ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಸಮಾರೋಪ

8:52 PM, Wednesday, February 1st, 2017
Share
1 Star2 Stars3 Stars4 Stars5 Stars
(No Ratings Yet)
Loading...

palapushpa ಮಂಗಳೂರು :  ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವು ಜ. 26 ರಿಂದ 29 ರವರೆಗೆ ಸುಗಮವಾಗಿ ನಡೆಯಿತು.

ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ವಾರ್ತಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಆಯುಷ್ ಇಲಾಖೆ, ವಿವಿಧ ಯಂತ್ರೋಪಕರಣ ಕಂಪನಿಯ ಡೀಲರ್‍ಗಳು, ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘಟಣೆಯ ಮಳಿಗೆಗಳು ಮೆರಗು ನೀಡಿದವು. ಡಚ್ ಗುಲಾಬಿ ಹಾಗೂ ಇತರೆ ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ “ತುಳುನಾಡು ರಾಣಿ ಅಬ್ಬಕ್ಕ”ನ ಪ್ರತಿಮೆ ಹಾಗೂ ಡೈರಿ ಡೇ ಐಸ್‍ಕ್ರಿಮ್ ಸಂಸ್ಥೆಯ ಪ್ರಾಯೋಜಕತ್ವದ ವಿವಿಧ ಹೂ ವಿನ್ಯಾಸದ ಸಮುದ್ರ ಮೀನು ಹಾಗೂ ಇತರೆ ಆಕೃತಿಗಳು ನೋಡುಗರ ಮನ ಸೆಳೆದು ಮೆಚ್ಚುಗೆ ಪಡೆಯಿತು.

ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭವನ್ನು ಜ. 29 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಪೋರೇಟರ್ ರೂಪ ಡಿ ಬಂಗೇರ, ಮಂಗಳೂರು ಮಹಾನಗರಪಾಲಿಕೆ ಆಯುಕ್ತರು, ಮೊಹಮ್ಮದ್ ನಝೀರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶ್ರೀಕಾಂತ್‍ಹಾಗೂ ಸಿರಿ ತೋಟಗಾರಿಕೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ತೋಟಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು. ಮಂಗಳೂರು ತಾಲೂಕಿನ ಲೋಲಾಕ್ಷಿ, ದಯಾನಂದ ಕುಲಾಲ್, ವಾಮನ ಸಿ ನಾಯಕ್, ಬಂಟ್ವಾಳ ತಾಲೂಕಿನ ಕುಸುಮ ವಿ ಶೆಟ್ಟಿ, ಪರಮೇಶ್ವರ ನಾಯ್ಕ, ರಾಘವೇಂದ್ರ ಭಟ್, ಪುತ್ತೂರು ತಾಲೂಕಿನ ಗಂಗಾಧರ, ಲಕ್ಷ್ಮಣ ಗೌಡ , ಬೆಳ್ತಂಗಡಿ ತಾಲೂಕಿನ ಜಯಶ್ರೀ, ದೇಜು ನಾಯ್ಕ, ಮೊಡೆಂಕಿಲ, ಸುಳ್ಯ ತಾಲೂಕಿನ ರಾಮಣ್ಣ ನಾಯ್ಕ, ವೀಣಾ ಕಿರಣ್ ರೈ, ತಮ್ಮಪ್ಪ ಗೌಡ ಇವರುಗಳಿಗೆ ಪ್ರಗತಿಪರ ರೈತರೆಂದು ಗುರುತಿಸಿಕೊಂಡಿರುತ್ತಾರೆ. ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ತೋಟಗಾರಿಕೆ ಉಪನಿರ್ದೇಶಕ ಯೋಗೇಶ್ ಹೆಚ್.ಆರ್. ಸ್ವಾಗತಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English