ಸುವರ್ಣ ಸಂಭ್ರಮದ ಸಂದೇಶ ಜಾಥಾಕ್ಕೆ ವಿಶ್ವೇಶತೀರ್ಥ ಶ್ರೀಪಾದರು ಚಾಲನೆ

2:20 PM, Saturday, September 3rd, 2016
Share
1 Star2 Stars3 Stars4 Stars5 Stars
(No Ratings Yet)
Loading...

golden-jubilee-celebrationಉಡುಪಿ: ಸುವರ್ಣ ಸಂಭ್ರಮ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಪೂಜಿಸಲ್ಪಡುವ ಉಡುಪಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಸಂದೇಶ ಜಾಥಾಕ್ಕೆ ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸೆ.1ರಂದು ರಾಜಾಂಗಣದ ಮುಂಭಾಗದಲ್ಲಿ ಚಾಲನೆ ನೀಡಿದರು.

ಕಡಿಯಾಳಿ ದುರ್ಗೆ ಉಡುಪಿಯನ್ನು ಕಾಪಾಡುವ ದೇವಿ. ಆಕೆಯ ಸನ್ನಿಧಿಯಲ್ಲಿ ಪೂಜಿಸಲ್ಪಡುವ ಗಣಪತಿಗೆ ಸುವರ್ಣ ಸಂಭ್ರಮೋತ್ಸವ ನಡೆಯುತ್ತಿರುವುದು ಭಕ್ತರೆಲ್ಲರಿಗೂ ಸಂಭ್ರಮದ ವಿಚಾರ.

ಇಂದು ಜನರಲ್ಲಿ ದೇವಭಕ್ತಿ ಮತ್ತು ದೇಶಭಕ್ತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಇಂತಹ ಹಬ್ಬ, ಆಚರಣೆ, ಮಹೋತ್ಸವಗಳ ಮೂಲಕ ಈ ಕೆಲಸವಾಗಲಿ. ಸುವರ್ಣ ಮಹೋತ್ಸವದ ವೈಭವದಲ್ಲಿ ನಾಡಿನ ಜನತೆ ಪಾಲ್ಗೊಳ್ಳುವಂತಾಗಲಿ ಎಂದು ಪೇಜಾವರ ಶ್ರೀಗಳು ಆಶೀರ್ವಚನ ನೀಡಿದರು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್‌, ಸಂಚಾಲಕ ಪ.ವಸಂತ ಭಟ್‌, ಸಮಿತಿಯ ಉಪಾಧ್ಯಕ್ಷರಾದ ಯಶ್‌ಪಾಲ್‌ ಸುವರ್ಣ, ಮಹೇಶ್‌ ಠಾಕೂರ್‌, ನಂದ ಕುಮಾರ್‌, ಮೋಹನ್‌ ಉಪಾಧ್ಯ,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಮಿತಿಯ ಸಂತೋಷ್‌ ಕಿಣಿ, ಸತೀಶ್‌ ಕುಲಾಲ್‌, ಮಟ್ಟಾರು ರತ್ನಾಕರ ಹೆಗ್ಡೆ, ನಾಗೇಶ್‌ ಪೈ, ಕೇಶವರಾಯ ಪ್ರಭು, ಮೋಹನ್‌ ಉಪಾಧ್ಯ, ಭಾರತಿ ಚಂದ್ರಶೇಖರ್‌, ಸುಪ್ರಭಾ ಆಚಾರ್ಯ, ರಜನಿ ಹೆಬ್ಟಾರ್‌, ಜಗದೀಶ್‌ ಆಚಾರ್ಯ, ಶ್ರೀಶ ನಾಯಕ್‌ ಮೊದಲಾದವರು ಪಾಲ್ಗೊಂಡಿದ್ದರು. ಈ ಸಂದೇಶ ರಥವು ಜಿಲ್ಲೆಯಾದ್ಯಂತ 13 ದಿನಗಳ ಕಾಲ ಸಂಚರಿಸಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English