ಸೌತ್ ಕೆನರಾ ಬೀಡಿ ವರ್ಕ್ಸ್ ಫೆಡರೇಶನ್‌ನ 5ನೆ ದ.ಕ. ಜಿಲ್ಲಾ ಸಮಾವೇಶ

8:45 PM, Tuesday, June 6th, 2017
Share
1 Star2 Stars3 Stars4 Stars5 Stars
(No Ratings Yet)
Loading...

sk beedies ಮಂಗಳೂರು : ನಾಶದ ಅಂಚಿನಲ್ಲಿರುವ ಬೀಡಿ ಉದ್ಯಮಕ್ಕೆ ಬದಲಿ ವ್ಯವಸ್ಥೆಗಾಗಿ ಪ್ರಬಲ ಹೋರಾಟವನ್ನು ರೂಪಿಸುವ ಅಗತ್ಯವಿದೆ,  ಕಾರ್ಮಿಕ ಚಳವಳಿಗೆ ಶಕ್ತಿ ತುಂಬಿರುವ ಬೀಡಿ ಹೋರಾಟಗಾರರು ಇದೀಗ  ಕಷ್ಟದಲ್ಲಿದ್ದಾರೆ ಎಂದು ರೈತ ಹಾಗೂ ಕಾರ್ಮಿಕ ಮುಖಂಡ, ಸಿಪಿಎಂ ನೇತಾರ ಕೆ.ಆರ್. ಶ್ರೀಯಾನ್ ಕರೆ ನೀಡಿದ್ದಾರೆ.

ನಗರದ ಎನ್‌ಜಿಒ ಸಭಾಂಗಣದ ಪ್ರಸನ್ನ ಕುಮಾರ್ ವೇದಿಕೆಯಲ್ಲಿ ಸಿಐಟಿಯು ವತಿಯಿಂದ ಆಯೋಜಿಸಲಾದ ಸೌತ್ ಕೆನರಾ ಬೀಡಿ ವರ್ಕ್ಸ್ ಫೆಡರೇಶನ್‌ನ 5ನೆ ದ.ಕ. ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೀಡಿ ಉದ್ಯಮವನ್ನೇ ನಿಷೇಧಿಸುವ ಹುನ್ನಾರ ಸರಕಾರದಿಂದ ನಡೆಯುತ್ತಿದೆಯಾದರೂ ಸುಮಾರು 2 ಕೋಟಿಗೂ ಅಧಿಕ ಕಾರ್ಮಿಕರ ಬದುಕಿನ ಪ್ರಶ್ನೆಯಾಗಿರುವ ಬೀಡಿ ಉದ್ಯಮಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಸರಕಾರ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ನಮ್ಮ ಅನ್ನವನ್ನು ಕಿತ್ತುಕೊಳ್ಳುವ ಈ ಹುನ್ನಾರದ ವಿರುದ್ಧ ಹೋರಾಟವೊಂದೇ ಮಾರ್ಗ ಎಂದವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಧೂಮಪಾನ ಮಸೂದೆಗೆ ತಿದ್ದುಪಡಿ ತಂದು ಹಲವಾರು ಷರತ್ತುಗಳ ಮೂಲಕ ಬೀಡಿ ಕೈಗಾರಿಕೆಯ ನಾಶಕ್ಕೆ ಸ್ಲೋ ಪಾಯ್ಸನ್ ವ್ಯವಸ್ಥೆಯನ್ನು ಮಾಡಿದೆ. ದೇಶದಲ್ಲಿ ಸುಮಾರು 2 ಕೋಟಿಗೂ ಅಧಿಕ ಮಂದಿ ಬೀಡಿ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 65 ಲಕ್ಷ ಮಂದಿ ಬೀಡಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿಯೂ ಸುಮಾರು 6 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದಾರೆ ಎಂದವರು ಹೇಳಿದರು.

“ಮೇಕ್ ಇನ್ ಇಂಡಿಯಾ”ದ ಘೋಷಣೆಯೊಂದಿಗೆ ಪ್ರಧಾನಿ ಮೋದಿಯವರು ವಿದೇಶದ ಕಾರ್ಪೊರೇಟ್ ಸಂಸ್ಥೆಗಳಿಗೆ ಮಣೆ ಹಾಕುತ್ತಾರೆಯೇ ಹೊರತು ದೇಶದ ಕಾರ್ಮಿಕ, ಬಡ ರೈತ ಹಾಗೂ ಸಾಮಾನ್ಯ ಜನರ ಬಗ್ಗೆ ಕಾಳಜಿ ಅವರಿಗಿಲ್ಲ. 6000 ಕೋಟಿ ರೂ.ಗಳ ಕಾರ್ಮಿಕರ ಭವಿಷ್ಯನಿಧಿ ಹಣವನ್ನು ಶೇರು ಮಾರುಕಟ್ಟೆಗೆ ವಿನಿಮಯ ಮಾಡಿಕೊಳ್ಳುವ ತೀರ್ಮಾನವೂ ಕಾರ್ಮಿಕ ವಿರೋಧಿಯಾಗಿದೆ. ಇದೇ ವೇಳೆ ಸಂವಿಧಾನವನ್ನೇ ಮೊಟಕುಗೊಳಿಸುವ ಪ್ರಯತ್ನಗಳೂ ಸರಕಾರದಿಂದ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರು ತಮ್ಮ ಬದುಕಿನ ಹೋರಾಟದ ಜತೆಗೆ ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಉಳಿವಿನ ಬಗ್ಗೆಯೂ ಚರ್ಚೆ ಮಾಡುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ದೇಶ ಹಾಗೂ ರಾಜ್ಯವನ್ನು ಆಳುವ ಸರಕಾರಗಳು, ಕಾರ್ಮಿಕ ಹಾಗೂ ನೌಕರ ವಿಧಿಯಾಗಿ ವರ್ತಿಸುತ್ತಿವೆ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಯು.ಬಿ. ಲೋಕಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಬೀಡಿ ಫೆಡರೇಶನ್‌ನ ಮುಖಂಡರಾದ ರಮಣಿ, ಭಾರತಿ, ಬಾಬು ದೇವಾಡಿಗ, ಸಂಜೀವ ಬಂಗೇರ, ಸದಾಶಿವ ದಾಸ್ ಮೊದಲಾವರು ಉಪಸ್ಥಿತರಿದ್ದರು.

ಮನಪಾ ಮಾಜಿ ಸದಸ್ಯೆ, ಕಾರ್ಮಿಕ ನಾಯಕಿ ಜಯಂತಿ ಬಿ. ಶೆಟ್ಟಿ ಸ್ವಾಗತಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English