ಮಂಗಳೂರು: ಕುಡಿದ ಮತ್ತಿನಲ್ಲಿದ್ದ ಗೆಳೆಯರ ಗುಂಪೊಂದು ತಮ್ಮ ಸ್ನೇಹಿತನನ್ನೇ ಕತ್ತಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ.
ಪ್ರತಾಪ್ ಕೊಲೆಯಾದವ. ಘಟನೆಯ ನಂತರ ಆರೋಪಿಗಳಾದ ಸಾಗರ್, ದಿನೇಶ್, ಮಿಥುನ್ ಪರಾರಿಯಾಗಿದ್ದಾರೆ. ಇವರು ಗಾಂಜಾ ವ್ಯಾಪಾರದಲ್ಲಿ ತೊಡಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English