[1]ಮಂಗಳೂರು: ಅಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್ನಿಂದ ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ವಿದ್ಯಾರ್ಥಿ ಬೆಂಗಳೂರು ಮಾರ್ತಳ್ಳಿ ನಿವಾಸಿ ಭಾಸ್ಕರ್ ಎಂಬುವರ ಪುತ್ರ ರಿತಿಕ್(17)ಎಂದು ತಿಳಿದುಬಂದಿದೆ. ಈತ ಪುತ್ತಿಗೆಯ ಸಹ್ಯಾದ್ರಿ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ. ರಿತಿಕ್ ಬುಧವಾರ ಕಾಣೆಯಾಗಿದ್ದು, ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಬಾಲಣ್ಣ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಿತಿಕ್ ಹಾಸ್ಟೆಲ್ನಿಂದ ಹೊರಡುವ ಮುನ್ನ ಆಕಾಶ ನೀಲಿಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ದೃಢಕಾಯ ಶರೀರದ ರಿತಿಕ್ ಗೋಧಿ ಮೈಬಣ್ಣ ಹೊಂದಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.