ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಿ ಹಾಗೂ ದೇವಸ್ಥಾನದ ಬಗ್ಗೆ ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಜಬ್ಬಾರ್ ಬಿ.ಸಿ.ರೋಡ್ ಎಂಬಾತನ ಬಗ್ಗೆ ಶಿಸ್ತು ಕ್ರಮಕೈಗೊಳ್ಳುವಂತೆ ದೇವಸ್ಥಾನದ ಭಕ್ತರು ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ಅವರಿಗೆ ಮನವಿ ಮಾಡಿದ್ದಾರೆ.
ಜಬ್ಬಾರ್ ತನ್ನ ಫೇಸ್‍ಬುಕ್‍ನಲ್ಲಿ ದೇವ, ದೇವತೆಗಳನ್ನು ಅವಮಾನಿಸಿ ಹಾಕಿದ ಪೋಸ್ಟ್‌ನಿಂದಾಗಿ ಅವರ ಭಕ್ತರಿಗೆ ಅತೀವ ನೋವಾಗಿದೆ. ಇದು ಕರಾವಳಿ ಜಿಲ್ಲೆಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.
ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕರಾವಳಿ ಸಾಂಸ್ಕೃತಿಕ ಪರಿಷತ್‍ನ ಸಂಚಾಲಕರಾದ ಸತೀಶ್ ಕುಂಪಲ ಹಾಗೂ ಇತರ ಸದಸ್ಯರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
Click this button or press Ctrl+G to toggle between Kannada and English