- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸುಬ್ರಹ್ಮಣ್ಯದಲ್ಲಿ ಉಚಿತವಾಗಿ ಊಟ ಮತ್ತು ಉಪಹಾರ ನೀಡಿದ ಹೋಟಲ್‌ಗಳು

Kukke [1]ಸುಬ್ರಹ್ಮಣ್ಯ: ಎಲ್ಲೆಡೆ 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆಗೆ ಸಂಕಷ್ಟ ಬಂದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಸಮಸ್ಯೆ ಕಂಡುಬರಲಿಲ್ಲ. ಭಕ್ತರಿಗೆ ಯಾವುದೇ ರೀತಿಯಿಂದಲೂ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಭಕ್ತಾದಿಗಳ ಸೇವಾ ರಶೀದಿಗಳಿಗೆ 500 ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸಿ ಸೇವೆಗಳ ರಶೀದಿ ನೀಡಲಾಯಿತು. ಈ ಮೂಲಕ ಭಕ್ತರಿಗೆ ಸೇವೆ ನೆರವೇರಿಸಲು ಶ್ರೀ ದೇವಳದ ಆಡಳಿತವು ವಿಶೇಷ ಅನುಕೂಲತೆ ಮಾಡಿಕೊಟ್ಟಿತು. ನ. 11ರವರೆಗೆ ಈ ನೋಟುಗಳು ಚಲಾವಣೆಯಲ್ಲಿರುವ ಕಾರಣ ಅದುವರೆಗೆ ಸ್ವೀಕರಿಸಿ ನಂತರ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಸ್ವಿಕರಿಸಲಾಗುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ಶ್ರೀ ದೇವಳದ ಆಡಳಿತ ಮಂಡಳಿ ಭಕ್ತರಲ್ಲಿ ವಿನಂತಿಸಿದೆ.

ಈ ಸೂಚನಾ ಫಲಕವನ್ನು ದೇವಳದ ಸೇವಾ ಕೌಂಟರ್‌ನಲ್ಲಿ ಮತ್ತು ದೇವಳದ ಸೂಚನಾ ಫಲಕದಲ್ಲಿ ಅಳವಡಿಸಲಾಗಿದೆ. ಕುಕ್ಕೆಯ ಕೆಲವು ಹೋಟೆಲ್‌‌ಗಳಲ್ಲಿ 500 ಮತ್ತು 1000 ರೂಪಾಯಿ ನೋಟುಗಳನ್ನು ಸ್ವೀಕರಿಸಿ, ಚಿಲ್ಲರೆ ನೀಡಲಾಗಿತ್ತು. ಅಲ್ಲದೆ ಕೆಲವೊಂದು ವೇಳೆ ಚಿಲ್ಲರೆ ಅಭಾವ ಬಂದಾಗ ಸುಬ್ರಹ್ಮಣ್ಯದ ಹೋಟಲ್‌‌ನಲ್ಲಿ ಉಚಿತವಾಗಿ ಊಟ ಮತ್ತು ಉಪಹಾರ ನೀಡಲಾಯಿತು. ಕೆಲವೊಂದು ಭಕ್ತರು ಹೋಟೆಲ್ ಮಾಲೀಕರ ಖಾತೆ ಸಂಖ್ಯೆಯನ್ನು ಪಡೆದುಕೊಂಡು ಬ್ಯಾಂಕ್‌ನಿಂದ ನೇರವಾಗಿ ಹಣ ಕಳುಹಿಸುವ ಭರವಸೆಯನ್ನು ನೀಡಿ ಉಪಹಾರ ಸೇವಿಸಿದರು.