ಮಂಜೇಶ್ವರ: ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಗಳವರ ನಿವಾಸವನ್ನು ಪುನರ್ ನವೀಕರಿಸಿ ಸಿದ್ದಗೊಳಿಸಲಾದ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಯೋಜನೆ ಜನವರಿ 19 ಕ್ಕೆ ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿರುವುದಾಗಿ ಸಂಬಂಧಪಟ್ಟವರು ಸೋಮವಾರ ಸಂಜೆ ಗೋವಿಂದ ಪೈ ನಿವಾಸದ ಆವರಣದಲ್ಲಿ ಕರೆದ ಸರ್ವ ಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.
ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಮತ್ತೆ ಕೈಗೆತ್ತಿಗೊಂಡು ಕನಸನ್ನು ಸಾಕಾರಗೊಳಿಸುವಲ್ಲಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ಸೇವೆ ಶ್ಲಾಘನೀಯವೆಂಬುದಾಗಿ ಸಭೆ ಅಭಿಪ್ರಾಯವಿತ್ತಿದೆ.
ಜನವರಿ 19 ರಂದು ಸಂಜೆ ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 3.30 ಕ್ಕೆ ಮಂಜೇಶ್ವರ ಚರ್ಚ್ ನ ಮುಂಬಾಗದಿಂದ ಚೆಂಡೆ ವಾದ್ಯಗಳೊಂದಿಗೆ ಕೇರಳ ಹಾಗು ಕರ್ನಾಟಕ ಮುಖ್ಯ ಮಂತ್ರಿಯವರನ್ನು ಗೋವಿಂದ ಪೈ ನಿವಾಸಕ್ಕೆ ಕರೆ ತರಲಾಗುವುದು. ಬಳಿಕ ಮುಖ್ಯ ದ್ವಾರದಲ್ಲಿ ಗಿಳಿವಿಂಡು ಯೋಜನೆಯನ್ನು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ.
ಬಳಿಕ ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಗೋವಿಂದ ಪೈ ಭವನಿಕ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಕವಿ ನಿಲಯವನ್ನು ಕೇರಳ ಸಂಸ್ಕೃತಿ ಸಚಿವ ಬಾಲನ್ ಉದ್ಘಾಟಿಸಲಿದ್ದಾರೆ. ಜೊತೆಗೆ ಗೋವಿಂದ ಪೈಯವರ ಪ್ರತಿಮೆಯನ್ನು ಕರ್ನಾಟಕ ಸಂಸ್ಕೃತಿ ಸಚಿವೆ ಹಾಗು ಖ್ಯಾತ ಚಿತ್ರನಟಿ ಉಮಾಶ್ರೀ ಅನಾವರಣಗೊಳಿಸಲಿದ್ದಾರೆ. ಬಳಿಕ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸಮರ ಕಲೆ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ಜಿಲ್ಲೆಯ ಐದು ಶಾಸಕರು, ಸಂಸದ ಪಿ ಕರುಣಾಕರನ್ ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು, ಜಿಲ್ಲಾ ಪಂ.,ಬ್ಲಾಕ್ ಪಂ. ಗ್ರಾ. ಪಂ. ಅಧ್ಯಕ್ಷರುಗಳು ಸಹಿತ ಕರ್ನಾಟಕ ಕೇರಳದ ಹಲವು ಗಣ್ಯರು ಉಪಸ್ಥಿತರಿರುವರೆಂದು ಸಭೆಯಲ್ಲಿ ತಿಳಿಸಿದ್ದಾರೆ.
ಗೋವಿಂದ ಪೈ ನಿವಾಸದಲ್ಲಿ ಸೋಮವಾರ ಸಂಜೆ ಸೇರಿದ ಸಭೆಯಲ್ಲಿ ಡೆಪ್ಯುಟಿ ಕಲಕ್ಟರ್ ದೇವದಾಸ್, ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್, ತೇಜೋಮಯ, ಬಿ ವಿ ರಾಜನ್, ಹರಿಶ್ಚಂದ್ರ ಮಂಜೇಶ್ವರ, ಶುಭಾಷ್ ಚಂದ್ರ, ಪಿ ವಿ ಶಶಿಕಲ, ತಹಶೀಲ್ದಾರ್ ಶಶಿಧರ್ ಶೆಟ್ಟಿ, ಬ್ಲಾಕ್ ಕಾರ್ಯದರ್ಶಿ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು. ಕೆ ಆರ್ ಜಯಾನಂದ ಸ್ವಾಗತಿಸಿ ಶುಭಾಷ್ ಚಂದ್ರ ವಂದಿಸಿದರು. ಸಭೆಯಲ್ಲಿ ವಿವಿಧ ಪಕ್ಷಗಳ ಹಲವಾರು ಮಂದಿ ಪಾಲ್ಗೊಂಡರು.
Click this button or press Ctrl+G to toggle between Kannada and English