- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸೆ. 30 ರ ವರೆಗೆ 6000 ಕ್ಯೂಸೆಕ್ ನೀರು: ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಉಗ್ರ ಪ್ರತಿಭಟನೆ

kaveri-protest [1]ಮೈಸೂರು: ಸೆ. 30 ರ ವರೆಗೆ ನಿತ್ಯ 6000 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಮಂಗಳವಾರ ನಗರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಿದವು.

ನಗರದ ನ್ಯಾಯಾಲಯದ ಎದುರು ಕನ್ನಡ ಚಳವಳಿಗಾರರ ಸಂಘದಿಂದ ಖಾಲಿ ತಟ್ಟೆ, ಪಾತ್ರೆ, ಲೋಟಗಳನ್ನಿಡಿದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಮ್ಮ ರಾಜ್ಯದ ಶತ್ರುವಿನಂತೆ ವರ್ತಿಸುತ್ತಿದ್ದಾರೆ.

ಕಾವೇರಿ ಭಾಗದ ಜಲಾಶಯಗಳಲ್ಲಿ ಕುಡಿಯಲು ನೀರಿಲ್ಲ. ಆದರೂ ಸುಪ್ರೀಂ ಕೋರ್ಟ್‌ ಮೂಲಕ ಸಾಂಬಾ ಬೆಳೆಗೆ ನೀರು ಕೇಳುತ್ತಿರುವುದು ಖಂಡನೀಯ. ಇಲ್ಲಿನ ಸ್ಥಿತಿಗತಿಗಳ ಅಧ್ಯಯನಕ್ಕೆ ತಮಿಳುನಾಡು ವಕೀಲರನ್ನೇ ಇಲ್ಲಿಗೆ ಕಳುಹಿಸಿ ಪರಿಶೀಲಿಸಿ ಎಂದು ಆಕ್ರೋಶ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ರಾಜ್ಯದ ಕಾವೇರಿ ಭಾಗದ ಜಲಾಶಯಗಳ ಬಗ್ಗೆ ಪರಿಶೀಲನೆ ನಡೆಸಲಿ. ಈ ಭಾಗದಲ್ಲಿ ಕುಡಿಯಲು ನೀರಿಲ್ಲದೇ ಬೆಳೆ ಬೆಳೆಯಲು ರೈತರು ಪರದಾಡುತ್ತಿದ್ದಾರೆ. ಜಾನುವಾರುಗಳು ನೀರಿಲ್ಲದೆ ಸೊರಗಿವೆ ಎಂದರು.