- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

“ಅಪರಾದ, ವ್ಯಸನ ಮುಕ್ತ ಸಮಾಜಕ್ಕೆ ಯುವ ಸಮೂಹ ಮುಂದಾಗಬೇಕು’’

youth awareness ಮ೦ಗಳೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಭಾರತೀಯ ಯುವ ರೆಡ್‌ಕ್ರಾಸ್ ಮತ್ತು ರೇಂಜರ‍್ಸ್-ರೋವರ‍್ಸ್ ಹಾಗೂ ಬಂದರು ಪೊಲೀಸ್ ಠಾಣೆ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಯುವ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮ’ವು ಶನಿವಾರ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮದನ್, ಪೊಲೀಸ್ ಆರಕ್ಷಕ ಉಪನಿರೀಕ್ಷಕರು, ಬಂದರು ಪೊಲೀಸ್ ಠಾಣೆ, ಮಂಗಳೂರು ಇವರು ಆಗಮಿಸಿದ್ದು, ಪ್ರಸ್ತುತ ಯುವ ಸಮುದಾಯದಲ್ಲಿರುವ ಸಮಸ್ಯೆಗಳಲ್ಲಿ ಒಂದಾಗಿರುವ ಅಪರಾದ ಸಂಚಿನ ಮನೋಭಾವನೆ, ಮಾದಕದ್ರವ್ಯ ವ್ಯಸನ, ಅದರಲ್ಲೂ ಅಮಲು ಪದಾರ್ಥ ಸೇವನೆಯ ದುಷ್ಪರಿಣಾಮ ಮತ್ತು ಇನ್ನಿತರ ಸಮಸ್ಯೆಗಳಾದ ಅಂತರ್ಜಾಲ ಮೋಸ, ವಂಚನೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆವ್ಬಾರ್ ಸಿ. ಇವರು ವಹಿಸಿದರು. ಕಾಲೇಜಿನ ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ. ಶಿವರಾಮ ಪಿ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ನಾಗಪ್ಪ ಗೌಡ, ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ನವೀನ್, ರೆಡ್‌ಕ್ರಾಸ್ ಯೋಜನಾಧಿಕಾರಿ ಪ್ರೊ. ಮಹೇಶ್ ಕೆ.ಬಿ., ವೇದಿಕೆಯಲ್ಲಿದ್ದು, ಪ್ರೊ. ರವಿಕುಮಾರ ಎಂ.ಪಿ. ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಡಾ. ಪ್ರಕಾಶಚಂದ್ರ ಶಿಶಿಲ ಇವರು ಕಾರ್ಯಕ್ರಮವನ್ನು ರೂಪಿಸಿದ್ದರು.