ಮಂಗಳೂರು: ಕೇಂದ್ರ ಸರಕಾರಿ ಟೋಲ್‌ಗಳೆಂದು ಪರಿಗಣಿತ ಸುರತ್ಕಲ್‌ನ ಎನ್‌ಐಟಿಕೆ ಹಾಗೂ ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ ಮುಂದಿನ ಆರು ತಿಂಗಳ ಒಳಗೆ ಸಂಪೂರ್ಣ ಸ್ಥಗಿತವಾಗಲಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಎನ್‌ಐಟಿಕೆ ಟೋಲ್ ಹೆಜಮಾಡಿಗೆ ಸ್ಥಳಾಂತರವಾಗಧಿಲಿದೆಯೇ ಎಂಬ ಬಗ್ಗೆ ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಅವರಲ್ಲಿ ಮಾಹಿತಿ ಪಡೆದು ಮಾತನಾಡಿದ ಸಂಸದ ನಳಿನ್ ಕುಮಾರ್, ಸರಕಾರಿ ಟೋಲ್‌ಗಳಾಗಿರುವ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ಟೋಲನ್ನು ಮುಂದಿನ 6 ತಿಂಗಳೊಳಗೆ ಪೂರ್ಣ ಸ್ಥಗಿತ ಮಾಡಲಾಗುತ್ತದೆ. ದೇಶದಲ್ಲಿ ಸರಕಾರಿ ಟೋಲ್‌ಗಳು ಇರದಂತೆ ನೋಡಿಕೊಳ್ಳುವ ಕೇಂದ್ರ ಮೋಟಾರು ಕಾಯ್ದೆಯನ್ವಯ ಈ ಎರಡು ಟೋಲ್‌ಗಳು ಸ್ಥಗಿತಗೊಳ್ಳಲಿವೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ ಎಂದರು.
ರಾ.ಹೆ. 75ರಲ್ಲಿ (ಹಿಂದಿನ ರಾ.ಹೆ. 48)ಬಿ. ಮೂಡ ಗ್ರಾಮದ ಬ್ರಹ್ಮರಕೂಟ್ಲು ಟೋಲ್‌ಗೇಟ್ ಹಾಗೂ ಮಂಗಳೂರು-ಉಡುಪಿ ರಾ.ಹೆ. 66 (ಹಳೆಯ ರಾ.ಹೆ. 17)ರ ಸುರತ್ಕಲ್ ಎನ್‌ಐಟಿಕೆ ಬಳಿಯ ಟೋಲ್ ಕರಾವಳಿ ಭಾಗದಲ್ಲಿ ಭಾರೀ ವಿರೋಧ ಎದುರಿಧಿಸುತ್ತಾ ಆರಂಭವಾದ ಕೇಂದ್ರಗಳು. ವಿವಿಧ ಕಾರಣಗಳಿಂದ ಈ ಎರಡೂ ಟೋಲ್‌ಗಳು ರಾಜ್ಯಾದ್ಯಂತ ಸುದ್ದಿಗೂ ಗ್ರಾಸವಾಗಿದ್ದವು.
Click this button or press Ctrl+G to toggle between Kannada and English