ಮಂಗಳೂರು: ದೇಶಕ್ಕೆ ಸ್ವಾತಂತ್ರ ನಂತರ 1956ರಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸುವಾಗ ತುಳುಭಾಷಿಕ ಪ್ರದೇಶಗಳನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಹಂಚಿ ತುಳುವರ ನ್ಯಾಯಯುತವಾದ ಬೇಡಿಕೆಯನ್ನು ಕಡೆಗಣಿಸಲಾಯಿತು ಎಂದು ತುಳುನಾಡ್ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಶೈಲೇಶ್ ಆರ್. ಜೆ. ಆರೋಪಿಸಿದರು.
ತುಳು ಭಾಷೆಯನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳು ತುಳು ಭಾಷೆಗೆ ಎರಡನೇ ರಾಜ್ಯ ಭಾಷೆ ಸ್ಥಾನಮಾನವನ್ನು ನೀಡದೆ ವಂಚಿಸಿವೆ. ಇನ್ನು ತುಳುನಾಡಿನ ಜನರ ನಿರಂತರ ಹೋರಾಟವನ್ನು ಅಡಗಿಸುವ ಯತ್ನಗಳು ನಡೆಯುತ್ತಿವೆ. ಇದೀಗ ಎತ್ತಿನಹೊಳೆ ಯೋಜನೆಯ ಮುಖಾಂತರ ನೇತ್ರಾವತಿ ನದಿಯನ್ನು ಬಯಲು ಸೀಮೆಗೆ ತಿರುಗಿಸುವ ಪ್ರಯತ್ನದ ಅಂಗವಾಗಿ ತೀವ್ರಗತಿಯಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ.
ತುಳುನಾಡಿನ ಜೀವನದಿಯ ಕೂಗಿಗೆ ಸರ್ಕಾರಗಳು ಕಿವುಡಾಗಿವೆ. ತುಳುನಾಡಿನ ಜನರು ತಮ್ಮ ಅಸ್ತಿತ್ವಕ್ಕೆ ನೆಲ, ಜಲ, ಭಾಷೆಯ ಉಳಿವಿಗಾಗಿ ಅಂತಿಮ ಹೋರಾಟ ನಡೆಸಲೆಬೇಕಾದ ಅನಿವಾರ್ಯತೆ ಬಂದಿದೆ ಎಂದು ಹೇಳಿದರು.
ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ನಿರಂತರ ಹೋರಾಟಗಳನ್ನು ಸಂಘಟಿಸಿದರು. ತುಳುವರ ಬೇಡಿಕೆಯನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದರು.
Click this button or press Ctrl+G to toggle between Kannada and English