ನೇತ್ರಾವತಿ ನದಿಯ ಜೊತೆಗೆ ಅಸಭ್ಯ ವರ್ತನೆಗೆ ಅವಕಾಶ ಇಲ್ಲ: ಅನಿಲ್ ಮಾದವ್ ದಾವೆ

4:56 PM, Friday, December 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Alwasಮೂಡುಬಿದಿರೆ: ನೇತ್ರಾವತಿ ಈ ಭಾಗದ ಜನರ ಜೀವನದಿ. ನದಿತಿರುವು ಯೋಜನೆ ಮೂಲಕ ನೇತ್ರಾವತಿ ನದಿಯ ಜೊತೆಗಿನ ಯಾವುದೇ ಅಸಭ್ಯ ವರ್ತನೆಗೆ ನಾನು ಸಮ್ಮತಿ ನೀಡುವುದಿಲ್ಲ. ಎಲ್ಲರಿಗೂ ನೀರು ಬೇಕು. ಆದರೆ ಆ ನೀರಿನ ಮೂಲ ಯಾವುದು ಎಂಬುದನ್ನು ಯಾರೂ ಯೋಚನೆ ಮಾಡುವುದಿಲ್ಲ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರಖಾತೆ ಸಚಿವ ಅನಿಲ್ ಮಾದವ್ ದಾವೆ ತಿಳಿಸಿದರು.

ಅವರು ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ- 2016ರ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಶ್ಚಿಮ ಘಟ್ಟ, ಹಿಮಾಲಯ ಹಾಗೂ ಈಶಾನ್ಯ ಭಾಗಗಳು ದೇಶದ ಶ್ವಾಸಕೋಶವಿದ್ದಂತೆ ಅಭಿವೃದ್ಧಿಯು ಹೆಸರಿನಲ್ಲಿ ಈ ಸಂಪನ್ಮೂಲಗಳನ್ನು ಕಳೆದುಕೊಳ್ಳುವಂತಹ ಅವಿವೇಕ ಯೋಜನೆಗಳನ್ನು ಜಾರಿಗೆ ತರುವುದಿಲ್ಲ. ಅಭಿವೃದ್ಧಿ ಹಾಗೂ ಪರಿಸರ ಜೊತೆಯಾಗಿ ಸಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.

ಪರಿಸರ ಹಾಗೂ ನೀರಿನ ಸಂರಕ್ಷಣೆ ಅತ್ಯಗತ್ಯ ಎಂದ ಅವರು, ನೋಟಿನ ಅಭಾವದಿಂದಾಗಿ ಒಂದು ದಿನ ಎಟಿಎಂ ಎದುರು ಸರತಿಸಾಲಿನಲ್ಲಿ ನಿಂತರೆ ಟೀಕಿಸುವ ಸಮಾಜಕ್ಕೆ ಭವಿಷ್ಯದಲ್ಲಿ ಕುಡಿಯಲು ನೀರೇ ಇಲ್ಲದಿದ್ದರೆ ಏನಾಗಬಹುದು? ಎಂದು ಪ್ರಶ್ನಿಸಿದ ಸಚಿವ, ಇಂದು ಬಾಟಲಿಯಲ್ಲಿ ನೀರುಹಿಡಿದು ಸಾಗುವ ನಾವು ಮುಂದೊಂದು ದಿನ ಆಮ್ಲಜನಕವನ್ನೂ ಹಿಡಿಕೊಂಡುಹೋಗುವ ಪರಿಸ್ಥಿತಿ ಉಂಟಾಗಬಹುದು ಎಂದರು.

Alwasಪರಿಸರ ಸಂರಕ್ಷಣೆ ಕುರಿತು ಕೇವಲ ಸೆಮಿನಾರ್, ಕಾರ್ಯಾಗಾರಗಳಲ್ಲಿ ಚರ್ಚೆಮಾಡುವುದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು. ಕೇವಲ ಚರ್ಚೆಮಾಡಿ, ಇನ್ನೊಬ್ಬರಿಗೆ ಸಲಹೆಸೂಚನೆ ನೀಡುವ ಬದಲು ನಮ್ಮ ಸುತ್ತಮುತ್ತ ಇರುವ ಕೆರೆಕೊಳ್ಳಗಳನ್ನು ನೀರಿನ ಸೆಲೆಗಳಾಗಿ ಪರಿವರ್ತಿಸುವ ಕಾರ್ಯವನ್ನು ಮಾಡಬೇಕು. ಇದಕ್ಕಾಗಿ ಬೃಹತ್‌ಯೋಜನೆಗಳನ್ನು ಅಥವಾ ಸಮಾಜಸೇವಾ ಸಂಘ ಕಟ್ಟಬೇಕಾಗಿಲ್ಲ ಎಂದರು.

ನೀರು, ಕೆರೆ, ಸರೋವರಗಳನ್ನು ಸಂರಕ್ಷಿಸಬೇಕಾದರೆ ಮೊದಲು ವೈಯುಕ್ತಿಕ ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಳ್ಳುವುದು ಅಗತ್ಯ. ತಟ್ಟೆಯಲ್ಲಿರುವ ಆಹಾರವನ್ನು ವ್ಯರ್ಥ ಮಾಡದೆ, ಕುಡಿಯುವ ನೀರನ್ನು ಜೋಪಾನವಾಗಿ ಉಪಯೋಗಿವುದೇ ನೀರಿನ ಸಂರಕ್ಷಣೆಯ ಮೊದಲಹೆಜ್ಜೆ ಎಂದರು.
ಕಾರ್ಯಕ್ರಮದಲಿ ’ಸಹ್ಯಾದ್ರಿ ಇ ನ್ಯೂಸ್‌ನ’ ಐವತ್ತಾರು ಸಂಚಿಕೆಗಳ ಸಂಗ್ರಹ ಹಾಗೂ ಐಐಎಸ್‌ಸಿಯ ಸಂಶೋಧನಾ ವರದಿಯ ಪೋಟೋ ಮ್ಯಾಗಸೀನ್ ಅನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವವಹಿಸಿದ್ದರು. ಸಂಸದ ನಳೀನ್‌ಕುಮಾರ್ ಕಟೀಲ್, ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ- 2016 ರ ಅಧ್ಯಕ್ಷ ಡಾ.ಟಿ.ವಿ.ರಾಮಚಂದ್ರ. ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಾ. ಎಂ.ಡಿ.ಸುಭಾಷ್‌ಚಂದ್ರ, ಡಾ.ಹರೀಶ್‌ಭಟ್, ಲೇಕ್ 2016ರ ಸಂಯೋಜಕ ಡಾ.ರಾಜೇಶ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿ, ಪ್ರೊ.ದೀಪಾ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು.

alwas-3

alwas-4

Alwas

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English