕಾರ ಈಗಾಗಲೇ ಚರ್ಚ್ ಮೇಲಿನ ದಾಳಿ ಘಟನೆಗಳ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ ಮೇಲೂ ಈ ಕೇಸುಗಳಿಗೆ ಸಂಬಂಧಪಟ್ಟು ಸಮನ್ಸ್ ಗಳು ಜಾರಿಯಾಗುತ್ತಿರುವ ಬಗ್ಗೆ ನಿಯೋಗ ಕಮಿಷನರ್ ಗಮನ ಸೆಳೆಯಿತು.
ನಂತರ ಮಾತನಾಡಿದ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮುಖ್ಯಮಂತ್ರಿಗಳು ನಾಲ್ಕು ತಿಂಗಳುಗಳ ಹಿಂದೆಯೇ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದರೂ ಅದು ಅನುಷ್ಠಾನವಾಗಿಲ್ಲವೆಂದು ವಿಷಾದಿಸಿದರು. ಈ ನಿಯೋಗದಲ್ಲಿ ಫಾ.ಥೋಮಸ್ ಡಿಸಿಲ್ವಾ, ಫಾ.ಜೆ.ಬಿ.ಕ್ರಾಸ್ತಾ,, ಐವನ್ ಡಿಸೋಜಾ, ಓನಿಯಲ್ ಡಿ ಸೋಜಾ, ಡಾ. ಜೆ.ಬಿ. ಕ್ರಾಸ್ತ ಮೊದಲಾದವರು ಜೊತೆಗಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English