ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲು ಶ್ರೀಲಂಕಾದ ಕ್ರೀಡಾಪಟುಗಳ ಆಗಮನ

2:09 PM, Thursday, November 24th, 2016
Share
1 Star2 Stars3 Stars4 Stars5 Stars
(No Ratings Yet)
Loading...

Sulya-kabaddi teamಸುಳ್ಯ: ತಾಲೂಕಿನ ಪಂಜದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲು ಶ್ರೀಲಂಕಾದ ಕ್ರೀಡಾಪಟುಗಳು ಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು.

ಇಲ್ಲಿಯ ರೇಸಾರ್ಟ್‌ವೊಂದಕ್ಕೆ ಆಗಮಿಸಿದ ಕ್ರೀಡಾಪಟುಗಳನ್ನು ಹಿರಿಯರ ಕ್ರೀಡಾ ಒಕ್ಕೂಟದ ಕಾರ್ಯದರ್ಶಿ ಜೆರಾಲ್ಡ್‌ .ಡಿ.ಸೋಜಾ ಮತ್ತು ಕ್ರೀಡಾಭಿವೃದ್ಧಿ ಸಮತಿಯ ಕೋಶಾಧಿಕಾರಿ ಡಾ. ಪ್ರಕಾಶ್‌ ಮತ್ತು ಶಶಿಧರ ಪಳಂಗಾವ್‌ ಸ್ವಾಗತಿಸಿದರು.

ಶ್ರೀಲಂಕಾದ ಮರ್ಕಂಟೈಲ್‍ ಅಥ್ಲೆಟಿಕ್ ಪೆಡರೇಷನ್‍ ಅಧ್ಯಕ್ಷ ಸಿಡ್ನಿ ಆಫ್‌ ನಾಯಕನ ನೇತೃತ್ವದಲ್ಲಿ ಸುಮಾರು 45ಕ್ಕೂ ಅಧಿಕ ಕ್ರೀಡಾಳುಗಳು ಗ್ರಾಮೀಣ ಪ್ರದೇಶಕ್ಕೆ ಆಗಮಿಸಿದ್ದಾರೆ. ಬಳಿಕ ಇವರು ಪಂಜದ ಕೋಟಿ ಚೆನ್ನಯ ಕ್ರೀಡಾಂಗಣಕ್ಕೆ ತೆರಳಿ ಕ್ರೀಡಾಂಗಣವನ್ನು ವೀಕ್ಷಿಸಿದರು.

ಹಿರಿಯ ಮಹಿಳಾ ಕ್ರೀಡಾಳುಗಳು ಸೇರಿದಂತೆ ಹಿರಿಯ ಪುರುಷ ಕ್ರೀಡಾಳುಗಳು ಆಗಮಿಸಿದ್ದಾರೆ. ಸುಮಾರು 35 ವರ್ಷ ಮೇಲ್ಪಟ್ಟವರಿಂದ 75 ವರ್ಷ ವಯಸ್ಸಿನ ಸ್ಪರ್ಧಾಳುಗಳು ಆಗಮಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English