- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

12 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ವಿಯೆಟ್ನಾಂ ಸಹಿ

India,-Vietnam- [1]ವಿಯೆಟ್ನಾಂ: ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ಹಾಗೂ ಆರೋಗ್ಯ ಸೇರಿದಂತೆ 12 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ವಿಯೆಟ್ನಾಂ ಶನಿವಾರ ಸಹಿ ಹಾಕಿವೆ.

ಸೆಪ್ಟೆಂಬರ್ 4ರಂದು ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಯಾಣ ಬೆಳಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಏತನ್ಮಧ್ಯೆ 2 ದಿನಗಳ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ.

ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ಅವರು 12 ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿಯೆಟ್ನಾಂ ರಕ್ಷಣಾ ಕ್ಷೇತ್ರಕ್ಕೆ 500 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಈ ಸಂದರ್ಭದಲ್ಲಿ ಮೋದಿ ಘೋಷಿಸಿದರು. ವಿಯೆಟ್ನಾಂ ಜೊತೆಗಿನ ನಮ್ಮ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಯೆಟ್ನಾಂಗೆ ಆಗಮಿಸಿದ್ದರು. ಶನಿವಾರ ಬೆಳಗ್ಗೆ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ವಿಯೆಟ್ನಾಂನ ಹನಾಯ್ ನಲ್ಲಿರುವ ಅಧ್ಯಕ್ಷರ ಅರಮನೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.

15 ವರ್ಷಗಳ ಬಳಿಕ ವಿಯೆಟ್ನಾಂಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿ ಅವರದ್ದಾಗಿದೆ. ಭಾರತದ ಶೇ.50ರಷ್ಟು ವ್ಯಾಪಾರ, ವಹಿವಾಟು ದಕ್ಷಿಣ ಚೀನಾ ಸಮುದ್ರದ ಮೂಲಕವೇ ನಡೆಯುತ್ತಿದೆ. ಮತ್ತೊಂದೆಡೆ ವಿಯೆಟ್ನಾಂ ಮತ್ತು ಚೀನಾಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸಲು ಅನೇಕ ವರ್ಷಗಳಿಂದ ಸಂಘರ್ಷ ನಡೆಸಿವೆ. ಈ ಸಮುದ್ರ ಹೈಡ್ರೋಕಾರ್ಬನ್‌ನಿಂದ ಸಂಪದ್ಭರಿತವಾಗಿದ್ದು ತಮ್ಮ ತಮ್ಮ ಪ್ರಾಬಲ್ಯ ಸ್ಥಾಪಿಸಲು ಉಭಯ ದೇಶಗಳು ಹೋರಾಡುತ್ತಿವೆ.