- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಂತಾರಾಜ್ಯ ಜಲವಿವಾದ ಇತ್ಯರ್ಥಕ್ಕೆ ಸಮಗ್ರ ಜಲನೀತಿ ಅಗತ್ಯ: ಐವನ್‌ ಡಿ.ಸೋಜಾ

ivan-dsouza [1]ಮಂಗಳೂರು: ಅಂತಾರಾಜ್ಯ ಜಲವಿವಾದಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾಷ್ಟ್ರದಲ್ಲಿ ನಿರ್ದಿಷ್ಟವಾದ ಜಲನೀತಿ ಇಲ್ಲ. ದೇಶಕ್ಕೆ ಒಂದು ಸಮಗ್ರವಾದ ಜಲನೀತಿಯ ಅಗತ್ಯವಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ. ಸೋಜಾ ಹೇಳಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀರಿನ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಜಲನೀತಿಯನ್ನು ಜಾರಿಗೊಳಿಸಬೇಕು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶವು ಕೇವಲ ಕಾನೂನಿನ ಪರಿಧಿಯಲ್ಲಿ ಆಗಿದೆ. ತೀರ್ಪು ವಸ್ತುಸ್ಥಿತಿಯ ಪ್ರತಿಫಲನವಲ್ಲ. ತಂತ್ರಜ್ಞರ ಸಮಿತಿ ಅಥವಾ ಉನ್ನತ ಸಮಿತಿಯ ತೀರ್ಮಾನದಂತೆ ನಿರ್ಧಾರ ತಳೆಯಬೇಕಾಗುತ್ತದೆ. ಮಾತುಕತೆಯ ಮೂಲಕ ಕಾವೇರಿ ಜಲ ವಿವಾದವನ್ನು ಇತ್ಯರ್ಥ ಪಡಿಸಬೇಕಿದೆ. ಅದಕ್ಕಾಗಿ ಪ್ರಧಾನಿಯವರು ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾವೇರಿ ತೀರ್ಪು ಕರ್ನಾಟಕಕ್ಕೆ ವಿರುದ್ಧವಾಗಿ ಬಂದಿರುವುದು ನೋವಿನ ಸಂಗತಿ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳು ಮತ್ತು ಸಂಚಿವ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂವಿಧಾನವನ್ನು ಎತ್ತಿಹಡಿಯುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಸಿಎಂ ಅವರನ್ನು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಐವನ್‌ ಅವರು ಮೂವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.3.75 ಲಕ್ಷ ಮೊತ್ತದ ಪರಿಹಾರದ ಚೆಕ್‌ ವಿತರಿಸಿದರು.