- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಂಕನಾಡಿ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಯುವಕರ ಶವ ಪತ್ತೆ

kankanady ಮಂಗಳೂರು: ನಗರದ ಕಂಕನಾಡಿ ಬೈಪಾಸ್ ನಲ್ಲಿನ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಸುಮಾರು 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ಪುರುಷರ ಮೃತದೇಹ ಭಾಗಶ: ಕೊಳೆತ ಸ್ಥಿತಿಯಲ್ಲಿ ಬುಧವಾರದಂದು ಪತ್ತೆಯಾಗಿವೆ.

ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಇನ್ನು ತಿಳಿದು ಬಂದಿಲ್ಲ. ಕಟ್ಟಡದ ಆರನೇ ಮಹಡಿಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿವೆ.

ಶವದ ಬಳಿ ಮರದ ದೊಣ್ಣೆಗಳೂ ಪತ್ತೆಯಾಗಿವೆ. ಕಟ್ಟಡದ ಕಾಮಗಾರಿ ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದೆ. ಸ್ಥಳಕ್ಕೆ ಆಗಮಿಸಿರುವ ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

kankanady

kankanady

kankanady