ಮಂಗಳೂರು: “ಮುಂಗಾರು ಮಳೆ 2′ ಚಿತ್ರದ ನಾಯಕಿ ಕರಾವಳಿಯ 19ರ ಹರೆಯದ ನೇಹಾ ಶೆಟ್ಟಿ. ಶನಿವಾರ ನಗರದ ಸಿನೆಪೊಲಿಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರವಿಚಂದ್ರನ್ ಅವರ ಎದುರುನಟಿಸಲು ನಿಜಕ್ಕೂ ನನಗೆ ನರ್ವಸ್ ಆಗಿತ್ತು. ಆದರೆ ಅವರು ನನ್ನ ಜತೆ ಅತ್ಯಂತ ವಿನಯ ಹಾಗೂ ಆತ್ಮೀಯತೆಯಿಂದ ಧೈರ್ಯ ತುಂಬುವ ಮೂಲಕ ಸ್ಫೂರ್ತಿ ನೀಡಿದರು. ಅವರ ಜತೆಗಿನ ನಟನೆ ಅದ್ಭುತ ಅನುಭವ ಎಂದರು.
ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರ ಬಿಡುಗಡೆಯಾದ ಸಂದರ್ಭ ನಾನು ಶಾಲೆಗೆ ಹೋಗುತ್ತಿದ್ದ ನೆನಪು. ಅದರ ಮೊಲ ನನಗೆ ತುಂಬಾ ಇಷ್ಟ. ವಿಶೇಷ ಅಂದರೆ ಅದೇ ಹೆಸರಿನ ಇನ್ನೊಂದು ಚಿತ್ರದಲ್ಲಿ ಇದೀಗ ನನಗೆ ಅವಕಾಶ ಸಿಕ್ಕಿದೆ. ಅದರ ಗೆಲುವಿನ ಮೂಲಕ ಬಹಳಷ್ಟು ಆಫರ್‌ಗಳನ್ನು ಪಡೆಯುತ್ತಿರುವುದು ತುಂಬಾ ಖುಷಿಯಾಗುತ್ತಿದೆ …
12ನೇ ತರಗತಿಯಲ್ಲಿರುವಾಗಲೇ ನನಗೆ ಸಿನೆಮಾದಲ್ಲಿ ನಟಿಸುವ ಅವಕಾಶ ದೊರೆಯಿತು. “ಮುಂಗಾರು ಮಳೆ’ಯಲ್ಲಿ ಮಳೆ ಹುಡುಗಿಗೆ ವಿಶೇಷ ಸ್ಥಾನವಿತ್ತು. ಅಂತಹುದೇ ಸ್ಥಾನವನ್ನು ಈ ಸಿನೆಮಾದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ನಾನು ಇತರರನ್ನು ನೋಡಿ ನಟನೆ ಕಲಿತಿದ್ದೇ ನೆಯೇ ಹೊರತು ತರಬೇತಿ ಪಡೆದಿಲ್ಲ.
ಮಾಡೆಲಿಂಗ್ ನನ್ನ ಹವ್ಯಾಸ. ಯಾವುದೇ ನಿರ್ದಿಷ್ಟ ಪಾತ್ರಗಳಲ್ಲಿ ಅಭಿನಯಿಸ ಬೇಕೆಂಬ ಹಂಬಲವಿಲ್ಲ. ಹೊಸಬಳಾಗಿರುವ ಕಾರಣ ಎಲ್ಲ ಪಾತ್ರಗಳನ್ನೂ ಮಾಡ ಬಯಸುತ್ತೇನೆ ಎಂದರು. ತುಳುಚಿತ್ರದಲ್ಲೂ ಅವಕಾಶ ಸಿಕ್ಕಿದರೆ ಅಭಿನಯಿಸಲಿದ್ದೇನೆ ಎಂದರು.
“ಚಂಡಿಕೋರಿ’ ಚಿತ್ರದ ನಿರ್ಮಾಪಕಿ ಶರ್ಮಿಳಾ ಡಿ ಕಾಪಿಕಾಡ್, ಸಿನೆಪೊಲಿಸ್‌ನ ಯೂನಿಟ್ ಹೆಡ್ ಕೀರ್ತನ್ ಶೆಟ್ಟಿ ಉಪಸ್ಥಿತರಿದ್ದರು. ಆರ್‌ಜೆ ಸುಹಾನ್ ನಿರೂಪಿಸಿದರು.
Click this button or press Ctrl+G to toggle between Kannada and English