- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಕೋಟ್ಯಾಂತರ ರೂಪಾಯಿಗಳ ಅನುದಾನ ಖಂಡನೀಯ : ಹಿಂದೂ ಜನಜಾಗೃತಿ ಸಮಿತಿ

HJJSಮಂಗಳೂರು :  ಈ ಬಾರಿ ರಾಜ್ಯ ಸರಕಾರವು ಬಜೆಟ್ ನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರಿಗೆ ಅನುದಾನವಾಗಿ ನೀಡಿದೆ. ಹಜ್ ಭವನಕ್ಕೆ 10 ಕೋಟಿ, ಪ್ರತಿತಾಲೂಕಿನಲ್ಲಿ ಶಾದಿಮಹಲ್, ವಿದೇಶದಿಂದ ಬರುವ ಅಲ್ಪಸಂಖ್ಯಾತರಿಗೆ ಸಹಾಯಧನ ಇತ್ಯಾದಿ ಹೀಗೆ ಕೋಟ್ಯಾಂತರ ರೂಗಳ ಹಲವು ಯೋಜನೆಗಳನ್ನು ಅವರಿಗೆ ಪ್ರಕಟಿಸಿದೆ. ಆದರೆ ಬಹುಸಂಖ್ಯಾತ ಹಿಂದೂ ಸಮುದಾಯಕ್ಕೆ, ಹಿಂದೂ ಭವನ, ದೇವಸ್ಥಾನಗಳಿಗೆ ನಯಾ ಪೈಸಾ ನೀಡಲಿಲ್ಲ. ರಾಜ್ಯದ ಬೊಕ್ಕಸದ ಹಣವನ್ನು ಮತಬ್ಯಾಂಕ್ ಗಟ್ಟಿ ಮಾಡಲು ಒಂದೇ ಸಮುದಾಯಕ್ಕೆ ಬಳಸುವುದು ಅನ್ಯ ಬಹುಸಂಖ್ಯಾತ ಸಮುದಾಯದ ಮೇಲೆ ಮಾಡಿದ ಅನ್ಯಾಯವಾಗಿದೆ ಮತ್ತು ಸಂವಿಧಾನಬಾಹಿರವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಇದನ್ನು ತೀವ್ರವಾಗಿ ಖಂಡಿಸುತ್ತದೆ.

ಬೆಂಗಳೂರಿನ ಹಾರೋಹಳ್ಳಿಯಲ್ಲಿ ಕಸಾಯಿಖಾನೆಯನ್ನು ಕೂಡಲೇ ಸ್ಥಗಿತಗೊಳಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕನಕಪುರ ರಸ್ತೆಯ, ಹಾರೋಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಪ್ರತಿದಿನ ಸಾವಿರಾರು ಹಸುಗಳ ಹತ್ಯೆ ಮಾಡುವ ಹೈಟೆಕ್ ಕಸಾಯಿಖಾನೆಯನ್ನು 36  ಎಕರೆ ಜಮೀನಿನಲ್ಲಿ ಸ್ಥಾಪಿಸುತ್ತಿದೆ. ಇಂದು ರಾಜ್ಯದಲ್ಲಿ ಬರಗಾಲದಿಂದಾಗಿ ಮೇವು ಇಲ್ಲದೇ ಹಸುಗಳು ಪ್ರಾಣ ಬಿಡುತ್ತಿವೆ. ಇಂದು ಯಥೇಚ್ಚವಾಗಿ ಅನಧಿಕೃತವಾಗಿ ಗೋವುಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಈ ಹೈಟೆಕ್ ಕಸಾಯಿಖಾನೆಯು ನಿರ್ಮಾಣ ಮಾಡುವುದು ಗೋಸಂತತಿ ನಾಶವಾಗುವ ಆತಂಕ ಎದುರಾಗಿದೆ. ಇದರಿಂದ ದೇಶಿಯ ತಳಿಯ ವಿನಾಶದ ಭಯಾನಕತೆ ಸಮಸ್ಯೆ ಮುಂದೆ ಎದುರಾಗಲಿದೆ ಮತ್ತು ಅದು ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ. ಅದಕ್ಕೆ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸುತ್ತೇವೆ.

