- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಗದು ರಹಿತ ವ್ಯವಹಾರ ಮಂಗಳೂರಿನ ವಿಶ್ವನಾಥ ಪ್ರಭು ಅವರಿಗೆ ಬಹುಮಾನ

vishwanath prabhu [1]ಮಂಗಳೂರು: ನಗದು ರಹಿತ ವ್ಯವಹಾರ ನಡೆಸಿದ್ದಕ್ಕೆ ಕೇಂದ್ರ ಸರಕಾರದ `ಲಕ್ಕಿ ಗ್ರಾಹಕ ಯೋಜನೆ’ಯಡಿ ಉರ್ವದ ವಿಶ್ವನಾಥ ಪ್ರಭು ಅವರಿಗೆ ಸಾವಿರ ರೂ. ಬಹುಮಾನ ಲಭಿಸಿದೆ.

ಡಿ. 31ರಂದು ನಗರದ ಕೆಎಂಸಿ ಆಸ್ಪತ್ರೆಯ ಮೆಡಿಕಲ್‍ನಲ್ಲಿ ತಾಯಿಗಾಗಿ 1000 ರೂ.ಗಳ ಔಷಧಿಯನ್ನು ರೂಪೇ ಕಾರ್ಡ್ ಮೂಲಕ ಸ್ವೈಪ್ ಮಾಡಿ ಖರೀದಿಸಿದ್ದರು. ಜ. 2ರಂದು ವಿಶ್ವನಾಥ್ ಬ್ಯಾಂಕ್ ಖಾತೆಗೆ 1000 ರೂ. ಜಮಾ ಆಗಿದೆ. ಲಕ್ಕಿ ಗ್ರಾಹಕ ಯೋಜನೆಗೆ ಆಯ್ಕೆಯಾಗಿರುವ ಬಗ್ಗೆ ಅವರ ಮೊಬೈಲ್‍ಗೆ ಸಂದೇಶ ಕೂಡಾ ಬಂದಿದೆ.

ಸಣ್ಣ ಮೊತ್ತದ ವ್ಯವಹಾರವನ್ನೂ ನಗದು ರಹಿತ ಅಂದರೆ ಕಾರ್ಡ್ ಮೂಲಕ ನಡೆಸುವ ಅದೃಷ್ಟಶಾಲಿ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಬಹುಮಾನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ಪ್ರತಿದಿನ ಮತ್ತು ವಾರಕ್ಕೊಮ್ಮೆ ಮೆಗಾ ಡ್ರಾದಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದೀಗ ವಿಶ್ವನಾಥ್ ಪ್ರಭು ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ.

ಅಂಬೇಡ್ಕರ್ ಜಯಂತಿಯಾದ ಏ. 14ರಂದು ಮೆಗಾ ಡ್ರಾ ನಡೆಯಲಿದ್ದು, 1 ಕೋಟಿ ರೂ. ಮೊದಲ ಬಹುಮಾನ, 50 ಲಕ್ಷ ರೂ. ದ್ವಿತೀಯ ಬಹುಮಾನ, 25 ಲಕ್ಷ ರೂ. ತೃತೀಯ ಬಹುಮಾನ ನೀಡಲಾಗುತ್ತದೆ. ವ್ಯಾಪಾರಿಗಳಿಗಾಗಿ ಡಿಜಿ ಧನ ವ್ಯಾಪಾರಿ ಯೋಜನೆ ಇದ್ದು, ಇದರಡಿ ಪ್ರತಿ ವಾರ 7 ಸಾವಿರ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಅವರಿಗೆ ತಲಾ 50 ಸಾವಿರ ರೂ. ನೀಡಲಾಗುತ್ತದೆ.