- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನೇತ್ರಾವತಿಯನ್ನು ಉಳಿಸಲು ಸರ್ವ ಪ್ರಯತ್ನದ ಅಂಗವಾಗಿ ಡಿ. 10ರಿಂದ 12ರವರೆಗೆ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ :ವಿಜಯಕುಮಾರ್ ಶೆಟ್ಟಿ

NRSS [1]ಮಂಗಳೂರು: ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಮತ್ತೆ ಕಾವೇರಿದೆ. ಎಷ್ಟೇ ಮೊರೆ ಹೋದರೂ ಸರ್ಕಾರದ ಮನ ಕರಗುತ್ತಿಲ್ಲ. ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಉಳಿಸಲು ಮಾಡುತ್ತಿರುವ ಸರ್ವ ಪ್ರಯತ್ನದ ಅಂಗವಾಗಿ ಡಿ. 10ರಿಂದ 12ರವರೆಗೆ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎತ್ತಿನಹೊಳೆ ಸಂಯುಕ್ತ ಹೋರಾಟ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ವಿಜಯಕುಮಾರ್ ಶೆಟ್ಟಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಈ ರಥಯಾತ್ರೆ ನಡೆಯಲಿದೆ. ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರೆ ನದಿಯ ನೀರನ್ನು ಕಳಶಕ್ಕೆ ತುಂಬುವ ಮೂಲಕ ರಥಯಾತ್ರೆ ಚಾಲನೆಗೊಳ್ಳಲಿದೆ.

ಸಪ್ತಕ್ಷೇತ್ರಗಳಾದ ಧರ್ಮಸ್ಥಳ ಕ್ಷೇತ್ರ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು, ಕಟೀಲು ಮೂಲಕ ಸಾಗಲಿದೆ. ಈ ಹಾದಿಯಲ್ಲಿ ಸಾಗುವಾಗ ಉಳಿದ ನದಿಗಳಾದ ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿ ನೀರಿನ ಜೊತೆಗೆ ನಂದಿನಿ ನದಿಯ ಕಳಶಕ್ಕೆ ತುಂಬವ ಮೂಲಕ ಸಮಾಪ್ತಿಗೊಳಿಸಲಾಗುವುದು.

NRSS [2]ಹೋರಾಟಗಾರ ಕಿಶೋರ್ ಸಕಲೇಶಪುರ ಎತ್ತಿನಹೊಳೆಯ ನೀರನ್ನೂ ಕಳಶಕ್ಕೆ ತುಂಬಲಿದ್ದಾರೆ. ಹಾದಿಯಲ್ಲಿ ಸಿಗುವ ಮಸೀದಿ ಖಾಝಿಗಳು ಹಾಗೂ ಚರ್ಚ್‌ ಧರ್ಮಗುರುಗಳು ಮೆರವಣಿಗೆಯನ್ನು ಸ್ವಾಗತಿಸಲಿದ್ದಾರೆ. ಜಿಲ್ಲೆಯನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷಾತೀತ, ಧಮರ್ಾತೀತ ಹೋರಾಟ ಇದಾಗಲಿದೆ ಎಂದರು.

NRSS [3]