ಪಿಎಚ್‌ಡಿ ಮತ್ತು ಎಂಫಿಲ್ ಅಧ್ಯಯನ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ಶಿಷ್ಯ ವೇತನವನ್ನು ರದ್ದುಗೊಳಿಸುವ ಬಗ್ಗೆ.
ಕರ್ನಾಟಕ ರಾಜ್ಯ ಸರಕಾರವು ಅಲ್ಪಸಂಖ್ಯಾತ ವಿಷಯದ ಮೇಲೆ ಪಿಎಚ್‌ಡಿ, ಎಂಫಿಲ್ ಅಧ್ಯಯನ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಫೆಲೋಶಿಫ್ ನೀಡಲು ನಿಶ್ಚಯಿಸಿದೆ. ಇದರ ಅಂತರ್ಗತ ರಾಜ್ಯಸರಕಾರವು ಸ್ನಾತಕೋತ್ತರ ಪದವಿ ಬಳಿಕ ಜೂನಿಯರ್ ರೀಸರ್ಚ ಫೆಲೋಶಿಫ್ ಮಾದರಿಯಲ್ಲಿ ಪಿಎಚ್‌ಡಿ, ಎಂಫಿಲ್ ಅಧ್ಯಯನ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 25,000 ಮಾಸಿಕ ಶಿಷ್ಯ ವೇತನ ಮತ್ತು ವಾರ್ಷಿಕ ರೂ. 10,000 ನಿರ್ವಹಣ ವೆಚ್ಚ 2 ವರ್ಷದ ವರೆಗೆ ನೀಡಲು ನಿಶ್ಚಯಿಸಿದೆ. ಇದು ರಾಜ್ಯ ಸರಕಾರವು ಅಲ್ಪಸಂಖ್ಯಾತರನ್ನು ಓಲೈಸಲು ಬಹುಸಂಖ್ಯಾತ ಅನ್ಯ ಸಮುದಾಯದ ವಿದ್ಯಾರ್ಥಿಗಳ ಮೇಲೆ ಮಾಡಿದ ಘೋರ ಅನ್ಯಾಯವಾಗಿದೆ ಮತ್ತು ಸಂವಿಧಾನಬಾಹಿರವಾಗಿದೆ.

ಚಾಮರಾಜನಗರದ ಕೊಳ್ಳೆಗಾಲಿನ ಮಲೇಮಹಾದೇಶ್ವರ ಬೆಟ್ಟದಲ್ಲಿ ಹಸುಗಳು ಮೇಯುವ ಸರಿಸುಮಾರು 150  ಏಕರೆ ಜಮೀನಿನಲ್ಲಿ ಪರಿಸರ ಹಾನಿಯ ನೆಪದಲ್ಲಿ ಬೇಲಿ ಹಾಕಿದೆ. ಇದರಿಂದ 4000 ಹಸುಗಳಿಗೆ ಮೇವು ಇಲ್ಲದೇ, ಸಾಯುವ ಸ್ಥಿತಿಯಲ್ಲಿ ಇವೆ.

ಕೂಡಲೇ ಸರಕಾರವು ಬೇಲಿಯನ್ನು ತೆಗೆದು ಹಾಕಬೇಕು ಮತ್ತು ಗೋವುಗಳ ರಕ್ಷಣೆ ಮತ್ತು ಪಾಲನೆ ಮತ್ತು ಪೋಷಣೆಗೆ ಸಾಕಷ್ಟು ಆರ್ಥಿಕ ಮತ್ತು ಮೇವು ಒದಗಿಸುವ ಮೂಲಕ ಸಹಾಯವನ್ನು ರೈತರಿಗೆ ಮತ್ತು ಗೋಶಾಲೆಗಳಿಗೆ ನೀಡಬೇಕು. ಅಲ್ಲಲ್ಲಿ ಗೋಮಾಳಗಳನ್ನು ನಿರ್ಮಿಸಿ ಗೋಸಂತತಿಯ ಪಾಲನೆಗೆ ಗಮನ ನೀಡಬೇಕೆಂದು ಈ ಮೂಲಕ ಸಮಿತಿಯು ಆಗ್ರಹಿಸುತ್ತದೆ.